ದಿನ ನಿತ್ಯಲೂ ಎಷ್ಟು ನಿಮಿಷ ಹಲ್ಲುಜ್ಜಬೇಕು? ಇಲ್ಲಿದೆ ಮಾಹಿತಿ!

ಬೆಳಗ್ಗೆ ಎದ್ದ ಕೂಡಲೆ ಹಲ್ಲು ಉಜ್ಜುವುದು ಕಾಮನ್. ಆದರೆ ಬ್ರಷ್ ಮಾಡುವ ಕುರಿತ ಅರಿವು ನಮಗೆ ಕಡಿಮೆ ಇದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆರೋಗ್ಯಕರ ಅಭ್ಯಾಸವಾಗಿ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವಂತೆ ಹೇಳಲಾಗಿದೆ. ಆದರೆ ಭಾರತದಲ್ಲಿ ಬಹುತೇಕ ಮಂದಿ ಬೆಳಗ್ಗೆ ಒಂದು ಬಾರಿ ಮಾತ್ರವೇ ಹಲ್ಲುಜ್ಜುತ್ತಾರೆ. ಇನ್ನು ರಾತ್ರಿ ಊಟದ ಬಳಿಕ ಹಲ್ಲುಜ್ಜಲು ವೈದ್ಯರು ಕೂಡ ಶಿಫಾರಸು ಮಾಡುತ್ತಾರೆ. ಆದರೆ ಅದನ್ನು ಕೆಲವೇ ಮಂದಿ ಅನುಸರಿಸುತ್ತಾರೆ.

ರಾತ್ರಿ ನಾವು ಹಲ್ಲುಜ್ಜುವುದರಿಂದ ಹಲ್ಲುಗಳಲ್ಲಿ ಕ್ಯಾವಿಟಿ ಉಂಟಾಗುವುದಿಲ್ಲ. ಇದರಿಂದ ಹಲ್ಲುಗಳು ಹುಳುಕಾಗುವ ಭೀತಿ ಇರುವುದಿಲ್ಲ. ಹಾಗೆ ಹಲ್ಲುಜ್ಜುವ ಪ್ರಕ್ರಿಯೆ ಸರಿಯಾಗಿ ಮಾಡಬೇಕು ಎಂಬ ಸಲಹೆ ಕೂಡ ನೀಡುವುದು ನೋಡಬಹುದು. ಆದರೆ ಎಷ್ಟು ನಿಮಿಷಗಳ ಕಾಲ ಹಲ್ಲುಜ್ಜಬೇಕು ಎಂಬ ಕುರಿತು ನಿಮಗೆ ತಿಳಿದಿದ್ಯಾ?

ಇತ್ತೀಚಿನ ದಿನಗಳಲ್ಲಿ ಸಿಗುತ್ತಿರುವ ಟೂಥ್‌ ಪೇಸ್ಟ್‌ಗಳು ಹೆಚ್ಚಾಗಿ ರಾಸಾಯಿನಿಗಳಿಂದಲೇ ಮಾಡಿರುತ್ತಾರೆ. ಅವು ನಮ್ಮ ಹಲ್ಲುಗಳ ರಕ್ಷಣೆಯ ಬದಲಿಗೆ ಅನೇಕ ರೀತಿಯಲ್ಲಿ ನಮಗೆ ಹಾನಿ ಮಾಡುವುದೇ ಹೆಚ್ಚು. ಹಾಗೆ ಈ ರಾಸಾಯನಿಕಗಳು ಹೆಚ್ಚು ಸಮಯ ನಮ್ಮ ಹಲ್ಲುಗಳ ಮೇಲೆ ಇದ್ದರೆ ಅದರಿಂದಲೂ ಹಾನಿಯಾಗುತ್ತದೆ ಎಂಬ ವಿಚಾರ ನಿಮಗೆ ಗೊತ್ತಾ? ಅಮೇರಿಕನ್ ಡೆಂಟಲ್ ಅಸೋಸಿಯೇಷನ್ (ADA) ನ ಪ್ರಸ್ತುತ ಶಿಫಾರಸುಗಳು ದಿನಕ್ಕೆ ಎರಡು ಬಾರಿ ಎರಡು ನಿಮಿಷಗಳ ಕಾಲ ಹಲ್ಲುಜ್ಜುವುದನ್ನು ಶಿಫಾರಸ್ಸು ಮಾಡಿದೆ. 

