ತೂಕ ಇಳಿಕೆಯಾಗಲು ಈ ಪಾನೀಯಗಳನ್ನೊಮ್ಮೆ ಟ್ರೈ ಮಾಡಿ

ದಪ್ಪಗಿರುವ ಮತ್ತು ಬೊಜ್ಜುಳ್ಳ ಜನರು ತಮ್ಮ ತೂಕವನ್ನು ಇಳಿಸಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ವಿವಿಧ ವಿಧಾನಗಳನ್ನು ಆಳವಡಿಸಿಕೊಳ್ಳುತ್ತಾರೆ. ಆದಾಗ್ಯೂ ಬೆಳಗ್ಗೆ ಮತ್ತು ರಾತ್ರಿ ಕೆಲವು ಪಾನಿಗಳನ್ನು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. 

ಈ ಪಾನೀಯಗಳನ್ನು ಅಡುಗೆ ಮನೆಯಲ್ಲಿನ ಮಸಾಲೆ ಪದಾರ್ಥಾದೊಂದಿಗೆ ತಯಾರು ಮಾಡಲಾಗುತ್ತಿದ್ದು, ಬೆಳಗ್ಗೆ ಮತ್ತು ರಾತ್ರಿ ಈ ಜ್ಯೂಸ್ ಸೇವನೆ ಮಾಡುವುದರಿಂದ ತೂಕ ಇಳಿಕೆಗೆ ಸಹಕಾರಿಯಾಗಲಿದ್ದು, ಯಾವ ಪಾನೀಯಗಳು ಎಂದು ನೋಡೋಣ..

1. ಜೀರಿಗೆ: 
ಜೀರಿಗೆ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ನಮ್ಮ ದೇಹವು ನಿರ್ವಿಷಗೊಳ್ಳುವುದಲ್ಲದೆ, ತೂಕ ಇಳಿಸಿಕೊಳ್ಳಲು ಸಹಪ್ರಯೋಜನಕಾರಿಯಾಗಿದೆ.

2.ಸೆಲರಿ ನೀರು (ಸೊಪ್ಪು):
ಅಡುಗೆಮನೆಯಲ್ಲಿ ಇಡಲಾಗುವ ಮಸಾಲೆಗಳಲ್ಲಿ ಸೆಲರಿ ಕೂಡ ಒಂದು. ಇದರಲ್ಲಿ ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಅನೇಕ ಪೋಷಕಾಂಶಗಳಿವೆ. ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ತೂಕ ಇಳಿಸಿಕೊಳ್ಳಲು ಒಂದು ಕಪ್ ನೀರನ್ನು ಕುದಿಸಿ ಅದರಲ್ಲಿ ಸೆಲರಿ ಸೇರಿಸಿ. ಸೆಲರಿ ಮತ್ತು ನೀರನ್ನು 10 ನಿಮಿಷಗಳ ಕಾಲ ಕುದಿಸಿ ಅದನ್ನು ಸೋಸಿ ಕುಡಿಯಿರಿ.

3.ದಾಲ್ವಿನ್ನಿ ನೀರು:
ತೂಕ ನಷ್ಟಕ್ಕೆ ದಾಡ್ಮಿನ್ನಿ ಕೂಡ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರ ನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ರಾತ್ರಿ ಮಲಗುವ ಮುನ್ನ ಇದನ್ನು ಕುಡಿಯವುದು ಒಳ್ಳೆಯದು.

4.ನಿಂಬೆ ರಸ:
ಸಾಮಾನ್ಯವಾಗಿ ನಿಂಬೆ ಎಲ್ಲರ ಮನೆಯಲಲ್ಲಿ ಸುಲಭವಾಗಿ ಸಿಗಲಿದೆ. ಕಳೆದ ಹಲವು ವರ್ಷಗಳಿಂದ ಜನರು ಇದನ್ನೂ ತೂಕ ಇಳಿಸಿಕೊಳ್ಳುವ ಪಾನೀಯವಾಗಿ ಬಳಸುತ್ತಿದ್ದಾರೆ. ಅಲ್ಲದೆ, ನಿಂಬೆ ರಸದಲ್ಲಿ ವಿಟಮಿನ್ ಸಿ ಇದ್ದು, ಇದು ಚಯಪಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯವುದು ತುಂಬಾ ಒಳ್ಳೆಯದು.

5.ಜೇನುತುಪ್ಪದೊಂದಿಗೆ ನಿಂಬೆ ನೀರು:
ಬೆಳಿಗ್ಗೆ ನಿಂಬೆ ನೀರು ಕುಡಿಯುವುದು ಪ್ರಯೋಜನಕಾರಿಯಾದರೂ, ನೀವು ಅದರಲ್ಲಿ ಜೇನುತುಪ್ಪವನ್ನು ಬೆರೆಸಿ ರಾತ್ರಿ ಊಟದ ನಂತರ ಕುಡಿದರೆ, ಅದು ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಜೇನುತುಪ್ಪವನ್ನು ನಿಂಬೆ ನೀರಿನೊಂದಿಗೆ ಸೇರಿಸಿ ಕುಡಿಯವುದರಿಂದ ಜೀರ್ಣಕ್ರಿಯಿಗೆ ಮತ್ತು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.