ಮನೆಯಲ್ಲಿ ಎಲ್ಲಿ ನೋಡಿದ್ರೂ ಇಲಿ-ಹೆಗ್ಗಣಗಳ ಕಾಟ ಹೆಚ್ಚಾಗಿದ್ಯಾ? ಕೇವಲ ಮೆಣಸಿನಿಂದಲೇ ಹೀಗೆ ಓಡ್ಸಿ!

ಮನೆಯಲ್ಲಿ ಜಿರಳೆ, ಹಲ್ಲಿ ಮತ್ತು ಇಲಿಗಳ ಕಾಟ ಸಾಮಾನ್ಯ. ಅದರಲ್ಲೂ ಹಂಚಿನ ಮನೆಗಳಲ್ಲಿ ಇಲಿಗಳ ಕಾಟ ಹೆಚ್ಚು. ಇಲಿಗಳು ಮನೆಯಲ್ಲಿ ಯಾವ ವಸ್ತು ಕೂಡ ಸರಿಯಾಗಿ ಇರುವುದಿಲ್ಲ. ಅಡುಗೆ ಸಾಮಾಗ್ರಿಯಿಂದ ಹಿಡಿದು ಫೈಬರ್ ವಸ್ತುಗಳವರೆಗೆ ಎಲ್ಲವನ್ನೂ ಇಲಿ ಕೊರೆದು ಬಿಡುತ್ತದೆ. ಜೊತೆಗೆ ಮನೆಯಲ್ಲಿರುವ ಕಾಗದ, ರೇಷ್ಮೆ ಎಲ್ಲ ಬಟ್ಟೆಗಳನ್ನು ಚಿಂದಿ ಮಾಡುತ್ತವೆ. ಹೀಗೆ ಇಲಿಗಳು ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಹಾನಿ ಮಾಡುತ್ತವೆ.

ಇಲಿಗಳನ್ನು ಹಿಮ್ಮೆಟ್ಟಿಸಲು ನಿಮಗೆ ದುಬಾರಿ ರಾಸಾಯನಿಕಗಳು ಅಥವಾ ಇಲಿ ಪಾಷಣದ ಅಗತ್ಯವಿಲ್ಲ. ನಿಮ್ಮ ಅಡುಗೆ ಮನೆಯಲ್ಲಿರುವ ಪ್ರಮುಖ ಮಸಾಲೆ ಪದಾರ್ಥ ಕರಿಮೆಣಸು ಒಂದೇ ಇಲಿಗಳನ್ನು ಓಡಿಸುತ್ತದೆ.

ಸಾಮಾನ್ಯವಾಗಿ ಆಹಾರದಲ್ಲಿ ಬಳಸುವ ಕರಿಮೆಣಸು ರುಚಿ ಹೆಚ್ಚಿಸುವುದಲ್ಲದೇ ಆರೋಗ್ಯಕ್ಕೆ ಕೂಡ ಒಳ್ಳೆಯದು. ಆಯುರ್ವೇದದ ಪ್ರಕಾರ, ಈ ಮಸಾಲೆ ಅನೇಕ ಕಾಯಿಲೆಗಳಿಗೆ ಪ್ರಯೋಜನಕಾರಿಯಾಗಿದೆ, ಆದರೆ ಇದರ ಕಟುವಾದ ವಾಸನೆಯು ಇಲಿಗಳಿಗೆ ನಿರೋಧಕವಾಗಿದೆ. ಇದರ ಕಟುವಾದ ವಾಸನೆಯು ಇಲಿಗಳನ್ನು ಬೇರೆಡೆಗೆ ಸೆಳೆಯುವಲ್ಲಿ ಮತ್ತು ಹಿಮ್ಮೆಟ್ಟಿಸುವಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಕರಿಮೆಣಸು ಬಳಸುವುದು ಹೇಗೆ?: 
ಕರಿಮೆಣಸನ್ನು ಪೌಡರ್ ಮಾಡಿ ನಂತರ ಇಲಿಗಳು ಹೆಚ್ಚಾಗಿ ಕಂಡು ಬರುವ ಪ್ರದೇಶಗಳಿಗೆ - ಅಡುಗೆಮನೆಯ ಮೂಲೆಗಳು, ಕಪಾಟುಗಳ ಹಿಂದೆ, ಗ್ಯಾಸ್ ಸ್ಟೌವ್ಗಳ ಸುತ್ತಲೂ ಅಥವಾ ಶೇಖರಣಾ ಕೊಠಡಿಗಳ ಬಿರುಕುಗಳಂತಹವುಗಳಿಗೆ ಹಚ್ಚಿ.

ನಿಮ್ಮ ಮನೆಯಲ್ಲಿ ಶಾಶ್ವತ ಇಲಿ ಕಾಟವಿದ್ದರೆ, ಕರ್ಪೂರ ಮತ್ತು ಪುದೀನಾ ಎಣ್ಣೆಯನ್ನು ಕರಿಮೆಣಸಿನೊಂದಿಗೆ ಬೆರೆಸಿ ಹತ್ತಿ ಉಂಡೆಯನ್ನು ಮಾಡಿ ಆ ಪ್ರದೇಶದಲ್ಲಿ ಇರಿಸಿ. ಈ ಮಿಶ್ರಣವು ನೈಸರ್ಗಿಕ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.

ಎಚ್ಚರಿಕೆಯೂ ಮುಖ್ಯ: 
ಕಪ್ಪು ಮೆಣಸು ಸುರಕ್ಷಿತ ಮನೆಮದ್ದಾಗಿದ್ದರೂ, ಚಿಕ್ಕ ಮಕ್ಕಳಿರುವ ಮನೆಯಲ್ಲಿ ಇದನ್ನು ಮಿತವಾಗಿ ಬಳಸಿ. ಇದರ ಬಲವಾದ ವಾಸನೆಯು ಮಕ್ಕಳು ಮತ್ತು ಸಾಕು ಪ್ರಾಣಿಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ.