ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ಹಾಗಾದ್ರೆ ಇಂತಹ ಆಹಾರಗಳನ್ನು ಸೇವಿಸಿ.

ಆಧುನಿಕ ಜೀವನ ಶೈಲಿ ಹಾಗೂ ಜಂಕ್ ಫುಡ್ಗಳ ಸೇವನೆ ಮತ್ತು ವ್ಯಾಯಾಮದ ಕೊರತೆಯಿಂದ ಲೈಂಗಿಕ ಆಸಕ್ತಿ ಕುಂಠಿತವಾಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಇದರಿಂದ ಪುರುಷರು ನಿಮಿರುವಿಕೆ ತೊಂದರಗೆ ಹಾಗೂ ಶೀಘ್ರ ಸ್ಖಲನದಂತಹ ಸಮಸ್ಯೆಗೆ ಒಳಗಾಗುತ್ತಿದ್ದಾರೆ.

ಈ ಕಾರಣದಿಂದ ಹೆಚ್ಚಿನವರು ವಯಾಗ್ರಾದಂತಹ ಮಾತ್ರೆಗಳ ಮೊರೆ ಹೋಗುತ್ತಿದ್ದು, ಆದರೆ ಇಂತಹ ಮಾತ್ರೆಗಳ ಸೇವನೆಯಿಂದ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದಕ್ಕೆ ಪರಿಹಾರವಾಗಿ ಕೆಲ ಆಹಾರಗಳ ಸೇವನೆಯಿಂದ ಪುರುಷರ ಶ್ರೀಘ್ರ ಸ್ಖಲನದ ಸಮಸ್ಯೆಯನ್ನು ಹೋಗಲಾಡಿಸಬಹುದು. 

ಹಾಗೆಯೇ ವೀರ್ಯದ ಗುಣಮಟ್ಟವನ್ನು ವೃದ್ಧಿಸಿಕೊಳ್ಳಬಹುದು. ನೈಸರ್ಗಿಕವಾಗಿ ಲೈಂಗಿಕ ಆರೋಗ್ಯ ಹೆಚ್ಚಿಸುವ ಕೆಲ ಆಹಾರಗಳ ಪಟ್ಟಿಗಳನ್ನು ಇಲ್ಲಿ ನೀಡಲಾಗಿದೆ.

ಕಾಫಿ:
ಒಂದು ದಿನಕ್ಕೆ ಎರಡು ಅಥವಾ ಮೂರು ಕಪ್ ಸೇವಿಸುವರಲ್ಲಿ ನಿಮಿರುವಿಕೆಯ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆಯಿರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಕಾಫಿಯಲ್ಲಿರುವ ಉದ್ದೀಪನಕಾರಕ ಅಂಶಗಳು ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಇದರಿಂದ ನಿಮಿರುವಿಕೆ ತೊಂದರೆ ದೂರವಾಗಿ, ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆ ಎಂದು ತಿಳಿಸಲಾಗಿದೆ.

ದಾಳಿಂಬೆ:
ಈ ಹಣ್ಣಿ ಅಂಟಿ ಆಕ್ಸಿಡೆಂಟ್ ಅಂಶ ಹೆಚ್ಚಾಗಿರುವುದರಿಂದ ದೇಹದಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ. ದಿನನಿತ್ಯ ದಾಳಿಂಬೆ ತಿಂದರೆ ನಿಮಿರುವಿಕೆ ತೊಂದರೆಗೆ ಪರಿಹಾರ ಕಾಣಬಹುದು. ಇದರಿಂದ ನಿಮ್ಮ ಲೈಂಗಿಕ ಜೀವನ ಮತ್ತಷ್ಟು ಸುಧಾರಣೆಗೊಳ್ಳುತ್ತದೆ.

