ಈ ಸಾಮೆ ಗಂಜಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಆಯಾಸ ನಿವಾರಣೆಯಾಗಿ, ದೇಹದ ತೂಕ ಕಡಿಮೆಯಾಗುತ್ತದೆ. ವೆಜಿಟೇಬಲ್ ಸಾಮೆ ಗಂಜಿ ತಯಾರಿಸುವ ವಿಧಾನವನ್ನು ಇಲ್ಲಿ ನೀಡಲಾಗಿದೆ. ಇದನ್ನು ತಯಾರಿಸಿ, ರುಚಿ ನೋಡಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.
ಸಾಮೆ ಅಕ್ಕಿಯಿಂದ ತಯಾರಿಸಿದ ಗಂಜಿ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಇದು ಸಾಂಪ್ರದಾಯಿಕ ಆಹಾರವಾಗಿದ್ದು, ಪೌಷ್ಟಿಕಾಂಶದಿಂದ ಕೂಡಿದೆ. ಸಾಮೆಯು ನಾರಿನಂಶವನ್ನು ಹೆಚ್ಚಾಗಿ ಹೊಂದಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ಸಾಮೆ ಗಂಜಿಯು ಸುಲಭವಾಗಿ ಜೀರ್ಣವಾಗುವ ಆಹಾರವಾಗಿದೆ. ಇದು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹಿಗಳಿಗೆ ಮತ್ತು ದೇಹದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಸಾಮೆ ಗಂಜಿ ತಯಾರಿಸಲು ಬೇಕಾಗುವ ಸಾಮಗ್ರಿಗಳು:
• ಸಾಮೆ - 1 ಕಪ್
• ಎಣ್ಣೆ - 1 ಚಮಚ
• ಬೆಳ್ಳುಳ್ಳಿ - ಸಣ್ಣಗೆ ಹೆಚ್ಚಿದ 3 ಎಸಳು
• ಶುಂಠಿ - 1/2 ಇಂಚು (ಸಣ್ಣಗೆ ಹೆಚ್ಚಿದ್ದು)
• ಈರುಳ್ಳಿ - 1
• ಟೊಮ್ಯಾಟೊ - 1
• ಬೀನ್ಸ್ - 6
• ಕ್ಯಾರೆಟ್ - 1 •
ಜೀರಿಗೆ - 1/4 ಚಮಚ •
ಅರಿಶಿನ ಪುಡಿ - 1/4 ಚಮಚ
• ಕೊತ್ತಂಬರಿ ಸೊಪ್ಪು - ಸ್ವಲ್ಪ
• ನೀರು - ಅಗತ್ಯಕ್ಕೆ ತಕ್ಕಷ್ಟು
• ಉಪ್ಪು - ರುಚಿಗೆ ತಕ್ಕಷ್ಟು
ಈಗ ಸಣ್ಣಗೆ ಹೆಚ್ಚಿದ ಟೊಮ್ಯಾಟೊ ಹಾಕಿ ಚೆನ್ನಾಗಿ ಹುರಿಯಬೇಕು. ಇದಕ್ಕೆ ಸಣ್ಣಗೆ ಹೆಚ್ಚಿದ ಕ್ಯಾರೆಟ್ ಮತ್ತು ಬೀನ್ಸ್ ಸೇರಿಸಿ ಚೆನ್ನಾಗಿ ಹುರಿಯಿರಿ. ಗಂಜಿಗೆ ಅಗತ್ಯವಿರುವಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿಕೊಳ್ಳಿ. ನೀರು ಕುದಿಯಲು ಪ್ರಾರಂಭಿಸಿದಾಗ, ನೆನೆಸಿದ ಸಾಮೆ ಅಕ್ಕಿಯನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಈಗ ಜೀರಿಗೆ ಮತ್ತು ಅರಿಶಿನ ಪುಡಿ ಹಾಕಿ ಕಲಸಿ. ಕುಕ್ಕರ್ ಮುಚ್ಚಿ 4 ವಿಸಿಲ್ ಬರುವವರೆಗೆ ಬೇಯಿಸಿ. ವಿಸಿಲ್ ಹೋದ ನಂತರ ಕುಕ್ಕರ್ ತೆರೆದು, ಸೌಟಿನಿಂದ ಚೆನ್ನಾಗಿ ಮಿಕ್ಸ್ ಮಾಡಿ. ಗಂಜಿ ತುಂಬಾ ದಪ್ಪವಾಗಿದ್ದರೆ, ಬಿಸಿ ನೀರು ಸೇರಿಸಿ ಕಲಸಿ, ಕುಕ್ಕರ್ ಅನ್ನು ಮತ್ತೊಮ್ಮೆ ಒಲೆಯ ಮೇಲಿಟ್ಟು, ಒಂದು ಕುದಿ ಬರಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಇಷ್ಟು ಮಾಡಿದರೆ ಬಿಸಿ ಬಿಸಿಯಾದ ಮತ್ತು ಆರೋಗ್ಯಕರವಾದ ತರಕಾರಿ ಸಾಮೆ ಗಂಜಿ ಸವಿಯಲು ಸಿದ್ಧ. ಒಟ್ಟಾರೆಯಾಗಿ, ಸಾಮೆಯಲ್ಲಿ ಕಬ್ಬಿಣ, ಮೆಗ್ನೀಷಿಯಂ, ಕ್ಯಾಲ್ಸಿಯಂ ಮತ್ತು ರಂಜಕದಂತಹ ಖನಿಜಾಂಶಗಳು ಹೇರಳವಾಗಿವೆ. ಇದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ ಮತ್ತು ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ. ನಿಯಮಿತವಾಗಿ ಸಾಮೆ ಗಂಜಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.