ವ್ಯಕ್ತಿ ಎಮೋಷನಲಿ ಮೆಚ್ಯೂರ್ ಇಲ್ಲ ಎಂದು ಈ ಗುಣಗಳಿಂದಲೇ ತಿಳಿಯಬಹುದು

ನಮ್ಮ ಸ್ವಭಾವ, ನಮ್ಮ ವರ್ತನೆ ನೋಡಿ ಜನರು ನಮ್ಮ ಬಗ್ಗೆ ಅಭಿಪ್ರಾಯ ಬೆಳೆಸಿಕೊಳ್ಳುತ್ತಾರೆ. ಕೆಲವರ ವರ್ತನೆ ನೋಡಿದಾಗ ಇನ್ನೂ ಮಕ್ಕಳ ರೀತಿ ಆಡುತ್ತಿದ್ದಾರೆ ಒಂದು ಮೆಚ್ಯೂರ್ ಆಲೋಚನೆಯಿಲ್ಲ ಎಂದ ಅನಿಸುವುದು. ನಾವು ನಮ್ಮ ಭಾವನೆಗಳ ಮೇಲೆ ಎಷ್ಟು ಹಿಡಿತವನ್ನು ಹೊಂದಿರುತ್ತೇವೋ ಅಷ್ಟು ಗಂಭೀರವಾಗಿರುತ್ತೇವೆ. ಜನ ನಮ್ಮನ್ನು ಗೌರವಿಸುತ್ತಾರೆ. ಒಬ್ಬ ವ್ಯಕ್ತಿ ಎಮೋಷನಲಿ ಮೆಚ್ಯೂರ್ ಅಲ್ಲ ಎಂಬುವುದು ಅವರ ಈ ಗುಣಗಳಿಂದಲೇ ತಿಳಿಯಬಹುದು.

ಕ್ಷಮೆ ಕೇಳಲು ಒಪ್ಪದಿರುವುದು:
ತಮ್ಮಿಂದ ತಪ್ಪಾದರೆ ಕ್ಷಮೆ ಕೇಳುವುದು ದೊಡ್ಡತನ, ಆದರೆ ಕೆಲವರು ಕ್ಷಮೆ ಕೇಳಲು ಒಪ್ಪುವುದಿಲ್ಲ, ತಾವು ಹೇಳಿದ್ದೇ ಸರಿ ಎಂದು ಭಾವಿಸುತ್ತಾರೆ, ಈ ಬಗೆಯ ವರ್ತನೆ ತೋರಿದಾಗ ಬೇರೆಯವರಿಗೆ ತುಂಬಾನೇ ಬಾಲಿಶ ಎಂದನಿಸುವುದು.

ಎಲ್ಲದಕ್ಕೂ ನಿಮ್ಮ ಬಳಿ ಉತ್ತರವಿದೆ:
ಇದು ಕೂಡ ನಿಮ್ಮ ವ್ಯಕ್ತಿತ್ವಕ್ಕೆ ತೂಕವನ್ನು ತರುವುದಿಲ್ಲ. ಯಾರು ಮೆಚ್ಯೂರ್ ಆಗಿ ಯೋಚಿಸುತ್ತಾರೋ ಅವರು ತಮಗೆ ಗೊತ್ತಿಲ್ಲದ ವಿಷಯವನ್ನು ಗೊತ್ತಿಲ್ಲ ಎಂದು ಹೇಳಲು ಹಿಂಜರಿಯುವುದಿಲ್ಲ, ಆದರೆ ಆಲೋಚೆಯಲ್ಲಿ ಮೆಚ್ಯೂರಿಯಿಟಿ ಇಲ್ಲದವರೂ ತನಗೆ ಎಲ್ಲಾ ಗೊತ್ತು ಎಂದು ಸಾಧಿಸಲು ಹೋಗುತ್ತಾರೆ. ಹೀಗೆ ಮಾಡಲು ಹೋಗಿ ಬೇರೆಯವರ ಕಣ್ಣಿಗೆ ಮತ್ತೆ ಚಿಕ್ಕವರಾಗಿ ಕಾಣುತ್ತಾರೆ.

ಬೇಗನೆ ಕೋಪಗೊಳ್ಳುವುದು:
ಎಮೋಷನಲಿ ಮೆಚ್ಯೂರ್ ಅಲ್ಲದವರು ಬೇಗನೆ ತುಂಬಾ ಕೋಪಗೊಳ್ಳುತ್ತಾರೆ. ನಮ್ಮಿಂದ ಯಾವುದು ಸಾಧ್ಯವಿಲ್ಲವೋ ಅದನ್ನು ಒಪ್ಪಿಕೊಳ್ಳುವ ಬದಲಿಗೆ ಕೋಪದಿಂದ ತಮ್ಮ ದೌರ್ಬಲ್ಯ ಮರೆಮಾಚಲು ಯೋಚಿಸುತ್ತಾರೆ.

ವಿಷಯವನ್ನು ತಿರುಚುವುದು:
ಎಮೋಷನಲಿ ಮೆಚ್ಯೂರ್ ಅಲ್ಲದವರು ವಿಷಯವನ್ನು ತಿರುಚಿ ಹೇಳುವ ಸ್ವಭಾವ ಹೊಂದಿರುತ್ತಾರೆ. ಒಂದು ರೀತಿ ಚಾಡಿ ಗುಣ ಇವರಲ್ಲಿ ಇರುತ್ತದೆ, ಇವರ ಈ ಗುಣದಿಂದ ಬೇರೆಯವಿಗೆ ತೊಂದರೆ ಉಂಟು ಮಾಡುತ್ತಾರೆ.

ಸೈಲೆಂಟ್ ಟ್ರೀಟ್ಮೆಂಟ್:
ಕೆಲವರು ತಮ್ಮ ಆಪ್ತರಿಗೆ ಸೈಲೆಂಟ್ ಟ್ರೀಟ್ಮೆಂಟ್ ನೀಡಲು ಬಯಸುತ್ತಾರೆ, ಅಂದರೆ ಏನಾದರೂ ಮನಸ್ತಾಪವದರೆ ಮಾತನಾಡದೇ ಇರುವುದು, ಈ ರೀತಿಯ ವರ್ತನೆ ತುಂಬಾ ಬಾಲಿಶವಾದದ್ದು ಎಂದು ಥೆರಾಪಿಸ್ಟ್ಗಳ ಅಭಿಪ್ರಾಯವಾಗಿದೆ.