ಬೆಳಿಗ್ಗೆ ಬ್ರೇಕ್ ಫಾಸ್ಟ್ ಗೆ ಮಾಡಿ ಮೆಂತ್ಯ ಸೊಪ್ಪಿನ ಬಾತ್! ಸಖತ್ ಟೇಸ್ಟಿ ರೆಸಿಪಿ.

ಕೆಲವು ಮಹಿಳೆಯರಿಗೆ ಬೆಳಿಗ್ಗೆ ತಿಂಡಿ ಏನು ಮಾಡಲಿ ಅಂತ ತುಂಬಾನೇ ಯೋಜಿಸುತ್ತಾರೆ. ಬರೀ ಇಡ್ಲಿ, ದೋಸೆ, ಉಪ್ಪಿಟ್ಟು, ಚಪಾತಿ ಮಾಡತ್ತಾನೆ ಇರತ್ತಾರೆ. ಒಮ್ಮೆ ಮೆಂತ್ಯ ಸೋಪ್ಪಿನ ಬಾತ್ ಮಾಡಿ ನೋಡಿ. ಇದು ಆರೋಗ್ಯಕರ  ತಿಂಡಿ. ಬೆಳಿಗ್ಗೆ ಈ ತಿಂಡಿ ಮಾಡಿದರೆ ನಿಮಗೆ ಹೊರ ಹೊಗಬೇಕು ಎನಿಸೋದೆ ಇಲ್ಲ. ಮನೆಯಲ್ಲಿಯೇ ತಿನ್ನಬೇಕು ಅನ್ನಿಸುತ್ತದೆ.

ಇದರಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆಗೆ ಪ್ರಮುಖ ಔಷಧಿಯನ್ನಾಗಿ ಉಪಯೋಗಿಸುತ್ತಾರೆ. ರಕ್ತ ಹೀನತೆ ಇರುವವರು ಮೆಂತೆಯ ಆಹಾರ ಮತ್ತು ಇತರ ತರಕಾರಿಗಳ ಜೊತೆ ಸಲಾಡ್ ರೂಪದಲ್ಲಿ ಹಸಿ ಮೆಂತೆಯ ಸೊಪ್ಪನ್ನು ಸೇವಿಸಿದರೆ ಹಿಮೋಗ್ಲೋಬಿನ್ ಪ್ರಮಾಣ ಏರಿಕೆ ಆಗಲು ನೆರವಾಗುತ್ತದೆ.ಈ ಮೆಂತ್ಯ ಬಾಂತ್ ಮಾಡಲು ಕಡಿಮೆ ಸಮಯ ಕಡಿಮೆ ವಸ್ತುಗಳು ಸಾಕಾಗುತ್ತದೆ. 

ಹಾಗಾದ್ರೆ ನಾವಿಂದು ಮೆಂತ್ಯೆ ಬಾತ್ ಮಾಡುವುದು ಹೇಗೆ? ಮೆಂತ್ಯ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ಪಾಕವಿಧಾನವೇನು ಎಂಬುದನ್ನು ನೋಡೋಣ.

ಮೆಂತ್ಯ ಸೊಪ್ಪಿನ ಬಾತ್ ಮಾಡಲು ಯಾವೆಲ್ಲಾ ವಸ್ತು ಬೇಕು?

ಮೆಂತ್ಯ ಸೊಪ್ಪು - 1 ಕಟ್

ಅನ್ನ - 1 ಬೌಲ್

ಜೀರಿಗೆ

ಸಾಸಿವೆ

ಇಂಗು

ಆಲೂಗಡ್ಡೆ - 1

ಹಸಿ ಬಟಾಣಿ

ಅರಶಿಣ

ಹಸಿ ಮೆಣಸು

ತೆಂಗಿನ ತುರಿ

ಕೊತ್ತಂಬರಿ ಸೊಪ್ಪು

ಉಪ್ಪು

ಎಣ್ಣೆ

ಮೆಂತ್ಯ ಸೊಪ್ಪಿನ ಬಾತ್ ಮಾಡುವುದು ಹೇಗೆ?

ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಕಾದ ಬಳಿಕ ಅದಕ್ಕೆ ಸಾಸಿವೆ, ಜಿರಿಗೆ ಹಾಕಿ, ಬಳಿಕ ಇಂಗು ಹಾಕಿಕೊಳ್ಳಿ. ಇದಾದ ಬಳಿಕ ಒಂದು ದೊಡ್ಡ ಗಾತ್ರ ಆಲುಗಡ್ಡೆ ಕತ್ತರಿಸಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.

