ಹಣದ ವಿಷಯದಲ್ಲಿ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!

ಮನೆಯಲ್ಲಿ ಹಣದ ಸಮಸ್ಯೆ ನಿಮ್ಮ ಕಾಡುತ್ತಿದ್ದರೆ ವಾಸ್ತುವಿನಲ್ಲಿ ಇದಕ್ಕೆ ಪರಿಹಾರವಿದೆ. ಎಷ್ಟು ದುಡಿದರು ಕೈಯಲ್ಲಿ ಹಣವಿಲ್ಲದಿರುವುದು, ಮನೆಯೊಳಗೆ ಹಣ ಇಲ್ಲದೆ ಇರುವುದು, ಸಾಲ ಹೆಚ್ಚಾಗುವುದು ಇದಕ್ಕೆಲ್ಲಾ ವಾಸ್ತು ಕಾರಣವಾಗಿದೆ. ಮನೆಯಲ್ಲಿ ಹಣವನ್ನು ಇಟ್ಟುಕೊಂಡು ಈ ವಾಸ್ತು ತಪ್ಪುಗಳನ್ನು ಮಾಡಬೇಡಿ.

ನೀವು ಮನೆಯಲ್ಲಿ ಸಮೃದ್ಧಿಯನ್ನು ಬಯಸಿದರೆ, ತಜ್ಞರ ಪ್ರಕಾರ ನೀವು ಈ ಸಣ್ಣ ಸಣ್ಣ ವಾಸ್ತು ದೋಷಗಳನ್ನು ಮಾಡುವುದನ್ನು ನಿಲ್ಲಿಸಬೇಕು. ಹಾಗಾದರೆ ಯಾವ ತಪ್ಪುಗಳನ್ನು ನೀವು ಮಾಡುತ್ತಿದ್ದೀರಿ, ಅದರ ಪರಿಹಾರವೇನು ಎಂಬುದನ್ನು ನೋಡಿ.

ನಾವೆಲ್ಲರೂ ನಮ್ಮ ಜೀವನದಲ್ಲಿ ಆರ್ಥಿಕ ಬೆಳವಣಿಗೆಯನ್ನು ಬಯಸುತ್ತೇವೆ ಮತ್ತು ಅದಕ್ಕಾಗಿ ಶ್ರಮಿಸುತ್ತೇವೆ. ಆರಾಮದಾಯಕ ಮತ್ತು ಐಷಾರಾಮಿ ಜೀವನವನ್ನು ನಡೆಸಲು, ನಮ್ಮಲ್ಲಿ ಸಾಕಷ್ಟು ಹಣ ಇರುವುದು ಮುಖ್ಯ. ಆದರೆ ಎಷ್ಟೋ ಸಲ ಕಷ್ಟಪಟ್ಟು ದುಡಿದರೂ ನಮ್ಮ ಮನೆಯಲ್ಲಿ ಹಣ ಸರಿಯಾಗಿ ಇಡದ ಕಾರಣ ಆ ಆರ್ಥಿಕ ಲಾಭ ಸಿಗುವುದಿಲ್ಲ.

ಲಕ್ಷ್ಮಿ ದೇವಿಯ ಆಶೀರ್ವಾದವು ಜೀವನದಲ್ಲಿ ಮುಂದುವರಿಯಲು, ಆಕೆಗೆ ಸಾಕಷ್ಟು ಗೌರವವನ್ನು ನೀಡುವುದು ಮುಖ್ಯ. ಹಣವನ್ನು ಅಲ್ಲಿ ಇಲ್ಲಿ ಇಡುವುದು ಅಥವಾ ಕೆಲವು ಸಣ್ಣ ವಿಷಯಗಳನ್ನು ನಿರ್ಲಕ್ಷಿಸುವುದು ವ್ಯಕ್ತಿಯ ಹಣದ ನಷ್ಟಕ್ಕೆ ಕಾರಣವಾ. ಆದ್ದರಿಂದ ಈ ಲೇಖನದಲ್ಲಿ ಮನೆಯಲ್ಲಿ ಹಣವನ್ನು ಇಡುವಾಗ ನೀವು ಯಾವ ವಾಸ್ತು ಸಂಬಂಧಿತ ತಪ್ಪುಗಳನ್ನು ತಪ್ಪಿಸಬೇಕು ಎಂದು ತಿಳಿಸುತ್ತದೆ.

ಅನೇಕ ಬಾರಿ ನಾವು ನಮ್ಮ ಎಲ್ಲಾ ಹಣವನ್ನು ಒಟ್ಟಿಗೆ ಇಡುತ್ತೇವೆ. ಆದರೆ ನೀವು ನಿಮ್ಮ ಹಣದೊಂದಿಗೆ ಹರಿದ ಅಥವಾ ತುಂಬಾ ಹಳೆಯ ನೋಟುಗಳನ್ನು ಇಟ್ಟುಕೊಳ್ಳಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ಅಂತಹ ನೋಟುಗಳನ್ನು ಹೊಂದಿದ್ದರೆ, ಅವುಗಳನ್ನು ಪಕ್ಕಕ್ಕೆ ಇರಿಸಿ ಮತ್ತು ಮೊದಲು ಅವುಗಳನ್ನು ಖರ್ಚು ಮಾಡಿ. ಇಲ್ಲವೇ ಬ್ಯಾಂಕ್ಗೆ ಹೋಗಿ ಅಂತಹ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.

