ಇಷ್ಟೆಲ್ಲ ಲಾಭಗಳನ್ನು ಹೊಂದಿರುವ ಈ ಮೀನನ್ನು ತಿನ್ನುವುದೇ ಒಂದು ಕಷ್ಟಕರವಾಗುತ್ತದೆ. ಅದರಲ್ಲೂ ಹೊಸಬರು ಮೀನು ತಿನ್ನಲು ಹೋದಾಗ ಮೀನಿನ ಮುಳ್ಳು ಗಂಟಲಿಗೆ ಸಿಕ್ಕಿ ಹಾಕಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಹಾಗಿದ್ರೆ ಗಂಟಲಿನಲ್ಲಿ ಸಕ್ಕಿಹಾಕಿಕೊಂಡ ಮೀನಿನ ಮುಳ್ಳನ್ನು ಹೊರ ತೆಗೆಯುವುದೇಗೆ ಎಂಬುದನ್ನು ತಿಳಿಯೋಣ.
ಮುಳ್ಳು ಸಿಲುಕಿಕೊಂಡಾಗ ಏನು ಮಾಡಬೇಕು?
1) ಗಂಟಲಿನಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡರೆ ಒಂದು ಬಾಳೆಹಣ್ಣನ್ನು ತೆಗೆದುಕೊಂದು ತಿನ್ನಬೇಕು. ಗಂಟಲಿನಿಂದ ಮುಳ್ಳು, ಬಾಳೆಹಣ್ಣಿನ ಜೊತೆಗೆ ಹೊಟ್ಟೆಯೊಳಗೆ ಹೋಗುತ್ತದೆ. ನಿಧಾನವಾಗಿ ಹೊಟ್ಟೆಯಲ್ಲಿನ ಆಮ್ಲವು ಮುಳ್ಳುಗಳನ್ನು ಕರಗಿಸಲು ಸಹಾಯ ಮಾಡುತ್ತದೆ.
2) ನಿಂಬೆಹಣ್ಣಿನ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ ಅದರ ರಸವನ್ನು ಕುಡಿಯಿರಿ. ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲವು ಮುಳ್ಳು ಹೊಟ್ಟೆಗೆ ಹೋಗಲು ಸಹಾಯ ಮಾಡುತ್ತದೆ ಹಾಗೂ ಮಲವನ್ನು ಮೃದುಗೊಳಿಸುತ್ತದೆ.
3) ಅನ್ನದ ಸಣ್ಣ ಉಂಡೆಗಳನ್ನು ಮಾಡಿ ನುಂಗುವುದು ಉತ್ತಮ. ಬಾಳೆಹಣ್ಣಿನಂತೆ, ಅನ್ನವು ಸಹ ಮುಳ್ಳನ್ನು ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ ಅನ್ನವನ್ನು ಅಗಿಯುವ ಬದಲಾಗಿ ಉಂಡೆ ಮಾಡಿ ನುಂಗಬೇಕು.
4) ಹೆಚ್ಚಿನ ಮೀನಿನ ಮೂಳೆಗಳು ನಿಮ್ಮ ಗಂಟಲಿನ ಹಿಂಭಾಗದಲ್ಲಿ, ನಿಮ್ಮ ಟಾನ್ಸಿಲ್ಗಳ ಸುತ್ತಲೂ ಸಿಲುಕಿಕೊಳ್ಳುತ್ತವೆ. ಹಾಗಾಗಿ ಜೋರಾಗಿ ಕೆಮ್ಮಲು ಪ್ರಯತ್ನಿಸುವುದರಿಂದ ಬಲವಾದ ಕೆಮ್ಮಿನಿಂದ ಮುಳ್ಳನ್ನು ಹೊರಗೆ ತರಬಹುದು.
ಒಂದು ವೇಳೆ ಮುಳ್ಳಿನ ಸಮಸ್ಯೆ ನಿವಾರಣೆಯಾಗದೆ ಇದ್ದರೆ, ಊಟ ಮಾಡುವಾಗ, ಗಂಟಲಿನಲ್ಲಿ ಅಥವಾ ಅನ್ನನಾಳದಲ್ಲಿ ನೋವು ಉಂಟಾಗಿದ್ದರೆ, ಕೂಡಲೇ ವೈದ್ಯರನ್ನು ಭೇಟಿ ಮಾಡಿ. ಪರೀಕ್ಷೆಗೆ ಒಳಗಾಗಿ ಏಕೆಂದರೆ ಮೀನಿನ ಮುಳ್ಳು ಹಾಗೇ ಉಳಿದರೆ ಆ ಭಾಗದಲ್ಲಿ ಸೋಂಕು ಎದುರಾಗಬಹುದು. ಇನ್ನೂ ಮುಳ್ಳು ಗಂಟಲಿನ ಅನ್ನನಾಳದ ಭಾಗದಲ್ಲಿ ಚುಚ್ಚಿಕೊಂಡಿದ್ದರೆ ಶಸ್ತ್ರಚಿಕಿತ್ಸೆ ಮಾಡುವ ಅವಶ್ಯಕತೆಯೂ ಇರುತ್ತದೆ.