ಮಾವಿನಕಾಯಿ ತೊಕ್ಕು ಸ್ವಲ್ಪ ಸೈಡ್‌ಗಿದ್ದರೆ ಊಟದ ರುಚಿ ಹೆಚ್ಚುವುದು

ಅನ್ನ, ಚಪಾತಿ, ಚಿತ್ರಾನ್ನ, ದೋಸೆ, ಇಟ್ಲಿ ಹೀಗೆ ಯಾವುದೇ ಆಹಾರಕ್ಕಾದರೂ ಈ ಮಾವಿಕ ಕಾಯಿ ತೊಕ್ಕು ಸ್ವಲ್ಪ ಇದ್ದರೆ ರುಚಿ ಇನ್ನೂ ಹೆಚ್ಚುವುದು. ನೀವು ಬಿರಿಯಾನಿಗೂ ಸೈಡ್‌ನಲ್ಲಿ ಮಾವಿನ ತೊಕ್ಕು ಸ್ವಲ್ಪ ಹಾಕಬಹುದು. ಈ ಮಾವಿನಕಾಯಿ ತೊಕ್ಕು ಮಾಡುವುದು ಹೇಗೆ ಎಂದು 'ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ:

ಮಾವಿನಕಾಯಿ 2-3 

1 ಚಮಚ ಮೆಣಸಿನ ಪುಡಿ 

ಸ್ವಲ್ಪ ಅರಿಶಿಣ ಪುಡಿ 

ಸ್ವಲ್ಪ ಇಂಗು 

ರುಚಿಗೆ ತಕ್ಕಷ್ಟು ಉಪ್ಪು 

1/2 ಚಮಚ ಮೆಂತೆ 

1/2 ಚಮಚ ಬೆಲ್ಲದ ಪುಡಿ

 2 ಚಮಚ ಸಾಸಿವೆಯೆಣ್ಣೆ 

( ತೆಂಗಿನೆಣ್ಣೆ ಕೂಡ ಬಳಸಬಹುದು, ಈ ಎರಡೂ ಎಣ್ಣೆ ವಾಸನೆ ನಿಮಗೆ ಇಷ್ಟವಿಲ್ಲದಿದ್ದರೆ ನೀವು ಬಳಸುವ ಅಡುಗೆಯೆಣ್ಣೆ ಬಳಸಬಹುದು) ಸಾಸಿವೆ.

ಮಾಡುವ ವಿಧಾನ:
ಮಾವಿನಕಾಯಿ ಸಿಪ್ಪೆ ಸುಲಿದು ತುರಿದು ಇಡಿ. ಈಗ ದಪ್ಪ ತಳವಿರುವ ಪಾತ್ರೆ ಬಿಸಿ ಮಾಡಿ. ನಂತರ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಮತ್ತು ಇಂಗು ಹಾಕಿ. ನಂತರ ತುರಿದ ಮಾವಿನಕಾಯಿ ತುರಿ ಸೇರಿಸಿ ಕಡಿಮೆ ಉರಿಯಲ್ಲಿ 4-5 ನಿಮಿಷ ಫ್ರೈ ಮಾಡಿ. ಮಾವಿನ ಕಾಯಿ ಮೆತ್ತಗಾದ ಮೇಲೆ ಮೆಣಸಿನ ಪುಡಿ, ಅರಿಶಿಣ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಇದೆ ಸಮಯದಲ್ಲಿ ಮೆಂತೆ ಪುಡಿ ಸ್ವಲ್ಪ ರೋಸ್ಟ್ ಮಾಡಿ ಸೇರಿಸಿ, ನಂತರ ಬೆಲ್ಲದ ಪುಡಿ ಸೇರಿಸಿ. 