ನಕಾರಾತ್ಮಕ ವಿಷಯಗಳು:
ನೀವು ಹಣವನ್ನು ಮನೆಯ ಬೀರುವಿನಲ್ಲಿಟ್ಟಿದ್ದರೆ ಆ ಬೀರುವಿನಲ್ಲಿ ಕೌಟುಂಬಿಕ ವ್ಯಾಜ್ಯ, ಆಸ್ತಿ ವ್ಯಾಜ್ಯಾ, ಮೃತರ ಫೋಟೋ, ಹಳೆಯ ಪ್ರಸಾದಗಳನ್ನು ಇಡುವುದನ್ನು ನಿಲ್ಲಿಸಿಬಿಡಿ. ಏಕೆಂದರೆ ಹಣದ ಸ್ವರೂಪವಾದ ಲಕ್ಷ್ಮಿ ದೇವಿಯು ಇಂತಹ ಕಡೆಗಳಲ್ಲಿ ನೆಲೆಸಲು ಇಚ್ಚೀಸಲಾರಲು, ಹೀಗಾಗಿ ನಕಾರಾತ್ಮಕ ವಿಷಯಗಳು ಹಚ್ಚಾದಾಗ ಹಣದ ಖರ್ಜು ಹೆಚ್ಚಾಗುತ್ತದೆ.

ಔಷಧಿಗಳ ಜೊತೆ ಹಣವಿಡಬೇಡಿ:
ಅನೇಕ ಬಾರಿ ಜನರು ತಮ್ಮ ಸುರಕ್ಷಿತ ಅಥವಾ ಹಣದ ಬೀರುಗಳಲ್ಲಿ ಔಷಧಿ ಇತ್ಯಾದಿಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ಇದನ್ನು ವಾಸ್ತುಶಾಸ್ತ್ರದಲ್ಲಿ ಸೂಕ್ತವೆಂದು ಪರಿಗಣಿಸಲಾಗಿಲ್ಲ. ಔಷಧಿ ತೆಗೆದುಕೊಳ್ಳುವುದೆಂದರೆ ರೋಗದ ವಿರುದ್ಧ ಹೋರಾಡುವುದು ಎಂದರ್ಥ. ನಿಮ್ಮ ಹಣಕಾಸಿನ ಪರಿಸ್ಥಿತಿಯು ನೋವಿನಿಂದ ಕೂಡಿರುವುದನ್ನು ನೀವು ಎಂದಿಗೂ ಬಯಸುವುದಿಲ್ಲ. ಆದ್ದರಿಂದ, ನಿಮ್ಮ ಹಣದ ಕಪಾಟಿನಲ್ಲಿ ಔಷಧಿಗಳನ್ನು ಇಡುವುದನ್ನು ತಪ್ಪಿಸಿ.

ಹಣವಿಡುವ ಸ್ಥಳ ಹೇಗಿರಬೇಕು?:
ನೀವು ಹಣವಿಡಲು ಬೀರು ಅಥವಾ ವಾರ್ಡ್ರೋಬ್ ಬಳಸುತ್ತಿರಬಹುದು. ಆದರೆ ಇದು ಕೆಂಪು ಅಥವಾ ಕಪ್ಪು ಬಣ್ಣದಾಗಿರಬಾರದಂತೆ. ಲಕ್ಷಿಗೆ ಈ ಬಣ್ಣಗಳು ಅಶುಭ ತರಲಿದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಹೀಗಾಗಿ ನೀವು ಹಣವಿಡಲು ಬಿಳಿ, ಗೋಲ್ಡನ್ ಬಣ್ಣದ ಬೀರು ಅಥವಾ ವಾರ್ಡ್ರೋಬ್ ಬಳಸುವುದು ಸೂಕ್ತ.

ಯಾವ ದಿಕ್ಕಿನಲ್ಲಿ ಹಣ ಇಡುತ್ತೀರಿ?:
ನಿಮ್ಮ ಮನೆಯಲ್ಲಿ ಯಾವ ಸ್ಥಳದಲ್ಲಿ ಬೇಕಾದರೂ ಹಣವಿಟ್ಟರೆ ಅದು ಅಶುಭ ಸಂಕೇತವಾಗಲಿದೆ. ಅಗ್ನಿ ಮೂಲೆ, ಶೌಚಾಲಯದ ಎದುರಾಗಿ, ದ್ವಾರಬಾಗಿಲಿನ ನೇರವಾಗಿ ಹಣವನ್ನು ಇಡಬಾರದಂತೆ. ಇದರ ಜೊತೆ ಹಣ ಇಡಲು ಸೂಕ್ತ ಜಾಗವನ್ನು ಆರಿಸಬೇಕು, ದೇವರ ಕೋಣೆ ಎದುರಿಗೆ ಈ ಸ್ಥಳವಿದ್ದರೆ ಶುಭ ಸೂಚಕ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.