ಹಾಗೆ ಸ್ನ್ಯಾಕ್ಸ್ ಅಂದ ಮಾತ್ರಕ್ಕೆ ಅಲ್ಲಿ ರುಚಿ ರುಚಿಯ ಕರಿದ ತಿಂಡಿಗಳು ನಿಮಗೆ ನೆನಪಾಗಬಹುದು. ಅದರಲ್ಲೂ ಮಸಾಲೆ ಭರಿತ ಕಡಲೆಗಳು ಕಾಫಿ ಟೀ ಜೊತೆಗೆ ಅದ್ಭುತ ರುಚಿ ನೀಡಲಿವೆ. ಹೀಗಾಗಿ ನಾವಿಂದು ಮನೆಯಲ್ಲೇ ಸವಿಯುವಂತಹ ರುಚಿ ರಚಿಯಾದ ಹಿತಕಿದ ಅವರೆಕಾಳಿನ ಮಿಕ್ಸ್ಚರ್ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ.
ಈ ಕಾಳನ್ನು ನೀವು ಬೇಕರಿಗಳಲ್ಲಿ, ಅಂಗಡಿಗಳಲ್ಲಿ ನೋಡಿರಬಹುದು. ಹಾಗೆ ಈ ಹಿತಕಿದ ಅವರೆಕಾಳಿನಿಂದ ಹಲವು ಬಗೆಯ ಖಾದ್ಯಗಳ ಮಾಡಿ ಸವಿದಿರುತ್ತೀರಿ. ಅದರಲ್ಲೂ ಸಂಬಾರಗೆ ಗ್ರೇವಿ, ಉಪ್ಪಿಟ್ಟು, ಸೇರಿ ಹಲವು ಬಗೆಯ ಖಾದ್ಯಗಳಿಗೆ ಈ ಕಾಳು ಬಳಸುವುದು ಸಹ ನೋಡಬಹುದು. ಆದ್ರೆ ನಾವಿಂದು ಹಿತಕಿದ ಅವರೆಕಾಳಿನ ಅದ್ಭುತ ಮಿಕ್ಸ್ಚರ್ ಮನೆಯಲ್ಲೇ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಹಿತಕಿದ ಅವರೆಕಾಳಿನ ಮಿಕ್ಸ್ಚರ್ ಮಾಡುವುದು ಹೇಗೆ?
ಹಿತಕಿದ ಅವರೆಕಾಳನ್ನು ತೊಳೆದ ಒಂದು ಕಾಟನ್ ಬಟ್ಟೆ ಮೇಲೆ ಹಾಕಿ ತೇವಾಂಶ ಒಣಗಲು ಬಿಡಿ. 5 ನಿಮಿಷದ ಬಳಿಕ ಒಂದು ತಟ್ಟೆಗೆ ಹಾಕಿಡಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಸ್ವಲ್ಪ ಹೆಚ್ಚಾಗಿೇ ಹಾಕಿಕೊಳ್ಳಿ. ನಂತರ ಚೆನ್ನಾಗಿ ಎಣ್ಣೆ ಕಾದ ಬಳಿಕ ಒಣಗಿದ ಈ ಅವರೆಕಾಳನ್ನು ಈ ಎಣ್ಣೆಯೊಳಗೆ ಹಾಕಿಕೊಂಡು ಚೆನ್ನಾಗಿ ಕರಿಯಲು ಬಿಡಿ.
ಅದು ನೊರೆ ಬಂದು ಚೆನ್ನಾಗಿ ಕರಿದುಕೊಳ್ಳಬೇಕು. ಮಧ್ಯಮ ಉರಿಯಲ್ಲಿ 3ರಿಂದ 4 ನಿಮಿಷ ಹುರಿದು ಆಗಾಗ ತಿರುಗಿಸಿಕೊಳ್ಳಿ. ಚೆನ್ನಾಗಿ ಕರಿದ ಈ ಕಾಳುಗಳು ಮೇಲೆ ಬರಲಿವೆ ಆಗ ತೆಗೆದು ಪೇಪರ್ ಹಾಕಿರುವ ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಅದೇ ಎಣ್ಣೆಗೆ ಶೇಂಗಾ ಬೀಜ ಸಹ ಹಾಕಿ ಪ್ರೈ ಮಾಡಿಕೊಂಡು ತೆಗೆದು ಬೌಲ್ಗೆ ಹಾಕಿಟ್ಟುಕೊಳ್ಳಿ. ಹಾಗೆ ಹುರಿಗಡಲೆಯನ್ನು ಕೂಡ ಫ್ರೈ ಮಾಡಿಕೊಳ್ಳಿ.
ಅನಂತರ ಬೆಳ್ಳುಳ್ಳಿ, ಒಣ ಮೆಣಸು, ಕರಿಬೇವು ಕೂಡ ಇದೇ ಎಣ್ಣೆಯಲ್ಲಿ ಹಾಕಿ ಕರಿದು ಇಟ್ಟುಕೊಳ್ಳಿ. ಈಗ ಹುರಿದುಕೊಂಡಿದ್ದ ಎಲ್ಲಾ ಪದಾರ್ಥಗಳನ್ನು ಅವರೆಕಾಳಿನ ಜೊತೆಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಜಿರಿಗೆ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹೀಗೆ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಈ ಹಿತಕಿದ ಅವರೆಕಾಳಿನ ಮಿಕ್ಸ್ಚರ್ ರೆಡಿಯಾಗುತ್ತದೆ. ನೀವು ಸಹ ಇದನ್ನು ಟ್ರೈ ಮಾಡಿ ನೋಡಿ.