ನಂತರ ಇನ್ನುಸ್ವಲ್ಪ ಹೊತ್ತು ಬೇಯಿಸ, ಹೀಗೆ ಬೇಯಿಸುವಾಗ ಸೌಟ್ನಿಂದ ಆಡಿಸಿ. ನಂತರ ಉರಿಯಿಂದ ಇಳಿಸಿ ನಂತರ ಒಗ್ಗರಣೆ ಪಾತ್ರೆಗೆ ಎಣ್ಣೆ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಸೇರಿಸಿ ಮಿಶ್ರಣ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ, ಫ್ರಿಡ್ಜ್ನಲ್ಲಿಟ್ಟರೆ ತುಂಬಾ ಸಮಯ ಬಳಕೆ ಬರುತ್ತದೆ.

ರೆಸಿಪಿ 2 ಬೇಕಾಗುವ ಸಾಮಗ್ರಿ:
ಸಿಪ್ಪೆ ಸುಲಿದು ತುರಿಯಿರಿ, ಶುಂಠಿಯನ್ನು ಕೂಡ ಸಿಪ್ಪೆ ಕೆತ್ತಿ ತುರಿಯಿರಿ. ನಂತರ ಮಾವಿನ ತುರಿ ಹಾಗೂ ಶುಂಠಿಯನ್ನು ಮಿಕ್ಸಿಯಲ್ಲಿ ಒಂದೆರಡು ರೌಂಡ್ ತಿರುಗಿಸಿ, ನೀರು ಸೇವಿಸಬಾರದು. ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ, ನಂತರ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ, ಸ್ವಲ್ಪ ಇಂಗು ಹಾಕಿ. ನಂತರ ಶುಂಠಿ ಮಾವಿನ ಕಾಯಿ ಪೇಸ್ಟ್ ಹಾಕಿ 5-6 ನಿಮಿಷ ಫ್ರೈ ಮಾಡಿ. ನಂತರ ಖಾರದ ಪುಡಿ, ಅರಿಶಿಣ ಪುಡಿ, ಉಪ್ಪು ಸೇರಿಸಿ ಮತ್ತೆ 4-5 ನಿಮಿಷ ಫ್ರೈ ಮಾಡಿ. ಬೆಲ್ಲ ಸೇರಿಸಿ, ಮೆಂತೆ ಪುಡಿ ಸೇರಿಸಿ ಮಿಕ್ಸ್ ಮಾಡಿ. ನಂತರ ಮತ್ತೆ 2 ನಿಮಿಷ ಬೇಯಿಸಿ. 

ಈಗ ಉರಿಯಿಂದ ಇಳಿಸಿ ತಣ್ಣಗಾದ ಮೇಲೆ ಗಾಳಿಯಾಡದ ಗಾಜಿನ ಡಬ್ಬದಲ್ಲಿ ಹಾಕಿಡಿ. ಈ ತೊಕ್ಕು ನೀವು ತಿಂಗಳವರೆಗೆ ಇಟ್ಟು ಬಳಸಬಹುದು. ಮಾವಿನಕಾಯಿ ಸೀಸನ್ನಲ್ಲಿ ಮನೆಯಲ್ಲಿ ಏನಾದರೂ ಪ್ರೋಗ್ರಾಂ ಇದ್ದರೆ ಇದನ್ನು ತಯಾರಿಸಿ, ಊಟದ ರುಚಿ ಹೆಚ್ಚಾಗುವುದು. ತೊಕ್ಕು ಮಾಡಲು ಹುಳಿ ಮಾವಿನಒಳ್ಳೆಯದು

ನೀವು ತೊಕ್ಕು ಮಾಡಲು ಹುಳಿ ಅಧಿಕವಿರುವ ಮಾವಿನಕಾಯಿ ಬಳಸಿದರೆ ಒಳ್ಳೆಯದು. ಹುಳಿ ಕಡಿಮೆ ಇದ್ದರೆ ಅಷ್ಟೊಂದು ರುಚಿ ಕೊಡಲಿಲ್ಲ. ಕೆಲವೊಂದು ಮಾವಿನಕಾಯಿ ಬಲಿತಿರುತ್ತದೆ, ಆದರೂ ಹುಳಿ ಇರುತ್ತದೆ, ಹಣ್ಣಾದಾಗ ಸಿಹಿಯಾಗುವುದು, ಅಂಥ ಮಾವಿನಕಾಯಿ ಬಳಸಿ.