ಚೈನೀಸ್ ಹೋಟೆಲ್ ಸ್ಟೈಲ್‌ನಲ್ಲಿ ಮಸಾಲ ಪಾಸ್ತಾ ಮಾಡಿ ನೋಡಿ.

ನೀವು ಮನೆಯಲ್ಲಿದ್ದಾಗ ಸುಲಭವಾಗಿ ಬಹಳ ರುಚಿ ರುಚಿಯಾಗಿ ಯಾವುದಾದರು ಮಸಾಲೆ ಭರಿತ ಸೈಡ್ಸ್ ಅನ್ನು ಸವಿಯಲು ಇಷ್ಟಪಡುವ ಮಂದಿಯಾದರೆ ಹಲವು ಖಾದ್ಯ ಸವಿದಿರುತ್ತೀರಿ. ಅದರಲ್ಲೂ ನೀವು ಹೆಚ್ಚಾಗಿ ಗೋಬಿ ಮಂಚೂರಿಯನ್, ಮಸಾಲ ಪೂರಿ, ಪಾನಿ ಪೂರಿ, ಬೋಂಡಾ ಬಜ್ಜಿ, ಸಮೋಸಾ, ನೂಡಲ್ಸ್ ಸೇರಿದಂತೆ ಹಲವು ರೀತಿಯ ಸ್ನ್ಯಾಕ್ ಮಾಡಿ ಸವಿಯುವುದು ನಿಮ್ಮ ಅಭ್ಯಾಸ ಆಗಿರಬಹುದು.

ಹಾಗೆ ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ರುಚಿ ರುಚಿಯಾಗಿ ಪಾಸ್ತಾದಿಂದಲೂ ಸ್ನ್ಯಾಕ್ಸ್ ಮಾಡಿ ನೀಡಿರುತ್ತೀರಿ. ಈ ಪಾಸ್ತಾದಿಂದ ಹತ್ತು ಹಲವು ರೀತಿಯ ಖಾದ್ಯಗಳ ಮಾಡಿ ಸವಿಯುತ್ತೀರಿ. ಆದ್ರೆ ನಾವಿಂದು ಸುಲಭವಾಗಿ ಮಾಡುವಂತಹ ಹಾಗೆ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗುವ ಮನೆಯಲ್ಲಿ ಮಾಡುವುದು ಹೇಗೆ ನೋಡೋಣ.

ಅದರಲ್ಲೂ ರಸ್ತೆ ಬದಿಯಲ್ಲಿ ನೀವು ಯಾವಾಗಲು ಸವಿದಿರುವಂತಹ ರುಚಿಯಲ್ಲಿ ಇದನ್ನು ಮನೆಯಲ್ಲೇ ಮಾಡಿ ಸವಿಯಬಹುದು. ಹಾಗಾದ್ರೆ ಈ ಮಸಾಲ ಪಾಸ್ತಾ ಮಾಡುವುದು ಹೇಗೆ? ಚೈನೀಸ್ ಸ್ಟೈಲ್‌ನಲ್ಲಿ ಈ ಮಸಾಲ ಪಾಸ್ತಾ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಅದರಲ್ಲೂ ಕೆಲವೇ ಕೆಲವು ವಸ್ತು ಬಳಿ ಮಾಡಿ ನೋಡೋಣ. ಮಸಾಲಾ ಪಾಸ್ತಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನ ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಯಾವೆಲ್ಲಾ ಪದಾರ್ಥಗಳು ಬೇಕು?

