ಈ ಐದು ಪ್ರಾಣಾಯಾಮಗಳನ್ನು ಮಾಡಿದರೆ ಮನಸ್ಸು ಹಿಡಿತಕ್ಕೆ ಸಿಕ್ಕಿ ಖುಷಿಯಾಗಿರ್ತೀರಿ

ಪ್ರಾಚೀನ ಯೋಗ ಜ್ಞಾನದ ಪ್ರಕಾರ, ಉಸಿರಾಟ ಹಾಗೂ ಮನಸ್ಸಿನ ನಂಟು ಅತ್ಯಂತ ಪ್ರಬಲವಾಗಿದೆ. ಇದನ್ನೆ ನಾವು ಪ್ರಾಣಾಯಾಮ ಎನ್ನುತ್ತೀವಿ. ಇದು ಉಸಿರ ತಂತ್ರಗಳ ಮೂಲಕ ಮನಸ್ಸನು ಶಾಂತಗೊಳಿಸುತ್ತದೆ, ಸ್ಪಷ್ಟತೆ ತರುತ್ತದೆ.

ಯಾವುದೇ ಸಮಯದಲ್ಲಿ ಮನಸ್ಸು ಗೊಂದಲದಿಂದ ತುಂಬಿರುವಾಗ, ಅದನ್ನು ಸರಿಪಡಿಸಲು ಶ್ವಾಸವೇ ಮುಖ್ಯ ದಾರಿ. ಪ್ರಾಚೀನ ಯೋಗ ಜ್ಞಾನ ಪ್ರಕಾರ, ಪ್ರಾಣಾಯಾಮವು ಉಸಿರಾಟದ ನಿಯಂತ್ರಣದ ಮೂಲಕ ಮನಸ್ಸನ್ನು ಶುದ್ಧಗೊಳಿಸಲು, ಏಕಾಗ್ರತೆಯನ್ನು ಹೆಚ್ಚಿಸಲು ಮತ್ತು ಆಂತರಿಕ ಶಾಂತಿಯನ್ನು ಸಾಧಿಸಲು ಬಳಸಲಾಗುತ್ತದೆ.

ನಿತ್ಯ 10 ನಿಮಿಷ ಈ ಪ್ರಾಣಾಯಾಮ ತಂತ್ರಗಳನ್ನು ಅಭ್ಯಾಸ ಮಾಡಿದರೆ, ನೀವು ಗಮನ ಶಕ್ತಿ ಮತ್ತು ಚಿತ್ತದ ಶುದ್ಧತೆಗೆ ನೇರವಾಗಿ ಸಂಪರ್ಕ ಸಾಧಿಸಬಹುದು. ನಾವಿಂದು ಟಾಪ್ 5 ಶಕ್ತಿಶಾಲಿ ಪ್ರಾಣಾಯಾಮ ತಂತ್ರಗಳ ಪರಿಚಯ ಮಾಡಿಕೊಳ್ಳೋಣ ಬನ್ನಿ.

ಇಲ್ಲಿವೆ 5 ಪ್ರಾಣಾಯಾಮಗಳು: 

1. ಶೂನ್ಯಕ ಪ್ರಾಣಾಯಾಮ:

ಶೂನ್ಯಕ ಅಂದರೆ ಖಾಲಿ. ಈ ತಂತ್ರದಲ್ಲಿ, ನೀವು ಸಂಪೂರ್ಣವಾಗಿ ಉಸಿರು ಬಿಡುತ್ತಿರಿ ಮತ್ತು ಆಮೇಲೆ ಕೆಲವು ಕ್ಷಣ ಉಸಿರು ತೆಗೆದುಕೊಳ್ಳದೇ ಇರುವುದು.

ಇದು ಯಾಕೆ ಶಕ್ತಿಶಾಲಿ?

ಉಸಿರನ್ನು ನಿಲ್ಲಿಸಿದಾಗ ಮನಸ್ಸಿನ ಚಲನೆ ಸ್ವಲ್ಪ ನಿಧಾನವಾಗುತ್ತದೆ. ಆಲೋಚನೆಗಳು ಕಡಿಮೆ ಆಗುತ್ತವೆ, ಮತ್ತು ಆಂತರಿಕ ಶಾಂತಿಯ ಅನುಭವವಾಗುತ್ತದೆ.

ಚಿಕಿತ್ಯ ಪ್ರಯೋಜನಗಳು:

ಗಮನ ಹೆಚ್ಚಾಗುತ್ತೆ

ಪ್ಯಾರಾಸಿಂಪಥೆಟಿಕ್ ಸಿಸ್ಟಮ್ ಸಕ್ರಿಯಗೊಳಿಸುತ್ತದೆ

ಜೀರ್ಣಕ್ರಿಯೆ ಪ್ರಕ್ರಿಯೆ ಸುಧಾರಿಸುತ್ತದೆ

ಸಲಹೆ: ಶಾಂತವಾಗಿ, ಯಾವುದೇ ಬಲವಂತವಿಲ್ಲದೆ ಅಭ್ಯಾಸ ಮಾಡಿ. ಜೋರಾಗಿ ಉಸಿರಾಟ ಮಾಡಬೇಡಿ,ನಿಧಾನವಾಗಿ ಮಾಡಿ.

2. ಕುಂಭಕ ಪ್ರಾಣಾಯಾಮ:

ಕುಂಭಕ ಅಂದರೆ "ಹಿಡಿತ". ಈ ತಂತ್ರದಲ್ಲಿ, ಉಸಿರು ತೆಗೆದುಕೊಳ್ಳುವುದು ಮತ್ತು ಕೆಲವು ಸೆಕೆಂಡ್ ಗಳ ಕಾಲ ಉಸಿರನ್ನು ಹಿಡಿದಿಡುವುದು ಆಗಿದೆ.

ಇದು ಏಕೆ ಶಕ್ತಿಯುತ?

ಇದು ಆಮ್ಲಜನಕ ವಿನಿಮಯವಾಗುವುದನ್ನು ಸುಧಾರಿಸುತ್ತದೆ. ದೇಹದಲ್ಲಿ ಪ್ರಾಣ ಶಕ್ತಿಯ ಹರಿವು ಸಮತೋಲನಗೊಳ್ಳುತ್ತೆ.

ಚಿಕಿತ್ಯ ಪ್ರಯೋಜನಗಳು:

ಏಕಾಗ್ರತೆ ಸುಧಾರಣೆಯಾಗುತ್ತೆ

ಮೆದುಳಿಗೆ ಹೆಚ್ಚಿನ ಆಮ್ಲಜನಕ ತಲುಪುತ್ತೆ

ಶಕ್ತಿಯು ಹೆಚ್ಚಾಗುತ್ತೆ

ಸಲಹೆ: ಅತಿಯಾಗಿ ಉಸಿರು ಹಿಡಿಯುವುದನ್ನು ತಪ್ಪಿಸಿ, ನಿಧಾನವಾಗಿ ಮತ್ತು ಧೈರ್ಯದಿಂದ ಮಾಡಬೇಕು.

3. ರೇಚಕ ಪ್ರಾಣಾಯಾಮ:
ಈ ತಂತ್ರದಲ್ಲಿ ಉಸಿರು ಬಿಡುವುದರ ಮೇಲೆ ಕೇಂದ್ರೀಕರಣ ಇರುತ್ತದೆ.

ಇದು ಯಾಕೆ ಪ್ರಭಾವಶಾಲಿ?

ಉಸಿರ ಬಿಡುವ ಕ್ರಿಯೆ ದೇಹದಿಂದ ಒತ್ತಡವನ್ನು ಹೊರತೆಗೆದು ಶಾಂತತೆ ತರುತ್ತದೆ. ಇದು ಆಧ್ಯಾತ್ಮಿಕತೆಯಲ್ಲೂ ಬಳಕೆಯಾಗುವ ಒಂದು ಪ್ರಾಣಾಯಾಮ ತಂತ್ರವಾಗಿದೆ.

ಚಿಕಿತ್ಯ ಪ್ರಯೋಜನಗಳು:

ಮನಸ್ಸಿಗೆ ವಿಶ್ರಾಂತಿ

ತಂತ್ರ ಹಾಗೂ ಲಯದೊಂದಿಗೆ ಮಾಡಿದರೆ ಹೆಚ್ಚು ಪ್ರಯೋಜನ

ಸಲಹೆ: ಎಣಿಕೆಯ ಜೊತೆ ಅಥವಾ ಜಪದೊಂದಿಗೆ ಅಭ್ಯಾಸ ಮಾಡಿದೆ ಹೆಚ್ಚು ಲಾಭ.

4. ಅನುಲೋಮ ವಿಲೋಮ:
ಇದು ನಾಡಿ ಶೋಧನ ತಂತ್ರ. ಬಲ ಹಾಗೂ ಎಡ ಮೂಗಿನ ಹೊಳ್ಳೆಗಳನ್ನು ಪರ್ಯಾಯವಾಗಿ ಬಳಸುವುದರ ಮೂಲಕ ಉಸಿರಾಟ ನಡೆಸುವುದು.

ಇದು ಯಾಕೆ ಶಕ್ತಿಶಾಲಿ?

ಇಡಾ ಹಾಗೂ ಪಿಂಗಲಾ ನಾಡಿಗಳನ್ನು ಸಮತೋಲನಗೊಳಿಸುತ್ತೆ. ಇದರಿಂದ ದೇಹ ಶೀತಶಕ್ತಿಯ ಹಾಗು ಉಷ್ಣಶಕ್ತಿಯ ಸಮತೋಲನ ಸಾದ್ಯವಾಗುತ್ತೆ.

ಚಿಕಿತ್ಯ ಪ್ರಯೋಜನಗಳು:

ತಾತ್ಕಾಲಿಕ ಒತ್ತಡ ಕಡಿಮೆಯಾಗುತ್ತೆ

ಉಸಿರಾಟ ಸಾಮರ್ಥ್ಯ ಸುಧಾರಣೆಯಾಗುತ್ತೆ

ಮನಸ್ಸು ಶಾಂತವಾಗುತ್ತೆ

ಸಲಹೆ: ನಿಧಾನವಾಗಿ, ಗಾಢವಾಗಿ ಮತ್ತು ಶಬ್ದವಿಲ್ಲದೆ ಅಭ್ಯಾಸಿಸಿ.

5. ಭ್ರಮರಿ ಪ್ರಾಣಾಯಾಮ:

ಇದು 'ಜೇನುನೋಣಗಳ ಶಬ್ದ' ಮಾಡುವ ತಂತ್ರ. ಕಿವಿಗಳನ್ನು ಮುಚ್ಚಿಕೊಂಡು "ಮ್ಮ್ಮ್" ಎಂಬ ಶಬ್ದ ಮಾಡುತ್ತಾ ಉಸಿರು ಬಿಡುವುದು.

ಇದು ಯಾಕೆ ಶಕ್ತಿಶಾಲಿ?

ಈ ಶಬ್ದದಿಂದ ಶಿರಸ್ನಾಯುಗಳು ಕಂಪಿಸುತ್ತವೆ. ಆ ಕಂಪನೆಯ ಮೂಲಕ ದೇಹ ಹಾಗೂ ಮನಸ್ಸು ಆಳವಾಗಿ ವಿಶ್ರಾಂತಿ ಪಡೆಯುತ್ತವೆ.

ಚಿಕಿತ್ಯ ಪ್ರಯೋಜನಗಳು:

ನಿದ್ರಾಹೀನತೆ, ತಲೆ ನೋವು, ಬಿಪಿ, ಇತ್ಯಾದಿಗಳು ಕಡಿಮೆಯಾಗುತ್ತವೆ.

ಆಂತರಿಕ ಶಾಂತತೆ ಹೆಚ್ಚಿಸುತ್ತದೆ.

ಸಲಹೆ: ಶಾಂತ ಸ್ಥಳದಲ್ಲಿ ಅಭ್ಯಾಸ ಮಾಡಿ ಬೆಳಗ್ಗೆ ಅಥವಾ ರಾತ್ರಿ ಉತ್ತಮ ಸಮಯ.

"ಚಲೇ ವಾತೇ ಚಲೇ ಚಿತ್ತಂ, ನಿಶ್ಚಲೇ ನಿಶ್ಚಲಂ ಭವೇತ್" ಎಂಬ ಹಠಯೋಗದ ಶ್ಲೋಕದಂತೆ, ಉಸಿರಾಟದ ನಿಯಂತ್ರಣದಿಂದ ಮನಸ್ಸು ಸ್ಥಿರವಾಗಬಹುದು. ಪ್ರತಿ ದಿನ 10-15 ನಿಮಿಷ ಈ ತಂತ್ರಗಳನ್ನು ಅಭ್ಯಾಸ ಮಾಡಿದರೆ, ಹೆಚ್ಚು ಸ್ಪಷ್ಟತೆ, ಏಕಾಗ್ರತೆ ಮತ್ತು ಶಾಂತತೆ ಸಾಧ್ಯವಾಗುತ್ತದೆ.

ಡಿಜಿಟಲ್ ಡಿಟಾಕ್ಸ್, ಸಾತ್ವಿಕ ಆಹಾರ ಮತ್ತು ಯೋಗ ಆಸನಗಳ ಜೊತೆ ಈ ಪ್ರಾಣಾಯಾಮಗಳನ್ನು ಸೇರಿಸಿದರೆ, ನಿಮ್ಮ ಮಾನಸಿಕ ಆರೋಗ್ಯದ ಜೊತೆ ದೈಹಿಕ ಆರೋಗ್ಯವು ನಿಸ್ಸಂದೇಹವಾಗಿ ಸುಧಾರಿಸುತ್ತದೆ.