ಎಳ್ಳು ಲಡ್ಡು ಭಾರತದ ಸಾಂಪ್ರದಾಯಿಕ ಸಿಹಿ ತಿನಿಸುಗಳಲ್ಲಿ ಒಂದಾಗಿದೆ. ಇದನ್ನು ಸಾಮಾನ್ಯವಾಗಿ ಹಬ್ಬಗಳು, ವಿಶೇಷ ಸಂದರ್ಭಗಳು ಮತ್ತು ಚಳಿಗಾಲದಲ್ಲಿ ತಯಾರಿಸಲಾಗುತ್ತದೆ. ಈ ಲಡ್ಡುಗಳನ್ನು ಎಳ್ಳು ಬೀಜಗಳು, ಬೆಲ್ಲ, ಮತ್ತು ತುಪ್ಪವನ್ನು ಬಳಸಿ ತಯಾರಿಸಲಾಗುತ್ತದೆ. ಇದು ರುಚಿ ಮತ್ತು ಆರೋಗ್ಯದ ಪರಿಪೂರ್ಣ ಸಂಯೋಜನೆಯಾಗಿದೆ. ಈ ಪೌಷ್ಟಿಕಾಂಶಯುಕ್ತ ಲಡ್ಡುಗಳು ದೇಹಕ್ಕೆ ಶಕ್ತಿ ಮತ್ತು ಉಷ್ಣತೆಯನ್ನು ಒದಗಿಸುತ್ತವೆ. ಕಬ್ಬಿಣ, ಕ್ಯಾಲ್ಸಿಯಂ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುವ ಎಳ್ಳು ಲಡ್ಡುಗಳು ಅತ್ಯಂತ ಪೌಷ್ಟಿಕವಾಗಿವೆ. ಹಾಗಿದ್ರೆ, ಎಳ್ಳು ಲಡ್ಡು ತಯಾರಿಸಲು ಬೇಕಾದ ಪದಾರ್ಥಗಳು ಮತ್ತು ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ.
ಬೇಕಾಗುವ ಸಾಮಗ್ರಿಗಳು:
• ಬಿಳಿ ಎಳ್ಳು - 1 ಕಪ್
• ಬೆಲ್ಲ - ಅರ್ಧ ಕಪ್ (ತುರಿದ ಅಥವಾ ಸಣ್ಣಗೆ ಕತ್ತರಿಸಿದ)
• ತುಪ್ಪ - 1 ಸ್ಪೂನ್ (ಅಗತ್ಯಕ್ಕೆ ತಕ್ಕಷ್ಟು)
• ಏಲಕ್ಕಿ ಪುಡಿ - ಅರ್ಧ ಸ್ಪೂನ್
• ಹುರಿದ ಕಡಲೆಕಾಯಿ ಅಥವಾ ಒಣ ಕೊಬ್ಬರಿ - 2 ಅಥವಾ 3 ಸ್ಪೂನ್
ಈಗ ಸಿದ್ಧವಾದ ಬೆಲ್ಲದ ಸಿರಪ್ಗೆ ಹುರಿದ ಎಳ್ಳು ಮತ್ತು ಹುರಿದ ಕಡಲೆಕಾಯಿ ಬೀಜಗಳನ್ನು ಹಾಕಿ. ಬಳಿಕ, ಏಲಕ್ಕಿ ಪುಡಿಯನ್ನು ಹಾಕಿ. ಪಾಕ ಬಿಸಿಯಾಗಿರುವಾಗಲೇ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಒಂದು ತಟ್ಟೆಗೆ ಸುರಿಯಿರಿ. ಈಗ ನಿಮ್ಮ ಕೈಗಳಿಗೆ ಸ್ವಲ್ಪ ತುಪ್ಪವನ್ನು ಸವರಿಕೊಂಡು, ಬಿಸಿಯಿರುವಾಗಲೇ ಸಣ್ಣ ಸಣ್ಣ ಉಂಡೆ ಅಥವಾ ಲಡ್ಡುಗಳನ್ನು ಕಟ್ಟಿ. ಲಡ್ಡುಗಳು ತಣ್ಣಗಾದ ನಂತರ, ಗಾಳಿಯಾಡದ ಡಬ್ಬದಲ್ಲಿ ಹಾಕಿ. ಹೀಗೆ ಸುಲಭವಾಗಿ ರುಚಿಕರ ಮತ್ತು ಪೌಷ್ಟಿಕ ಎಳ್ಳು ಲಡ್ಡುಗಳನ್ನು ಮನೆಯಲ್ಲಿಯೇ ತಯಾರಿಸಬಹುದು.
ಎಳ್ಳಿನ ಲಡ್ಡುಗಳನ್ನು ತಿನ್ನುವುದರಿಂದ ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಿರುವ ಉಷ್ಣತೆ ಮತ್ತು ಶಕ್ತಿ ಸಿಗುತ್ತದೆ. ಎಳ್ಳಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ಕಬ್ಬಿಣದಂತಹ ಖನಿಜಾಂಶಗಳು ಹೇರಳವಾಗಿವೆ. ಇದು ಮೂಳೆಗಳ ಆರೋಗ್ಯಕ್ಕೆ ಮತ್ತು ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಬೆಲ್ಲವು ಕಬ್ಬಿಣಾಂಶದ ಉತ್ತಮ ಮೂಲವಾಗಿದ್ದು, ದೇಹಕ್ಕೆ ಶಕ್ತಿ ನೀಡುತ್ತದೆ.