ಇದಾದ ಬಳಿಕ ಹಸಿ ಬಟಾಣಿ ಹಾಕಿ 3ರಿಂದ 4 ನಿಮಿಷ ಬೇಯಿಸಿಕೊಳ್ಳಿ. ಇದಾದ ಬಳಿಕ ಮೆಂತ್ಯ ಸೊಪ್ಪನ್ನು ಹಾಕಿಕೊಳ್ಳಿ. ಈ ವೇಳೆ ನೀರು ಹಾಕಬೇಡಿ, ಸೊಪ್ಪು ಚೆನ್ನಾಗಿ 3 ನಿಮಿಷ ಬೇಯಲಿ. ಬಳಿಕ ಅರಶಿಣ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ.

ಇನ್ನೊಂದು ಕಡೆ ಸ್ವಲ್ಪ ತೆಂಗಿನ ತುರಿ ತೆಗೆದುಕೊಂಡು ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ. ಜೊತೆಗೆ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಜೀರಿಗೆ ಹಾಕಿಕೊಂಡು ರುಬ್ಬಿಕೊಳ್ಳಿ. ನೀರು ಹಾಕದೆಯೇ ರುಬ್ಬಿಕೊಳ್ಳಬೇಕು. ತರಿತರಿಯಾಗಿ ರುಬ್ಬಿಕೊಂಡು ಅದನ್ನು ಒಲೆ ಮೇಲೆ ಇಟ್ಟಿರುವ ಪಾತ್ರೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.

ಈಗ ಮೆಂತ್ಯ ಬಾತ್ ಅನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದು ಪಲ್ಯದಂತೆ ಮಿಕ್ಸ್ ಆಗುತ್ತದೆ. ಬಳಿಕ ಇದಕ್ಕೆ ಉಪ್ಪು ಹಾಕಿಕೊಂಡು ಚೆನ್ನಾಗಿ ಕಲಸಿ ಬೇಯಲು ಬಿಡಿ. 2 ನಿಮಿಷದ ಬಳಿಕ ಇದಕ್ಕೆ ಅನ್ನವನ್ನು ಸೇರಿಸಿಕೊಳ್ಳಿ. ಈ ವೇಳೆ ಉರಿಯನ್ನು ಸಣ್ಣದಾಗಿ ಮಾಡಿಕೊಳ್ಳಿ, ಅನ್ನ ಹಾಕಿದ ಬಳಿಕ ಒಲೆ ಆಫ್ ಮಾಡಿದರೆ ನಿಮ್ಮ ಮುಂದೆ ಮೆಂತ್ಯ ಬಾತ್ ರೆಡಿಯಾಗುತ್ತದೆ.

ಈ ಮೆಂತ್ಯ ಬಾತ್ಗೆ ಕೆಲವರು ನವಿಲು ಕೋಸು ಸೇರಿಸುತ್ತಾರೆ. ಮೆಂತ್ಯ ಸೊಪ್ಪು ಹಾಗೂ ನವಿಲು ಕೋಸು ಒಳ್ಳೆಯ ಕಾಂಬಿನೇಷನ್ ಆಗಲಿದೆ. ಇದನ್ನು ಹಾಕದೆಯೂ ಮಾಡಬಹುದು. ಈ ತಿಂಡಿ ಬೆಳಗ್ಗೆ ನಾಷ್ಟಕ್ಕೆ ಒಳ್ಳೆಯ ಖಾದ್ಯ ಜೊತೆಗೆ ಬಾಕ್ಸ್ಗೆ ಹಾಕಿ ಮಧ್ಯಾಹ್ನವೂ ಸವಿಯಬಹುದು.

ಆರೋಗ್ಯಕ್ಕೆ ಮೆಂತ್ಯ ಸೊಪ್ಪು ಉತ್ತಮ . ಹೀಗಾಗಿ ಮೆಂತ್ಯ ಸೊಪ್ಪಿನ ಬಾತ್, ಮೆಂತ್ಯ ಪಲಾವ್, ಮೆಂತ್ಯ ಕರಿ, ಚಟ್ನಿ ಹೀಗೆ ಹತ್ತಾರು ಖಾದ್ಯಗಳು ಇದರಲ್ಲಿ ಮಾಡಬಹುದಾಗಿದೆ.