ಅಷ್ಟೇ ಅಲ್ಲದೆ ಎದೆ ಹಾಲಿನಲ್ಲಿ ಮೂರು ಖನಿಜಗಳು ಅಂದರೆ ಕ್ಯಾಲ್ಶಿಯಂ, ರಂಜಕ ಮತ್ತು ಕಬ್ಬಿಣಾಂಶಗಳು ಸಹ ಇರುತ್ತವೆ. ಎದೆಹಾಲಿನಲ್ಲಿ ಈ ಖನಿಜಗಳು ಉನ್ನತವಾದ ಜೈವಿಕ ಲಭ್ಯತೆಯ ಪರಿಮಾಣಗಳಲ್ಲಿ ಲಭಿಸುತ್ತದೆ. ಮಗುವಿಗೆ ಜನನದ ಕ್ಷಣದಿಂದ ಅತ್ಯಂತ ಶ್ರೇಷ್ಠ ಆಹಾರವೆಂದರೆ ತಾಯಿಯ ಹಾಲು. ಮಗುವಿಗೆ ಆರು ತಿಂಗಳಾಗುವವರೆಗೂ ತಾಯಿ ಹಾಲು ಪ್ರಮುಖ ಆಹಾರವಾಗಿರಬೇಕು.
ಬಳಿಕ ಇತರ ಮೃದುವಾದ ಆಹಾರಗಳ ಜೊತೆ ತಾಯಿಹಾಲನ್ನು ಮುಂದುವರೆಸಿ ಸುಮಾರು ಒಂದು ವರ್ಷದವರೆಗೂ ಮುಂದುವರೆಸಬೇಕು. ತದನಂತರ ಇಂತಹ ಆಹಾರಗಳನ್ನು ಕೊಂಚ ಹೆಚ್ಚಿಸಿ ತಾಯಿಹಾಲನ್ನು ಕೊಂಚ ಕಡಿಮೆ ನೀಡುವ ಮೂಲಕ ಎರಡು ವರ್ಷಗಳವರೆಗೂ ಮುಂದುವರೆಸಬಹುದು. ಇದಕ್ಕಾಗಿ ತಾಯಿಹಾಲಿನ ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿರುವುದು ಅವಶ್ಯವಾಗಿದೆ. ಅದಾಗ್ಯೂ ತಾಯಿಯಾದ ಸಮಯದಲ್ಲಿ ಸ್ತನದಲ್ಲಿನ ಊತ ಮತ್ತು ನೋವಿನ್ನು ತಾಯಿ ಎದುರಿಸಬೇಕಾಗುತ್ತದೆ. ಅದಾಗ್ಯೂ ಮಗುವಿಗೆ ಹಾಲುಣಿಸುವ ಸಮಯದಲ್ಲಿ ಸ್ತನದ ಊತ ನೋವು ಕಡಿಮೆಯಾಗುವ ಸಾಧ್ಯತೆ ಕೂಡ ಇರುತ್ತದೆ. ಕೆಲವೊಮ್ಮೆ ಈ ನೋವು ಅಸಹನೀಯವಾಗಿರುತ್ತದೆ. ಎದೆಹಾಲುಣಿಸುವಾಗ ಸ್ತನವು ಏಕೆ ಈ ಸಮಸ್ಯೆಗೆ ಒಳಗಾಗುತ್ತದೆ ಎಂಬುದನ್ನು ಇಂದಿಲ್ಲಿ ನೀಡಿದ್ದೇವೆ...
ಸರಿಯಾಗಿ ಹಾಲು ಹೀರಿಕೊಳ್ಳದಿರುವುದು ಮಗುವಿಗೆ ನೀವು ಹಾಲುಣಿಸುವ ಸಮಯದಲ್ಲಿ ಅದರ ಬಾಯಿಗೆ ಸ್ತನದ ತೊಟ್ಟು ಸಿಗುವಂತೆ ಕುಳಿತುಕೊಳ್ಳಬೇಕು. ಈ ಸಮಯದಲ್ಲಿ ಮಗುವು ಹಾಲು ಹೀರಿಕೊಳ್ಳಲು ಹೆಚ್ಚಿನ ಶಕ್ತಿಯನ್ನು ಹಾಕುವ ಸಾಧ್ಯತೆ ಇದ್ದು ಅದರಿಂದ ಕೂಡ ನೋವು ಉಂಟಾಗಬಹುದು.
