ಮಸಲಾ ಪಾವ್ ಒಂದು ಜನಪ್ರಿಯ ಭಾರತೀಯ ಸ್ಟ್ರೀಟ್ ಫುಡ್ ಆಗಿದ್ದು, ಸಂಜೆಯ ತಿಂಡಿಗೆ ಸೂಕ್ತವಾದ ರುಚಿಕರ ತಿನಿಸು. ಸಾಮಾನ್ಯವಾಗಿ ಸಂಜೆ 4 ರಿಂದ 6 ಗಂಟೆಯ ನಡುವೆ ಸವಿಯಲಾಗುವ ಈ ತಿಂಡಿಗಳು ರುಚಿಕರವಾಗಿಯೂ ಸುಲಭವಾಗಿಯೂ ತಯಾರಾಗುತ್ತವೆ. ಈ ತಿಂಡಿಯನ್ನು ಇದನ್ನು 20-25 ನಿಮಿಷಗಳಲ್ಲಿ ತಯಾರಿಸಬಹುದು. ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಪದಾರ್ಥಗಳು
ಚೀಸ್
2 ಈರುಳ್ಳಿ
1 ದೊಡ್ಡ ಮೆಣಸಿನಕಾಯಿ
2 ಟೊಮೆಟೊ
ಗರಂ ಮಸಾಲ
ದನಿಯಾ ಪುಡಿ
ಅರಿಶಿಣ ಪುಡಿ
5 ಒಣ ಮೆಣಸಿನಕಾಯಿ
ಪಾವ್ಬಜಿ ಮಸಾಲ
ಕೊತ್ತುಂಬರಿ
ನಿಂಬೆಹಣ್ಣು
ಬನ್
ಮಾಡುವ ವಿಧಾನ:
ಮೊದಲು ಒಂದು ಮಿಕ್ಸಿ ಜಾರಿಗೆ ಬೆಳ್ಳುಳ್ಳಿ, ಒಣ ಮೆಣಸು ಹಾಕಿ ರುಬೊಂಡು ರುಬ್ಬಿ ಪಕ್ಕಕ್ಕಿಟ್ಟುಕೊಳ್ಳಿ ನಂತರ ಒಂದು ಬಾಣಲೆಗೆ ಚೀಸ್ ಹಾಕಿ ಕರಗಿಸಿಕೊಳ್ಳಿ, ಅದಕ್ಕೆ ಈರುಳ್ಳಿ, ಮೆಣಸಿನಕಾಯಿ (ಕ್ಯಾಲ್ಸಿಯಂ), ಟೊಮೆಟೋ, ಗರಂಮಸಾಲ, ದನಿಯಾ, ಅರಿಶಿಣ ಪುಡಿ, ರುಬ್ಬಿದಂತಹ ಮಿಶ್ರಣ ಹಾಗೂ ಪಾವಬಾಜಿ ಮಸಾಲವನ್ನು ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಿ, ನಂತರ ಬನ್ಗಳನ್ನು ತೆಗೆದುಕೊಂಡು ಅದನ್ನು 2 ಭಾಗ ಕತ್ತರಿಸಿ ಅದಕ್ಕೆ ಮಾಡಿಟ್ಟುಕೊಂಡಿರುವ ಮಿಶ್ರಣವನ್ನು ಎರಡೂ ಬನ್ಗಳಿಗೆ ಹಚ್ಚಿರಿ. ಅದರ ಮೇಲೆ ಚೀಸ್ ಇಡಿ.
ಈಗ ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಗೂ ರೆಡಿಮಾಡಿಟ್ಟಿರುವ ಮಿಶ್ರಣವನ್ನು ಸ್ವಲ್ಪ ಹಾಕಿ. ಸ್ಮಷ್ಟಿಂಗ್ ಮಾಡಿಟ್ಟಿರುವ ಬನ್ಗಳನ್ನು 2 ಭಾಗ ಸ್ವಲ್ಪ ಸಮಯದ ಕಾಲ ಬೇಯಿಸಿ. ಅದಕ್ಕೆ ಕೊತ್ತುಂಬರಿ ಸೊಪ್ಪು, ಹಾಗೂ ನಿಂಬೆಹಣ್ಣು ಸೇರಿಸಿ. ಬಿಸಿಬಿಸಿ ಇರುವಾಗಲೇ ಸೇವಿಸಿ ರುಚಿಕರವಾದ ಮಸಾಲ ಪಾವ್.