ಮನೆ ಒರೆಸುವಾಗ ಈ ಕೆಲಸ ಮಾಡಿ, ಒಂದೂ ಸೊಳ್ಳೆಯೂ ಬರಲ್ಲ!

ಮಳೆಗಾಲ ಆರಂಭವಾದಂತೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ನೀವು ಮನೆಯಲ್ಲೇ ಕುಳಿತಿರಲಿ ಅಥವಾ ಹೊರಗೆ ಹೋಗುತ್ತಿರಲಿ, ಸೊಳ್ಳೆ ಕಚ್ಚೋದಂತೂ ಗ್ಯಾರಂಟಿ. ಸೊಳ್ಳೆ ಕಡಿತವು ಅಸಹನೀಯ ತುರಿಕೆ ಮತ್ತು ಚರ್ಮದ ಮೇಲೆ ಕೆಂಪು ದದ್ದುಗಳನ್ನು ಉಂಟು ಮಾಡುವುದಲ್ಲದೇ, ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್ ಗುನ್ಯಾದಂತಹ ಅಪಾಯಕಾರಿ ರೋಗಗಳನ್ನು ಹರಡುತ್ತದೆ.

ಸೊಳ್ಳೆಗಳನ್ನು ತಡೆಗಟ್ಟಲು ಅನೇಕ ಮಂದಿ ಕಾಯಿಲ್, ಧೂಪದ್ರವ್ಯದ ಕಡ್ಡಿಗಳು ಮತ್ತು ಮಸ್ಕಿಟೋ ಲಿಕ್ವೆಡ್ ಅನ್ನು ಬಳಸುತ್ತಾರೆ. ಆದರೆ ಇವುಗಳಲ್ಲಿರುವ ರಾಸಾಯನಿಕ ವಾಸನೆಯು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇವು ಉಸಿರಾಟದ ಸಮಸ್ಯೆ ಮತ್ತು ತಲೆನೋವಿನಂತಹ ಸಮಸ್ಯೆಗಳನ್ನು ಉಂಟು ಮಾಡಬಹುದು.

ಇದಲ್ಲದೇ, ಈ ವಿಧಾನಗಳು ಸೊಳ್ಳೆಗಳನ್ನು ತಾತ್ಕಾಲಿಕವಾಗಿ ಮಾತ್ರ ಹಿಮ್ಮೆಟ್ಟಿಸುತ್ತದೆ. ಸ್ವಲ್ಪ ಸಮಯದ ನಂತರ ಸೊಳ್ಳೆಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತದೆ. ಸೊಳ್ಳೆಗಳು ಸಾಮಾನ್ಯವಾಗಿ ಮನೆಯ ಮೂಲೆಗಳಲ್ಲಿ, ಪೀಠೋಪಕರಣಗಳ ಕೆಳಗೆ ಮತ್ತು ಕತ್ತಲೆ ಸ್ಥಳಗಳಲ್ಲಿ ಅಡಗಿಕೊಂಡಿರುತ್ತವೆ.

ಆದ್ದರಿಂದ, ಅವುಗಳನ್ನು ಸಂಪೂರ್ಣವಾಗಿ ತೊಡೆದುಹಾಕಲು ನೈಸರ್ಗಿಕ, ಆರೋಗ್ಯಕರ ವಿಧಾನಗಳನ್ನು ಅನುಸರಿಸುವುದು ಉತ್ತಮ. ಅದರಲ್ಲೂ ಪ್ರಮುಖವಾಗಿ ಮನೆಯನ್ನು ಒರೆಸಲು ಬಳಸುವ ನೀರಿಗೆ ಕೆಲವು ನೈಸರ್ಗಿಕ ಪದಾರ್ಥಗಳನ್ನು ಸೇರಿಸಿ ಮನೆ ಒರೆಸುವ ಮೂಲಕ ನೀವು ಯಾವ ರೀತಿಯಲ್ಲೂ ಹೆಚ್ಚು ಶ್ರಮ ಪಡದೇ ಸೊಳ್ಳೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.