ಅನಿಯಮಿತ ಹಾಲುಣಿಸುವಿಕೆ ಹಾಲಿನ ಉತ್ಪಾದನೆಯನ್ನು ನೀವು ಹೆಚ್ಚು ಹೊಂದಿದ್ದು ಇದನ್ನು ಮಗುವು ನಿಯಮಿತವಾಗಿ ಪಡೆದುಕೊಳ್ಳದೇ ಇದ್ದ ಸಂದರ್ಭದಲ್ಲಿ ಸ್ತನದಲ್ಲಿ ಬಾವು, ಊತ ಕಾಣಿಸಿಕೊಳ್ಳುತ್ತದೆ. ಇದರಿಂದ ಸ್ತನ ತೊಟ್ಟುಗಳಲ್ಲಿ ಸಹ ನೋವು ಕಾಣಿಸಿಕೊಳ್ಳುತ್ತದೆ.
ಒಣಗುವಿಕೆ ಮತ್ತು ತಾಪಮಾನದಲ್ಲಿ ಉಂಟಾಗುವ ಬದಲಾವಣೆಗಳು ತಾಪಮಾನಕ್ಕೆ ಒಳಗಾಗಿ ಕೂಡ ನಿಮ್ಮ ಮೊಲೆ ತೊಟ್ಟು ಬದಲಾವಣೆಯನ್ನು ಹೊಂದುತ್ತದೆ. ಹಾಲುಣಿಸುವ ಸಂದರ್ಭದಲ್ಲಿ ಒಮ್ಮೆಲೆ ಬೆಚ್ಚಗಾಗಬಹುದು ಇಲ್ಲವೇ ತಣ್ಣಗಾಗಬಹುದು. ತೇವಾಂಶವನ್ನು ನಿಮ್ಮ ಸ್ತನದ ತೊಟ್ಟು ಹೀರಿಕೊಳ್ಳುತ್ತದೆ. ಇದರಿಂದ ತೊಟ್ಟು ಒಣಗಿ ಅದರಿಂದ ರಕ್ತ ಕೂಡ ಬರಬಹುದು. ಈ ಎಲ್ಲಾ ಸಮಸ್ಯೆಗಳು ಕೆಲವೇ ದಿನಗಳಲ್ಲಿ ನಿವಾರಣೆಯಾಗುತ್ತದೆ ಮತ್ತು ನೋವು ಕೂಡ ಮಾಯವಾಗುತ್ತದೆ. ವೈದ್ಯರೂ ಈ ಸಮಸ್ಯೆಗೆ ಔಷಧಗಳನ್ನು ನೀಡಿದರೂ ಅದು ಸ್ವಲ್ಪ ಸಮಯ ಮಾತ್ರ ಪ್ರಭಾವಶಾಲಿಯಾಗಿರುತ್ತದೆ. ಆದ್ದರಿಂದ ಈ ಸಮಸ್ಯೆಗೆ ಆಯುರ್ವೇದವೇ ತಕ್ಕ ಪರಿಹಾರ.
ಎದೆಹಾಲು ಎದೆಹಾಲನ್ನು ಉಣಿಸುವುದರಿಂದ ನಿಮ್ಮ ಈ ಸಮಸ್ಯೆ ನಿವಾರಣೆಯಾಗುತ್ತದೆ. ಎದೆಹಾಲು ಆಂಟಿಬ್ಯಾಕ್ಟೀರಿಯಲ್ ಅಂಶಗಳನ್ನು ಒಳಗೊಂಡಿರುವುದರಿಂದ ತೊಟ್ಟಿನ ನೋವು ಮತ್ತು ಬಿರುಕನ್ನು ಉಪಶಮನ ಮಾಡುತ್ತದೆ. ಎದೆಹಾಲನ್ನು ಸ್ವಲ್ಪ ತೆಗೆದುಕೊಂಡು ನಿಮ್ಮ ಮೊಲೆ ತೊಟ್ಟಿಗೆ ಮಸಾಜ್ ಮಾಡಿಕೊಳ್ಳಿ. ಅದನ್ನು ಮುಚ್ಚುವ ಮುನ್ನ ಸಂಪೂರ್ಣ ಒಣಗಲು ಬಿಡಿ. ದಿನದಲ್ಲಿ ಆಗಾಗ್ಗೆ ಈ ಕ್ರಿಯೆಯನ್ನು ಅನುಸರಿಸಿ.