2 ನಿಮಿಷದಕ್ಕಿಂತಲೂ ಕಡಿಮೆ ಸಮಯ ಹಲ್ಲುಜ್ಜುವುದರಿಂದ ಹಲ್ಲುಗಳಲ್ಲಿನ ಫ್ಲೇಕ್ ತೆಗೆಯಲು ಸಾಧ್ಯವಿಲ್ಲ ತಜ್ಞರು ಹೇಳಿದ್ದಾರೆ. ಹಾಗೆ ಬಹುತೇಕ ಮಂದಿ ಕೇವಲ 45 ಸೆಕೆಂಡುಗಳ ಕಾಲ ಮಾತ್ರವೇ ಹಲ್ಲುಜ್ಜುತ್ತಾರೆ ಎಂದು ವರದಿ ಹೇಳಿದೆ. ಸಾಮಾನ್ಯವಾಗಿ ಎರಡೂವರೆ ನಿಮಿಷಕ್ಕಿಂತ ಹೆಚ್ಚು ಸಮಯ ಹಲ್ಲುಜ್ಜುವುದು ಕೂಡ ಒಳ್ಳೆಯ ಅಭ್ಯಾಸ ಅಲ್ಲವಂತೆ. ಹಲ್ಲುಗಳು ಸ್ವಚ್ಛವಾಗಲು ಕೇವಲ 120 ಸೆಕೆಂಡುಗಳು ಹಲ್ಲುಗಳ ಉಜ್ಜಬೇಕಂತೆ. ಅದಕ್ಕಿಂತ ಹೆಚ್ಚು ಸಮಯ ಹಲ್ಲುಜ್ಜುವುದು ಉತ್ತಮ ಅಭ್ಯಾಸವಲ್ಲ ಎಂದು ಹೇಳಲಾಗಿದೆ.

ಮೌತ್ ವಾಷ್ ಬಳಸಬಹುದೇ? ಹಲವರು ದಿನದಲ್ಲಿ ಒಂದು ಭಾರಿ ಬ್ರಷ್ ಮಾಡಿ ರಾತ್ರಿ ಮೌತ್ ವಾಷ್ ಬಳಸುತ್ತಾರೆ. ಮೌತ್ ವಾಷ್‌ನಿಂದ ಬಾಯಿಯ ದುರ್ಗಂಧ ನಿವಾರಣೆ ಮಾಡಬಹುದೇ ಹೊರತು ಹಲ್ಲುಗಳನ್ನು ಸ್ವಚ್ಛ ಮಾಡಲು ಸಾಧ್ಯವಿಲ್ಲ ಹೀಗಾಗಿ ಮೌತ್ ವಾಷ್‌ಗಿಂತ ಬ್ರಷ್ ಮಾಡುವುದೇ ಉತ್ತಮ ಅಭ್ಯಾಸವಾಗಿರಲಿದೆ. ಹಲ್ಲುಜ್ಜುವಾಗ ನೀವು ಮಾಡುವ ತಪ್ಪುಗಳೇನು?

ಸಾಮಾನ್ಯವಾಗಿ ಹಲ್ಲುಜ್ಜುವ ಸಮಯಲ್ಲಿ ನೀವು ಮಾಡುವಂತಹ ತಪ್ಪುಗಳೆಂದರೆ ಹಲ್ಲು ಬಹುಬೇಗ ಸ್ವಚ್ಛವಾಗಲಿ ಎಂಬ ಕಾರಣಕ್ಕೆ ಬಲವಾಗಿ ಒತ್ತಡ ಹಾಕಿ ಉಜ್ಜುವುದು. ಇದರಿಂದ ಹಲ್ಲು ಸ್ವಚ್ಛವಾಗುವ ಜೊತೆಗೆ ಹಲ್ಲಿನ ಮೇಲ್ಪದರಕ್ಕೆ ಹಾನಿಯಾಗುತ್ತದೆ. ಹೀಗಾಗಿ ಬ್ರಷ್ ಅನ್ನು ಸೌಮ್ಯವಾಗಿ ಹಿಡಿದು ನಿಧಾನವಾಗಿ ಉಜ್ಜಬೇಕು. ಆಧುನಿಕ ಬ್ರಷ್‌ಗಳ ಬಳಕೆ ಕೂಡ ಈಗ ಹೆಚ್ಚಾಗಿದೆ. ವಿದ್ಯುತ್ ಚಾಲಿತ ಬ್ರಷ್‌ಗಳ ಬಳಸಿ ಹಲ್ಲುಜ್ಜುತ್ತಾರೆ. ಆದ್ರೆ ಅದಕ್ಕಿಂತ ನಿಮ್ಮ ಸಾಮಾನ್ಯ ಬ್ರಷ್‌ಗಳು ಬಹಳ ಉತ್ತಮ ಎಂದು ಹೇಳಲಾಗುತ್ತದೆ. ಈ ಬ್ರಷ್‌ಗಳು ಹಲ್ಲುಗಳ ಮೇಲಿ ಪದರ ಹಾಗೂ ಒಸಡುಗಳಲ್ಲಿನ ಕೊಳೆ ಸ್ವಚ್ಛ ಮಾಡುವುದಿಲ್ಲ ಎನ್ನಲಾಗುತ್ತದೆ.