ಇದು ಹಲವು ಕಾರಣಗಳಿಂದ ಸಂಭವಿಸಬಹುದು. ಕೆಲವೊಮ್ಮೆ ಹಲ್ಲಿನ ಕಾಯಿಲೆಯಿಂದಾಗಿ ಒಸಡುಗಳಲ್ಲಿ ರಕ್ತಸ್ರಾವವಾಗುತ್ತದೆ. ಇದರೊಂದಿಗೆ ಇತರ ಹಲವು ಗಂಭೀರ ಕಾಯಿಲೆಗಳ ಸಂಕೇತವೂ ಆಗಿರಬಹುದು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಒಸಡುಗಳಲ್ಲಿ ರಕ್ತಸ್ರಾವವಾಗಲು ಇನ್ನೂ ಹಲವು ಕಾರಣಗಳಿವೆ.
ಇದು ಯಾವುದೇ ಹಲ್ಲಿನ ಕಾಯಿಲೆ ಅಥವಾ ಗಾಯದಿಂದಲೂ ಉಂಟಾಗಬಹುದು. ಹೃದಯ ಸಂಬಂಧಿತ ಕಾಯಿಲೆಗಳು ಸಹ ಒಸಡುಗಳಿಂದ ರಕ್ತಸ್ರಾವಕ್ಕೆ ಕಾರಣವಾಗಬಹುದು ಬಸಡುಗಳಿಂದ ರಕ್ತಸ್ರಾವವನ್ನು ಹಗುರವಾಗಿ ಪರಿಗಣಿಸಬಾರದು. ಯಾವುದೇ ಕಾರಣವಿಲ್ಲದೆ ಒಸಡುಗಳಲ್ಲಿ ರಕ್ತಸ್ರಾವವಾಗುತ್ತಿದ್ದರೆ, ಅದರ ಕಾರಣಗಳನ್ನು ಕಂಡುಹಿಡಿದು ಸೂಕ್ತ ಚಿಕಿತ್ಸೆ ನೀಡಬೇಕು.
ಒಸಡುಗಳಲ್ಲಿ ರಕ್ತಸ್ರಾವವಾಗುವುದು ಹೃದಯ ಕಾಯಿಲೆಯ ಲಕ್ಷಣವೂ ಆಗಿರಬಹುದು ಎಂದು ಹೇಳಲಾಗಿದೆ. ಅಂದಹಾಗೆ, ಇದು ಯಾವಾಗಲೂ ಹೃದಯ ಕಾಯಿಲೆಯ ಸಂಕೇತವಲ್ಲ. ಬದಲಿಗೆ ಒಸಡುಗಳಲ್ಲಿ ರಕ್ತಸ್ರಾವವಾಗುವುದು ಸಾಮಾನ್ಯ ಲಕ್ಷಣವಾಗಿದೆ. ಇದು ಅಲ್ಪ ಮಟ್ಟಿಗೆ ಹೃದಯ ಕಾಯಿಲೆಗೆ ಸಂಬಂಧಿಸಿದ್ದಾಗಿದ್ದು, ಬಾಯಿಯಲ್ಲಿರುವ ಬ್ಯಾಸ್ಟೀರಿಯಾಗಳು ರಕ್ತಪ್ರವಾಹಕ್ಕೆ ಪ್ರವೇಶಿಸಿ ಉರಿಯೂತವನ್ನು ಉಂಟುಮಾಡುತ್ತವೆ.ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಒಸಡುಗಳಲ್ಲಿ ರಕ್ತಸ್ರಾವವಾಗುವುದು ನಿಮಗೆ ಹೃದಯ ಕಾಯಿಲೆ ಇದೆ ಎಂದು ಖಚಿತಪಡಿಸುವುದಿಲ್ಲ. ಇದು ಒಸಡು ಕಾಯಿಲೆಯ ಲಕ್ಷಣವಾಗಿರಬಹುದು ಹಾಗಾಗಿ ಇದು ಸಾಮಾನ್ಯ ಸಮಸ್ಯೆ ಎಂದು ಹೇಳಾಗಿದೆ.