ಬೆಳಗ್ಗೆ ಎದ್ದ ಕೂಡಲೇ ಮುಖ ದುಂಡಾಗಿ ಕಾಣಿಸುತ್ತಾ? ಹೀಗೆ ಆಗೋದ್ಯಾಕೆ ಗೊತ್ತಾ?

ನೀವು ಬೆಳಗ್ಗೆ ಎದ್ದಾಗ ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳುವ ಅಭ್ಯಾಸ ಹೊಂದಿರಬಹುದು. ಅದರಲ್ಲೂ ಕನ್ನಡಿಯಲ್ಲಿ ನೋಡಿದಾಗ ನಿಮ್ಮ ಮುಖ ದಿನವೂ ನೋಡಿದ್ದಕ್ಕಿಂತಲೂ ಸ್ವಲ್ಪ ವಿಚಿತ್ರವಾಗಿ ಕಂಡುಬರಬಹುದು. ಮುಖದಲ್ಲಿ ಹೊಸ ರೀತಿ ಹೊಳಪು, ಹೊಸ ರೀತಿಯ ಕಾಂತಿ ನಿಮಗೆ ಕಾಣಬಹುದು. ಹಾಗೆ ಮುಖ ಸ್ವಲ್ಪ ದಪ್ಪವಾಗಿ ದುಂಡಾಗಿ ಕಾಣಿಸಬಹುದು.

ನಿತ್ಯ ಬೆಳಗ್ಗೆ ನಿಮ್ಮ ಮುಖ ಸಾಮಾನ್ಯಕ್ಕಿಂತ ಸ್ವಲ್ಪ ದುಂಡಾಗಿ ಕಾಣಿಸಬಹುದು. ನೀವು ಕೂಡ ಇದನ್ನು ನೋಡಿರುತ್ತೀರಿ. ಅದು ಕೆಲವೇ ನಿಮಿಷದಲ್ಲಿ ಯಥಾಸ್ಥಿತಿಗೂ ಬರುವುದು ಗಮನಿಸಿರಬಹುದು. ಇದರ ಹಿಂದಿನ ಕಾರಣ ಏನು ಎಂಬುದು ನಿಮಗೆ ಗೊತ್ತಾ? ಇದರಿಂದ ಆರೋಗ್ಯಕ್ಕೆ ಯಾವುದಾದರು ಹಾನಿ ಇದೆಯೇ ಎಂಬುದನ್ನು ನೀವು ಕೂಡ ತಿಳಿದುಕೊಳ್ಳಿ.

ನೀವು ಬೆಳಗ್ಗೆ ಎದ್ದ ಕೂಡಲೇ ಕನ್ನಡಿಯಲ್ಲಿ ಮುಖ ನೋಡಿದರೆ ಮುಖ ಸಾಮಾನ್ಯ ಗಾತ್ರಕ್ಕಿಂತ ಸ್ವಲ್ಪ ದಪ್ಪವಾಗಿ ಕಾಣಿಸಲಿದೆ. ದುಂಡಾಗಿ, ಊದಿಕೊಂಡಂತೆ ಕಾಣಿಸಬಹುದು. ಇದು ಎಲ್ಲರಲ್ಲೂ ಕಾಣಿಸುವ ಸಾಮಾನ್ಯ ಪ್ರಕ್ರಿಯೆ ಆದ್ರೆ ಇದರ ಹಿಂದಿರುವ ಕಾರಣ ಕೂಡ ನೀವು ತಿಳಿದಿರಬೇಕಾಗುತ್ತದೆ. ಕೆಲವೊಮ್ಮೆ ಇದು ಸಾಮಾನ್ಯ ಕ್ರಿಯೆ ಆಗಿರಲಿದೆ. ಏಕೆಂದರೆ ಮಲಗಿದಾಗ ಮುಖದ ಚಲನೆಯಿಲ್ಲದೆ ನರಗಳೆಲ್ಲವು ತಟಸ್ಥವಾಗಿರುವುದರಿಂದ ಮುಖ ಸ್ವಲ್ಪ ದುಂಡಾಗಿ ಕಾಣಿಸಲಿದೆ. 

ನೀವು ಎದ್ದ ಕೂಡಲೇ ಮತ್ತೆ ಸಾಮಾನ್ಯ ