ಚೆಂದದ ಬಾರ್ಬಿಯನ್ನು ನೋಡಿದರೆ ಸಾಕು ಮಕ್ಕಳು ಅದು ಬೇಕೆಂದು ತುಂಬಾನೇ ಹಠ ಮಾಡುತ್ತಾರೆ ಆದರೆ ಪೋಷಕರು ಮಗಳು ಅದರ ಜೊತೆ ಆಟವಾಡುತ್ತಿರುತ್ತಾಳೆ ಎಂದು ಕೊಡಿಸುತ್ತಾರೆ. ಆದರೆ ನೀವು ಇನ್ನು ಮುಂದೆ ಈ ವಿಷಯ ತಿಳಿದರೆ ಬಾರ್ಬಿ ಡಾಲ್ ಕೊಡಿಸಲು ಖಂಡಿತ ಮುಂದಾಗಲ್ಲ:
ಮಕ್ಕಳಲ್ಲಿ ಬಾಡಿ ಇಮೇಜ್ ಪರಿಕಲ್ಪನೆ ಮೂಡಿಸುತ್ತದೆ:
ನೀವು ಬಾರ್ಬಿ ಡಾಲ್ ನೋಡಿರಬಹುದು. ಅದರ ದೇಹದ ಆಕಾರ ಹುಡುಗಿಯೆಂದರೆ ಹೀಗಿರಬೇಕು ಎನ್ನುವಂತಿರುತ್ತದೆ. ಬಳಕುವ ಮೈ ಮಾಟ, ಆಕರ್ಷಕ ಕೂದಲು, ಹೊಳೆಯುವ ಕಣ್ಣು, ಅದರಲ್ಲೂ ಕಿರಿದಾದ ಸೊಂಟ ಇವೆಲ್ಲ ತುಂಬಾನೇ ಅತ್ಯಾಕರ್ಷಕವಾಗಿರುತ್ತದೆ. ಇದರ ಜೊತೆ ಆಡುವ ಪುಟ್ಟ ಹೆಣ್ಮಗು ತಾನು ಕೂಡ ಬಾರ್ಬಿಯಂತೆಯೇ ಕಾಣಬೇಕೆಂದು ಕನಸು ಕಾಣಲಾರಂಭಿಸುತ್ತಾಳೆ. ಮುಂದೆ ಅವಳ ಮನಸ್ಸಿನ ಮೇಲೆ ಈ ಇಮೇಜ್ ನೆಗೆಟಿವ್ ರೀತಿಯಲ್ಲಿ ಪ್ರಭಾವ ಬೀಳಬಹುದು. ಅವಳು ತೆಳ್ಳಗಿದ್ದು ಅವಳ ಸ್ನೇಹಿತರು ದಪ್ಪಗಿದ್ದರೆ ಅದು ಸೌಂದರ್ಯವಲ್ಲ ಎಂದು ಭಾವಿಸುವಷ್ಟರ ಮಟ್ಟಿಗೆ ತಪ್ಪಾದ ಕಲ್ಪನೆ ಮೂಡಿಸುವುದು.
ನೈಜತೆಯಿಂದ ತುಂಬಾ ದೂರ:
ದೂರ ಬಾರ್ಬಿ ಇಮೇಜ್ ನೈಜತೆಗೆ ಹತ್ತಿರವಾಗಿರಲ್ಲ, ಅದರ ಫ್ಯಾಷನ್ ಸ್ಟೈಲ್ ನಿಜ ಜೀವನಕ್ಕೆ ಸೂಕ್ತವಾದದ್ದು ಅಲ್ಲ, ಅಲ್ಲದೆ ಬಾರ್ಬಿ ಜೊತೆ ಆಡುತ್ತಾ ಮಗಳು ತುಂಬಾ ಚಿಕ್ಕ ಪ್ರಾಯದಲ್ಲಿ ಮೇಕಪ್ ಕಡೆ ತುಂಬಾನೇ ಆಸಕ್ತಿ ಬೆಳೆಸಿಕೊಳ್ಳುತ್ತಾಳೆ.
ಬಾರ್ಬಿಯನ್ನು ಅಷ್ಟೇನು ಬುದ್ಧಿವಂತೆಯಲ್ಲ ಎಂಬಂತೆ ಬಿಂಬಿಸಲಾಗುವುದು:
ಬಾರ್ಬಿ ಕತೆಗಳಲ್ಲಿಯೂ ಅಷ್ಟೇ ಆಕೆಯ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆಯೇ ಹೊರತು ಆಕೆಯ ಬುದ್ಧಿವಂತಿಕೆಗೆ ನೀಡಲಾಗುವುದು. ಆಕೆ ಸದಾ ತನ್ನ ಪುರುಷ ಸಹೋದ್ಯೋಗಿಯಿಂದ ಸಹಾಯ ಕೇಳುವಂತೆಯೇ ಚಿತ್ರ-ಕತೆ ಹೆಣಿಯಲಾಗಿರುತ್ತದೆ.
ವರ್ಣ ಬೇಧದ ಬಗ್ಗೆ ಮಕ್ಕಳ ತಲೆಯಲ್ಲಿ ತುಂಬಲಾಗುವುದು:
ಬಾರ್ಬಿ ಡಾಲ್ಗಳು ಬೆಳ್ಳಗೆ ಇರುತ್ತದೆ. ಬೆಳಗ್ಗೆ ಇದ್ದರೆ ಮಾತ್ರ ಸೌಂದರ್ಯ, ಕಪ್ಪು ಸೌಂದರ್ಯವಲ್ಲ ಎಂದು ವರ್ಣ ಬೇಧದ ಬಗ್ಗೆ ಮಕ್ಕಳ ತಲೆಯಲ್ಲಿ ತುಂಬಲಾಗುವುದು.
ಮಕ್ಕಳ ವಯಸ್ಸಿಗೂ ಅದು ಸೂಕ್ತವಲ್ಲ:
ಬಾರ್ಬಿ ಡಾಲ್ ಅನ್ನು ಮಕ್ಕಳಿಗೆ ಯಾಕೆ ಪ್ರಮುಖ ಆಟಿಕೆಯಾಗಿ ನೀಡುತ್ತಾರೋ ಗೊತ್ತಿಲ್ಲ, ಬಾರ್ಬಿ ಡಾಲ್ ಡ್ರೆಸ್ಸಿಂಗ್ ಮಾಡುವ ಉಬ್ಬಿದ ಎದೆ, ಆಕರ್ಷಕ ಸೊಂಟ ಇವೆಲ್ಲಾ ಮಕ್ಕಳಲ್ಲಿ ಬೇಡದ ಪರಿಕಲ್ಪನೆ ಮೂಡಿಸುವಂತಿದೆ. ಆದ್ದರಿಂದ ಮಕ್ಕಳಿಗೆ ಬಾರ್ಬಿ ಡಾಲ್ ಬದಲಿಗೆ ಇತರ ಆಟಿಕೆಗಳನ್ನು ನೀಡುವುದೇ ಸೂಕ್ತ, ಈ ಕುರಿತು ನಿಮ್ಮ ಅಭಿಪ್ರಾಯವೇನು?