ಬಿಸಿ ಎಣ್ಣೆ ಮಸಾಜ್ ಎಣ್ಣೆಗಳಾದ ತೆಂಗಿನೆಣ್ಣೆ, ಬಾದಾಮಿ, ಸೆಸಮೆ ಎಣ್ಣೆ ಮತ್ತು ಆಯಿಲ್ ಎಣ್ಣೆಯಿಂದ ತೊಟ್ಟಿಗೆ ಮಸಾಜ್ ಮಾಡಿಕೊಳ್ಳಿ. ಇದರಿಂದ ತೊಟ್ಟಿನ ಒಣಗುವಿಕೆಯಂತಹ ಸಮಸ್ಯೆ ನಿವಾರಣೆಯಾಗುತ್ತದೆ. ಮೇಲೆ ತಿಳಿಸಿದ ಎಣ್ಣೆಗಳನ್ನು ಬೆಚ್ಚಗೆ ಮಾಡಿಕೊಂಡು ತೊಟ್ಟಿಗೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿಕೊಳ್ಳಿ.
ಬೆಚ್ಚಗಿನ ಕಂಪ್ರೆಸ್ ಬೆಚ್ಚಗಿನ ಕಂಪ್ರೆಸ್ ಅನ್ನು ತೊಟ್ಟಿನ ಮೇಲೆ ಇರಿಸುವುದರಿಂದ ಕೂಡ ತೊಟ್ಟಿನ ಬಿರುಕಿನ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಬಹುದಾಗಿದೆ. ಹೆಚ್ಚುವರಿ ಹಾಲನ್ನು ಸ್ತನದಲ್ಲಿ ಕಟ್ಟದಂತೆ ಮಾಡಲು ಇದು ಸಹಾಯ ಮಾಡಲಿದೆ. ಸ್ವಲ್ಪ ಬೆಚ್ಚಗಿನ ನೀರನ್ನು ಪಾತ್ರೆಯಲ್ಲಿ ತೆಗೆದುಕೊಳ್ಳಿ ಮತ್ತು ಸ್ವಚ್ಛ ಬಟ್ಟೆಯನ್ನು ಅದರಲ್ಲಿ ಮುಳುಗಿಸಿ. ಆ ಬಟ್ಟೆಯನ್ನು ಸ್ತನದ ಮೇಲಿರಿಸಿ. ಹೀಗೆ ಆಗಾಗ್ಗೆ ಮಾಡಿ.
ತಣ್ಣಗಿನ ಕಂಪ್ರೆಸ್ ರಕ್ತದ ಕೋಶಗಳನ್ನು ನಿರಾಳಗೊಳಿಸಿ ನೋವನ್ನು ಕಡಿಮೆ ಮಾಡಲು ತಣ್ಣಗಿನ ಕಂಪ್ರೆಸ್ ಸಹಾಯ ಮಾಡಲಿದೆ. ಇದು ತೊಟ್ಟನ್ನು ಮೆತ್ತಗಾಗಿಸುತ್ತದೆ ಮತ್ತು ನೋವು ನಿವಾರಣೆ ಮಾಡುತ್ತದೆ. ತಣ್ಣಗಿನ ನೀರಿನಲ್ಲಿ ಬಟ್ಟೆಯನ್ನು ಅದ್ದಿಕೊಂಡು ಅದನ್ನು ತೊಟ್ಟಿನ ಮೇಲಿರಿಸಿ.
