ತಲೆ ನೋವು ಕಡಿಮೆ ಮಾಡಿಕೊಳ್ಳಲು ವಿವಿಧ ಔಷಧಿಗಳನ್ನು ಬಳಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಜಂಡು ಬಾಮ್ ಹಾಗೂ ವಿಕ್ಸ್‌ನ್ನು ಬಳಕೆ ಮಾಡುತ್ತಾರೆ. ಒಂದಿಷ್ಟು ಜನ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ.
ತಲೆ ನೋವು ಕಡಿಮೆ ಮಾಡಿಕೊಳ್ಳಲು ಕೆಲವು ಪರಿಹಾರಗಳನ್ನು ಮನೆಯಲ್ಲಿಯೇ ಪ್ರಯತ್ನಿಸಬಹುದು. ಇದಕ್ಕೆ ಯಾವುದೇ ಔಷಧಿ, ಜೆಲ್ ಬಳಸಲ್ಲ. ಎರಡೇ ನಿಮಿಷದಲ್ಲಿ ತಲೆ ನೋವು ಕಡಿಮೆ ಆಗುತ್ತದೆ.
ಏನದು ಪರಿಹಾರ?
ತಲೆ ನೋವು ಕಡಿಮೆ ಮಾಡಲು ಎರಡು ಐಸ್ ಕ್ಯುಬ್ಗಳು ಬೇಕಾಗುತ್ತವೆ. ಈ ಎರಡು ಕ್ಯುಬ್ಗಳು ತ್ವರಿತಗತಿಯಲ್ಲಿ ತಲೆನೋವು ಕಡಿಮೆ ಆಗುತ್ತದೆ. ಎರಡು ಐಸ್ ಕ್ಯುಬ್ಗಳನ್ನು ತಟ್ಟೆಯಲ್ಲಿರಿಸಿಕೊಳ್ಳಿ. ಈ ಎರಡು ಐಸ್ ಕ್ಯುಬ್ ಮೇಲೆ ನಿಮ್ಮ ಹೆಬ್ಬರಳನ್ನು ಇರಿಸಿ ಮಸಾಜ್ ರೀತಿ ಮಾಡಬೇಕು. ಇದೇ ರೀತಿ ಎರಡು ನಿಮಿಷ ಮಾಡುವರಿಂದ ತಲೆನೋವು ಕಡಿಮೆಯಾಗುತ್ತೆ.
ನೀವು ತಲೆ ನೋವಿನಿಂದ ಬಳಲುತ್ತಿದ್ದರೆ ಇದನ್ನು ಟ್ರೈ ಮಾಡಬಹುದು. ಯಾವುದೇ ಔಷಧಿ ಇಲ್ಲದ ಕಾರಣ ಸೈಡ್ ಎಫೆಕ್ಟ್ ಇರುವುದಿಲ್ಲ. ಈ ರೀತಿ ಮಾಡುವದರಿಂದ ನನ್ನ ತಲೆ ನೋವು ಕಡಿಮೆಯಾಗುತ್ತದೆ.
ಹೆಬ್ಬರಳಿನ ನರಗಳು ನೇರವಾಗಿ ತಲೆ ಭಾಗಕ್ಕೆ ಕನೆಕ್ಟ್ ಆಗಿರುತ್ತದೆ. ಐಸ್ ಮೇಲೆ ಹೆಬ್ಬರಳು ಇರಿಸಿ ಮಸಾಜ್ ಮಾಡಿದ್ರೆ ತಲೆನೋವು ಕಡಿಮೆಯಾಗುವ ಸಾಧ್ಯತೆ ಇರುತ್ತದೆ.