ಜೀವನದಲ್ಲಿ ಯಶಸ್ಸು ಪಡೆಯಬೇಕು ಎಂದು ಬಯಸುವವರು ಹಲವಾರು ಜನರಿದ್ದಾರೆ. ಯಾವ ರೀತಿ ಯಶಸ್ಸು ಪಡೆಯಬೇಕು ಎಂಬುದನ್ನು ಅರಿತುಕೊಂಡಿರುವುದಿಲ್ಲ. ಜೀವನದಲ್ಲಿ ನೀತಿ ನಿಯಮಗಳನ್ನು ಅಳವಡಿಸಿಕೊಂಡು ಮುಂದುವರಿಯಬೇಕೆಂದು ಅವರಿಗೆ ಗೊತ್ತಿರುವುದಿಲ್ಲ.
ಯಶಸ್ವಿ ಜನರು ಯಾವ ರೀತಿಯ ಗುಣಗಳನ್ನು ಮೈಗೂಡಿಸಿಕೊಂಡಿರಬೇಕು ಹಾಗೂ ಎಂಬುದನ್ನು ತಿಳಿದುಕೊಂಡರೆ ನಮಗೂ ಯಶಸ್ಸು ಸುಲಭವಾಗಿ ದೊರೆಯುತ್ತದೆ.
ಯಶಸ್ವಿ ಜನರು ಸಮಯಕ್ಕೆ ಆದ್ಯತೆ ನೀಡುತ್ತಾರೆ:
ತಮ್ಮ ಜಂಜಾಟ ಹಾಗೂ ಒತ್ತಡದ ಜೀವನದಲ್ಲಿ ಕೂಡ ಶಾಂತವಾಗಿರಲು ಬಯಸುತ್ತಾರೆ. ಪರ್ಫೆಕ್ಟ್ ಲೈಫ್ಸ್ಟೈಲ್ ಅನ್ನು ಅನುಸರಿಸುವ ಇವರು ರಾತ್ರಿ ಮಲಗುವ ಮುನ್ನ ಬೆಳಗ್ಗೆ ಏನೆಲ್ಲಾ ಕೆಲಸ ಮಾಡಬೇಕು ಎಂಬುದನ್ನು ಪಟ್ಟಿ ಮಾಡುತ್ತಾರೆ ಹಾಗೂ ಆ ಪ್ಲಾನಿಂಗ್ಗೆ ಅನುಸಾರವಾಗಿ ಕೆಲಸ ಮಾಡುತ್ತಾರೆ.
ನಿದ್ರೆಯ ಮಟ್ಟಕ್ಕೆ ಪ್ರಾಮುಖ್ಯತೆ ನೀಡುತ್ತಾರೆ:
ಯಶಸ್ವಿ ಜನರು ಸರಿಯಾದ ನಿದ್ರೆಯ ಮಟ್ಟಕ್ಕೆ ಆದ್ಯತೆ ನೀಡುತ್ತಾರೆ. ಸರಿಯಾದ ನಿದ್ದೆಯು ಅವರಿಗೆ ಅವರ ಕೆಲಸಗಳನ್ನು ಮುಗಿಸಲು ಸಹಾಯ ಮಾಡುತ್ತದೆ.
ವೇಳಾಪಟ್ಟಿಯನ್ನು ಅನುಸರಿಸುವುದು:
ಯಶಸ್ವಿ ಜನರು ಶಿಸ್ತಿನ ವೇಳಾಪಟ್ಟಿಯನ್ನು ಅನುಸರಿಸುತ್ತಾರೆ. ನಿಯಮಿತ ವೇಳಾಪಟ್ಟಿಯನ್ನು ಅನುಸರಿಸುವುದರಿಂದ ನಮ್ಮ ದೇಹ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ವಾರಾಂತ್ಯದಲ್ಲಿಯೂ ಸಹ ಪ್ರತಿದಿನ ಒಂದೇ ಸಮಯಕ್ಕೆ ಮಲಗಲು ಮತ್ತು ಏಳಲು ಒಂದೇ ಸಮಯವನ್ನು ನಿಗದಿ ಮಾಡಿಕೊಂಡಿರುತ್ತಾರೆ.ಒಂದೇ ಸಮಯಕ್ಕೆ ಏಳುವುದು ಹಾಗೂ ನಿದ್ರೆ ಮಾಡುವುದು ನಮ್ಮ ಆಂತರಿಕ ದೇಹದ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ. ನಮ್ಮಲ್ಲಿ ಉಲ್ಲಾಸಕರ ಭಾವನೆಯನ್ನು ಉಂಟುಮಾಡುತ್ತದೆ ಕಟ್ಟುನಿಟ್ಟಿನ ಯಶಸ್ವಿ ವೇಳಾಪಟ್ಟಿಯನ್ನು ಅನುಸರಿಸಿ.
