ಆದರೆ ನೀವು ಎಂದಾದ್ರು ಹೀರೆಕಾಯಿ ರೈಸ್ ಮಾಡಿ ಸವಿದಿದ್ದೀರಾ? ಪಲಾವ್ಗೆ ತರಕಾರಿ ಹಾಕುವಂತೆಯೇ ಈ ಹೀರೇಕಾಯಿ ಬಳಸಿ ಉತ್ತಮ ರುಚಿಯ ರೈಸ್ ಮಾಡಬಹುದು. ಈ ರೈಸ್ ಮಾಡುವುದು ಎಷ್ಟು ಸುಲಭವೋ ಅಷ್ಟೇ ರುಚಿಕರವೂ ಹೌದು. ಹೀರೇಕಾಯಿ ಆರೋಗ್ಯಕ್ಕೂ ಸಹ ಅಷ್ಟೇ ಉತ್ತಮ ತರಕಾರಿಯಾಗಿದೆ. ತಮ್ಮ ತಮ್ಮ ಮನೆಯಲ್ಲೇ ಕೆಲವರು ಹೀರೇಕಾಯಿ ಬೆಳೆಯುತ್ತಾರೆ.
ಆದರೆ ಈ ಹೀರೇಕಾಯಿ ರೈಸ್ ಅನ್ನು ನೀವು ಹೋಟೆಲ್ನಲ್ಲಾಗಲಿ ಕ್ಯಾಂಟೀನ್ನಲ್ಲಾಗಲಿ ನೋಡಲು ಸಾಧ್ಯವಿಲ್ಲ. ಏಕೆಂದರೆ ಇದೊಂದು ವಿಶೇಷ ರೆಸಿಪಿ. ಹಾಗಾದರೆ ನಾವಿಂದು ಈ ವಿಶಿಷ್ಟ ರೆಸಿಪಿಯಾದ ಹೀರೇಕಾಯಿ ರೈಸ್ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಹೀರೇಕಾಯಿ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಈ ಖಾದ್ಯ ಮಾಡುವುದು ಹೇಗೆ? ಎಷ್ಟು ಸಮಯ ತೆಗೆದುಕೊಳ್ಳಲಿದೆ ಎಂಬ ಕುರಿತು ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಅನ್ನ - 250 ಗ್ರಾಂ
ಹೀರೇಕಾಯಿ (ಚೌಕವಾಗಿ) - 150 ಗ್ರಾಂ
ಈರುಳ್ಳಿ (ಕತ್ತರಿಸಿದ) - 1
ಟೊಮೆಟೊ (ಕತ್ತರಿಸಿದ) - 1
ಜೀರಿಗೆ - 1/2 ಟೀಸ್ಪೂನ್
ಸಾಸಿವೆ - 1/2 ಟ್ಯಾಪ್
ಲವಂಗ-3
ಸೋಂಕಾಳು - 1/4 ಟೀಸ್ಪೂನ್
ಏಲಕ್ಕಿ-2
ದಾಲ್ಚಿನ್ನಿ - 2 ಪಿಸಿಗಳು
ಹಸಿರು ಮೆಣಸಿನಕಾಯಿ - 3
ಶುಂಠಿ ಬೆಳ್ಳುಳ್ಳಿ (ಪುಡಿಮಾಡಿದ) - 1 tbs
ಕರಿಬೇವಿನ ಎಲೆಗಳು - 2 tbs
ಕೆಂಪು ಮೆಣಸಿನ ಪುಡಿ - 1/4 ಟೀಸ್ಪೂನ್
ಅರಿಶಿನ ಪುಡಿ - 1/4 ಟೀಸ್ಪೂನ್
ಗರಂ ಮಸಾಲಾ ಪುಡಿ - 1/4 ಟೀಸ್ಪೂನ್
ಕೊತ್ತಂಬರಿ ಪುಡಿ-1/2 ಟೀಸ್ಪೂನ್
ಕೊತ್ತಂಬರಿ ಸೊಪ್ಪು - 2 ಚಮಚ
ರುಚಿಗೆ ಉಪ್ಪು
ಅಡುಗೆ ಎಣ್ಣೆ
ಇದಕ್ಕೆ ಹಸಿ ಮೆಣಸು, ಶುಂಠಿ, ಬೆಳ್ಳುಳ್ಳಿ ಹಾಕಿ 5 ನಿಮಿಷ ಫ್ರೈ ಮಾಡಿಕೊಳ್ಳಿ. ಬಳಿಕ ಒಂದು ಟೊಮೆಟೊ ಹಾಕಿಕೊಂಡು ಫ್ರೈ ಮಾಡಿ. ಇದಕ್ಕೆ ಅರಶಿಣ, ಖಾರದ ಪುಡಿ, ಗರಂ ಮಸಾಲ ಹಾಕಿ ಫ್ರೈ ಮಾಡಿಕೊಳ್ಳಿ. ಇದೆಲ್ಲಾ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ಬಳಿಕ ಬೇಯಲು ಬಿಡಿ.
ಇನ್ನೊಂದೆಡೆ ಅನ್ನ ತೆಗೆದುಕೊಂಡು ಹುಡಿಮಾಡಿಕೊಳ್ಳಬೇಕು. ಗೊಜ್ಜು ರೆಡಿಯಾದ ಬಳಿಕ ಇದಕ್ಕೆ ಅನ್ನವನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಉರಿ ಸಣ್ಣದಾಗಿ ಇಟ್ಟುಕೊಂಡು ಅನ್ನ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಒಲೆ ಆಫ್ ಮಾಡಿಕೊಂಡು ಇಳಿಸಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಹೀರೇಕಾಯಿ ರೈಸ್ ರೆಡಿಯಾಗಿರುತ್ತೆ. ಇದನ್ನು ಲಂಚ್ ಬಾಕ್ಸ್ಗೂ ಬಳಸಬಹುದು. ಜೊತೆಗೆ ತಿಂಡಿಗೂ ಸವಿಯಬಹುದು.