ಪಾಸ್ತಾ
ಎಣ್ಣೆ
ಉಪ್ಪು
ಶುಂಠಿ
ಬೆಳ್ಳುಳ್ಳಿ
ಹಸಿ ಮೆಣಸು
ಈರುಳ್ಳಿ
ಟೊಮೆಟೋ
ಕ್ಯಾರೆಟ್
ಕ್ಯಾಪ್ಸಿಕಂ
ಟೊಮೆಟೋ
ಸಾಸ್
ಗರಂ ಮಸಾಲೆ
ಧನಿಯ ಪುಡಿ
ಖಾರದ ಪುಡಿ

ಮಸಾಲ ಪಾಸ್ತಾ ಮಾಡುವ ವಿಧಾನವೇನು?
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು 2 ಕಪ್ ನೀರು, 1 ಸ್ಪೂನ್ ಎಣ್ಣೆ, ಉಪ್ಪು ಹಾಕಿ ಕುದಿಯಲು ಬಿಡಿ. ಇದು ಚೆನ್ನಾಗಿ ಕುದಿಯಲು ಆರಂಭಿಸಿದಾಗ ನೀವು ಅಂಗಡಿಯಿಂದ ತಂದಿರುವ ಪಾಸ್ತಾವನ್ನು ಹಾಕಿಕೊಂಡು ಬೇಯಲು ಬಿಡಿ. 2ರಿಂದ 3 ನಿಮಿಷದಲ್ಲಿ ಇದು ಬೇಯಲಿದೆ ನಂತರ ಇದನ್ನು ತೆಗೆದಿಟ್ಟುಕೊಳ್ಳಿ.

ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿಕೊಂಡು ಅದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು ಹಾಕಿಕೊಳ್ಳಿ. ಅನಂತರ ಒಂದು ದೊಡ್ಡ ಈರುಳ್ಳಿ ಸಹ ಹಾಕಿಕೊಂಡು ಫ್ರೈ ಆಗಲು ಬಿಡಿ. 2 ನಿಮಿಷ ಹುರಿದ ಬಳಿಕ ಸಣ್ಣದಾಗಿ ಹೆಚ್ಚಿದ್ದ ಟೊಮೆಟೋ, ಉಪ್ಪು ಹಾಕಿಕೊಂಡು ಮೃದುವಾಗುವವರೆಗೂ ಹುರಿದುಕೊಳ್ಳಿ. ಈಗ ಸಣ್ಣ ತುರಿದ ಕ್ಯಾರೆಟ್ ಹಾಗೂ ಕ್ಯಾಪ್ಸಿಕಂ ಕೂಡ ಹಾಕಿಕೊಂಡು ಹುರಿದುಕೊಳ್ಳಿ. ಈಗ ಒಂದು ಸ್ಪೂನ್ ಖಾರದ ಪುಡಿ, ಗರಂ ಮಸಾಲ, ಧನಿಯಾ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. 1 ನಿಮಿಷ ಮಿಕ್ಸ್ ಮಾಡಿದ ಬಳಿಕ ಮೂರು ಸ್ಪೂನ್ ಟೊಮೆಟೋ ಸಾಸ್ ಹಾಕಿಕೊಳ್ಳಿ. ಹಾಗೆ ಸೋಯಾ ಸಾಸ್ ಇದ್ದರೂ ಕೂಡ ಹಾಕಿಕೊಳ್ಳಿ. 

ಸ್ವಲ್ಪ ನೀರು ಹಾಕಿ ಗೊಜ್ಜಿನ ರೀತಿ ಮಾಡಿಕೊಳ್ಳಿ. ಈಗ ಬೇಯಿಸಿಕೊಂಡಿದ್ದ ಪಾಸ್ತಾವನ್ನು ಹಾಕಿಕೊಂಡು ನಿಧಾನಾಗಿ ಮಿಕ್ಸ್ ಮಾಡಿಕೊಳ್ಳಿ. 1 ನಿಮಿಷ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಂಡು ಕೊತ್ತಂಬರಿ ಸೊಪ್ಪು ಹಾಕಿ ಮುಚ್ಚಳ ಮುಚ್ಚಿ 1 ನಿಮಿಷ ಬಿಡಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈ ಪಾಸ್ತಾ ಸಿದ್ದವಾಗಲಿದೆ. ಸಂಜೆ ಸಮಯದಲ್ಲಿ ಮನೆಯಿಂದ ಹೊರಹೋಗಿ ಸವಿಯುವ ಬದಲಾಗಿ ಮನೆಯಲ್ಲಿಯೇ ಇದನ್ನು ಮಾಡಿ ಸವಿದು ನೋಡಿ.