ದಾಲ್ಚಿನ್ನಿ:
ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಈ ಮಸಾಲೆ ಸೊಳ್ಳೆಗಳ ಮಹಾ ಶತ್ರು. 2-3 ದಾಲ್ಚಿನ್ನಿ ಪೀಸ್ಗಳನ್ನು ಸ್ವಲ್ಪ ನೀರಿನಲ್ಲಿ ಕುದಿಸಿ, ಈ ನೀರನ್ನು ಬಕೆಟ್ಗೆ ಸುರಿದು ಮನೆ ಒರೆಸಲು ಬಳಸಿ. ಸೊಳ್ಳೆಗಳು ದಾಲ್ಚಿನ್ನಿ ವಾಸನೆಯನ್ನು ಸಹಿಸಿಕೊಳ್ಳುವುದಿಲ್ಲ. ಇದಲ್ಲದೇ, ಈ ವಾಸನೆಯು ಇರುವೆಗಳು ಮತ್ತು ಇತರ ಸಣ್ಣ ಕೀಟಗಳನ್ನು ದೂರವಿಡುತ್ತದೆ.

ವಿನೆಗರ್:
ಅಗ್ಗದ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುವ ಮತ್ತೊಂದು ನೈಸರ್ಗಿಕ ವಿಧಾನವೆಂದರೆ ವಿನೆಗರ್ ಬಳಕೆ. ಒಂದು ಬಕೆಟ್ ನೀರಿನಲ್ಲಿ ಒಂದು ಕಪ್ ವಿನೆಗರ್ ಬೆರೆಸಿ ಒರೆಸಬೇಕು. ವಿನೆಗರ್ ವಾಸನೆಯು ಸೊಳ್ಳೆಗಳನ್ನು ದೂರವಿಡುತ್ತದೆ. ಇದಲ್ಲದೇ, ನೆಲವನ್ನು ಹೊಳೆಯುವಂತೆ ಸ್ವಚ್ಛವಾಗಿಡುತ್ತದೆ.

ಪರಿಮಳ ತೈಲಗಳು: 
ಸೊಳ್ಳೆಗಳು ಲ್ಯಾವೆಂಡರ್ ಎಣ್ಣೆ ಮತ್ತು ಪುದೀನಾ ಸಾರಭೂತ ತೈಲದ ವಾಸನೆಯನ್ನು ಇಷ್ಟಪಡುವುದಿಲ್ಲ. ನೀವು ಒಂದು ಬಕೆಟ್ ನೀರಿಗೆ 8-10 ಹನಿ ಸಾರಭೂತ ತೈಲವನ್ನು ಸೇರಿಸಿ ಒರೆಸಿದರೆ, ಸೊಳ್ಳೆಗಳು ಮನೆಯೊಳಗೆ ಬರುವುದಿಲ್ಲ. ಜೊತೆಗೆ, ನಿಮ್ಮ ಮನೆಯೂ ಸುವಾಸನೆಯಿಂದ ಕೂಡಿರುತ್ತದೆ.

ಈ ನೈಸರ್ಗಿಕ ವಿಧಾನಗಳು ಕಡಿಮೆ ವೆಚ್ಚದ್ದಾಗಿದ್ದರೂ, ಇದರಿಂದ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ ಮತ್ತು ಸೊಳ್ಳೆಗಳನ್ನು ತಾತ್ಕಾಲಿಕವಾಗಿ ಅಲ್ಲ, ದೀರ್ಘಕಾಲದವರೆಗೆ ದೂರವಿಡುತ್ತವೆ. ವಿಶೇಷವಾಗಿ, ಮಕ್ಕಳು, ವಯಸ್ಕರು ಮತ್ತು ಸಾಕುಪ್ರಾಣಿಗಳ ಆರೋಗ್ಯಕ್ಕೆ ಯಾವುದೇ ಹಾನಿ ಆಗುವುದಿಲ್ಲ.

ಆದ್ದರಿಂದ, ರಾಸಾಯನಿಕ ಸುರುಳಿಗಳು ಮತ್ತು ಯಂತ್ರಗಳ ಬದಲಿಗೆ ಈ ನೈಸರ್ಗಿಕ ಮನೆ ಮದ್ದನ್ನು ಬಳಸಿಕೊಂಡು ಮಳೆಗಾಲದಲ್ಲಿ ಸೊಳ್ಳೆಗಳ ಕಾಟವನ್ನು ಕಡಿಮೆ ಮಾಡಬಹುದು.