ತುಳಸಿ ಎಲೆಗಳ ಪೇಸ್ಟ್ ತುಳಸಿ ಎಲೆಗಳು ಯಾವುದೇ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಉತ್ತಮವಾಗಿರುತ್ತವೆ. ಅವುಗಳು ಬ್ಯಾಕ್ಟೀರಿಯಾದ ಗುಣಲಕ್ಷಣಗಳಿಂದ ತುಂಬಿರುತ್ತವೆ, ಬಿರುಕುಗೊಂಡ ಚರ್ಮವನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಮತ್ತು ನೋವಿಗೆ ಉಪಶಮನ ನೀಡುತ್ತದೆ. ತುಳಸಿ ಎಲೆಯನ್ನು ಪೇಸ್ಟ್ ರೂಪದಲ್ಲಿ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಮೊಲೆತೊಟ್ಟುಗಳ ಮೇಲೆ ಹಚ್ಚಿ 10 ನಿಮಿಷಗಳ ನಂತರ ಅದನ್ನು ತೊಳೆಯಿರಿ. ಒಂದು ದಿನದಲ್ಲಿ ಹಲವಾರು ಬಾರಿ ಪುನರಾವರ್ತಿಸಿ.
ಅಲೊವೇರಾ ಜೆಲ್ ಬಿರುಕಿನ ಮತ್ತು ನೋವಿನ ತೊಟ್ಟನ್ನು ಉಪಶಮನ ಮಾಡಲು ಅಲೊವೇರಾ ಜೆಲ್ ಸಹಕಾರಿಯಾಗಿದೆ. ಇದು ಈ ಸ್ಥಳವನ್ನು ಮಾಯಿಶ್ಚರೈಸ್ ಮಾಡುತ್ತದೆ ಮತ್ತು ಹೆಚ್ಚು ಒಣಗುವಿಕೆಯಿಂದ ತಡೆಯುತ್ತದೆ. ತಾಜಾ ಅಲೊವೇರಾ ಜೆಲ್ ಅನ್ನು ತೊಟ್ಟಿಗೆ ಹಚ್ಚಿಕೊಳ್ಳಿ ತದನಂತರ 5 ನಿಮಿಷ ಕಳೆದು ಇದನ್ನು ತೊಳೆದುಕೊಳ್ಳಿ.
ಟಿ ಟ್ರಿ ಆಯಿಲ್ ಇದರಲ್ಲಿರುವ ಆಂಟಿಸೆಪ್ಟಿಕ್ ಅಂಶವು ತೊಟ್ಟನ್ನು ಮೃದುವಾಗಿಸಿ ನೋವನ್ನು ಉಪಶಮನ ಮಾಡುತ್ತದೆ. ತೊಟ್ಟಿಗೆ ಕೆಲವು ಹನಿಗಳಷ್ಟು ಟಿ ಟ್ರಿ ಆಯಿಲ್ ಅನ್ನು ಹಚ್ಚಿಕೊಳ್ಳಿ.
ಚಮೊಯಿಲ್ ಇದರಲ್ಲಿರುವ ಆಂಟಿ ಇನ್ಫ್ಲಾಮೇಟರಿ ಅಂಶವು ತೊಟ್ಟಿನ ಊದುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ನೋವನ್ನು ಉಪಶಮನ ಮಾಡುತ್ತದೆ. ಇದು ತೊಟ್ಟು ಒಣಗುವುದನ್ನು ನಿವಾರಿಸಿ ಬಿರುಕನ್ನು ಶಮನ ಮಾಡುತ್ತದೆ. ತಾಜಾ ಚಮೊಯಿಲ್ ಅನ್ನು ಕುದಿಸಿಕೊಳ್ಳಿ. ಇದಕ್ಕೆ ಬಟ್ಟೆಯನ್ನು ಅದ್ದಿ ನಿಮ್ಮ ಊದಿಕೊಂಡ ತೊಟ್ಟಿನ ಮೇಲಿರಿಸಿಕೊಳ್ಳಿ. ದಿನದಲ್ಲಿ ಈ ಕ್ರಿಯೆಯನ್ನು ಪುನರಾವರ್ತಿಸಿಕೊಳ್ಳಿ. ಚಮೊಯಿಲ್ ಟಿ ಬ್ಯಾಗ್ ಅನ್ನು ನೇರವಾಗಿ ತೊಟ್ಟಿನ ಮೇಲೆ ಕೂಡ ನೀವಿರಿಸಿಕೊಳ್ಳಬಹುದಾಗಿದೆ.