ಬಾಳೆಹಣ್ಣು:
ಪೊಟಾಶಿಯಂ ಅಂಶ ಅಧಿಕ ಪ್ರಮಾಣದಲ್ಲಿರುವ ಬಾಳೆಹಣ್ಣನ್ನು ತಿಂದರೆ ದೇಹದ ಭಾಗಗಳ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಪ್ರತಿ ದಿನ ಎರಡು ಬಾಳೆಹಣ್ಣನ್ನು ತಿನ್ನುವುದರಿಂದ ಶಿಶ್ನು ಆರೋಗ್ಯ ಸುಧಾರಿಸುವುದಲ್ಲದೆ, ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಶುಂಠಿ:
ಸಾಮಾನ್ಯವಾಗಿ ಮಸಾಲೆ ಪದಾರ್ಥವಾಗಿ ಬಳಸುವ ಶುಂಠಿಯಲ್ಲಿ ಲೈಂಗಿಕ ಸಾಮರ್ಥ್ಯವನ್ನುಉತ್ತೇಜಿಸುವ ಗುಣಗಳಿವೆ. ಪ್ರತಿ ನಿತ್ಯ ಒಂದು ಚಮಚ ಶುಂಠಿ ರಸವನ್ನು ಕುಡಿಯುವುದರಿಂದ ಲೈಂಗಿಕ ಜೀವನವನ್ನು ಸುಧಾರಿಸಿಕೊಳ್ಳಬಹುದು. ಇದರಿಂದ ನಿಮಿರುವಿಕೆ ಸಮಸ್ಯೆ ದೂರವಾಗಿಸಿ ವೀರ್ಯದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.

ಕಲ್ಲಂಗಡಿ:
ಕಲ್ಲಂಗಡಿಯಲ್ಲಿರುವ ಎಲ್-ಸಿಟ್ರಲ್ಲೈನ್ ಎಂಬ ಅಮೈನೊ ಆ್ಯಸಿಡ್ ಇದ್ದು, ಇದು ನಿಮಿರುವಿಕೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಈ ಅಮೈನೊ ಆ್ಯಸಿಡ್ ದೇಹದಲ್ಲಿ ನೈಟ್ರಿಕ್ ಆಕ್ಸಿಡ್ನ್ನು ಉತ್ಪಾದಿಸುತ್ತದೆ. ಈ ಹಣ್ಣನ್ನು ತಿನ್ನುವುದರಿಂದಲೂ ಕೂಡ ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬಹುದು.

ಪಾಲಕ್ ಸೊಪ್ಪು:
ಈ ತರಕಾರಿ ಸೊಪ್ಪಿನ ಸೇವನೆಯಿಂದ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಪಾಲಕ್ ಸೊಪ್ಪಿನಲ್ಲಿ ಮೆಗ್ನಿಷಿಯಂ ಪ್ರಮಾಣ ಅಧಿಕವಾಗಿರುತ್ತದೆ. ಇದರಿಂದ ರಕ್ತನಾಳಗಳ ಉರಿಯೂತ ಕಡಿಮೆಯಾಗಿ ದೇಹದಲ್ಲಿ ರಕ್ತ ಸಂಚಾರ ಹೆಚ್ಚಾಗುತ್ತದೆ. ಪಾಲಕ್ನ್ನು ನೈಸರ್ಗಿಕ ವಯಾಗ್ರಾ ಎಂದು ಕರೆಯಲಾಗುತ್ತಿದ್ದು, ಇದನ್ನು ಪ್ರತಿದಿನ ಸೇವಿಸುವ ಮೂಲಕ ನೈಸರ್ಗಿಕವಾಗಿ ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಈ ಸೊಪ್ಪಿನಲ್ಲಿರುವ ಉದ್ದೀಪನ ಅಂಶಗಳು ಲೈಂಗಿಕ ಆಸಕ್ತಿಯನ್ನು ಕೆರಳಿಸುವುದಲ್ಲದೆ, ಲೈಂಗಿಕ ಸುಖವನ್ನು ಹೆಚ್ಚಿಸುತ್ತದೆ.