ಮೊಬೈಲ್, ಲ್ಯಾಪ್ಟಾಪ್ ಬಳಕೆ ಕಡಿಮೆ ಮಾಡಿ:
ರಾತ್ರಿ ಸಮಯದಲ್ಲಿ ಆದಷ್ಟು ಲ್ಯಾಪ್ಟಾಪ್ ಹಾಗೂ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ. ರಾತ್ರಿ ಮಲಗುವ ಮುನ್ನ ಹೆಚ್ಚು ಲ್ಯಾಪ್ಟಾಪ್ ಹಾಗೂ ಮೊಬೈಲ್ ಬಳಸುವುದು ನಿಮ್ಮ ನಿದ್ರೆಗೆ ಭಂಗವನ್ನುಂಟು ಮಾಡುತ್ತದೆ.
ಕೃತಜ್ಞತೆಯನ್ನು ಮೈಗೂಡಿಸಿಕೊಳ್ಳಿ:
ಯಶಸ್ವಿ ಜನರು ರಾತ್ರಿ ನಿದ್ರಿಸುವುದಕ್ಕೂ ಮುನ್ನ ದಿನದಲ್ಲಿ ಹಲವಾರು ವಿಷಯಗಳಿಗೆ ಕೃತಜ್ಞತೆ ವ್ಯಕ್ತಪಡಿಸುತ್ತಾರೆ. ಬಿಡುವಿಲ್ಲದ ಜೀವನದಲ್ಲಿ ನಾವು ಒಮ್ಮೊಮ್ಮೆ ಉತ್ತಮ ವಿಷಯಗಳನ್ನು ಕಡೆಗಣಿಸುತ್ತೇವೆ. ಕೃತಜ್ಞತೆಯು ನಮ್ಮನ್ನು ಸಂತೋಷದಿಂದ ಇರುವಂತೆ ಮಾಡುತ್ತದೆ ಹಾಗೂ ನಮ್ಮನ್ನು ಧನಾತ್ಮಕವಾಗಿ ಇರಿಸುತ್ತದೆ.
ರಾತ್ರಿ ತಡವಾಗಿ ಊಟಮಾಡುವುದನ್ನು ತಪ್ಪಿಸುತ್ತಾರೆ:
ಯಶಸ್ವಿ ಜನರು ರಾತ್ರಿ ತಡವಾಗಿ ಊಟ ಮಾಡುವುದನ್ನು ಆದಷ್ಟು ತಪ್ಪಿಸುತ್ತಾರೆ. ಇದು ಉತ್ತಮ ನಿದ್ರೆಗೆ ಭಂಗವನ್ನುಂಟು ಮಾಡುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ. ಮಲಗುವುದಕ್ಕೆ ಮೂರು ಗಂಟೆಗಳಿಗೆ ಮುನ್ನ ಊಟ ಮಾಡುತ್ತಾರೆ ಇದು ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ.
ಸಾವಧಾನತೆಯನ್ನು ಅಭ್ಯಸಿಸುವುದು:
ಸಾವಧಾನತೆ ಅಥವಾ ಮೈಂಡ್ಫುಲ್ನೆಸ್ ಎಂಬುದು ಪ್ರಸ್ತುತ ಕ್ಷಣದ ಮೇಲೆ ಕೇಂದ್ರೀಕರಿಸುವುದು, ನಿರ್ಣಯವಿಲ್ಲದೆ ಅದನ್ನು ಒಪ್ಪಿಕೊಳ್ಳುವುದು ಮತ್ತು ಸ್ವೀಕರಿಸುವುದು ಎಂಬುದಕ್ಕೆ ಮಹತ್ವ ನೀಡುತ್ತದೆ.
ಧ್ಯಾನ, ಪ್ರಾಣಾಯಾಮಗಳಂತಹ ಅಂಶಗಳಿಗೆ ಅವರು ಮಹತ್ವ ನೀಡುತ್ತಾರೆ. ಸಾವಧಾನತೆಯನ್ನು ಅಭ್ಯಾಸ ಮಾಡುವುದರಿಂದ ಒತ್ತಡ ಮತ್ತು ಆತಂಕವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಸ್ನೂಜ್ ಬಟನ್ ಆಗಾಗ್ಗೆ ಒತ್ತುವುದಿಲ್ಲ:
ಯಶಸ್ವಿ ಜನರು ತಮ್ಮ ಅಲರಾಮ್ನ ಸ್ನೂಜ್ ಬಟನ್ ಅನ್ನು ಆಗಾಗ್ಗೆ ಒತ್ತುವ ಮೂಲಕ ಇನ್ನೂ ಹೆಚ್ಚು ಹೊತ್ತು ನಿದ್ರಿಸುವುದಿಲ್ಲ. ಅಲರಾಮ್ ಆದೊಡನೆ ಅದನ್ನು ನಿಲ್ಲಿಸಿ ತಮ್ಮ ಬೆಳಗ್ಗಿನ ಕೆಲಸಕ್ಕೆ ಗಮನ ಹರಿಸುತ್ತಾರೆ.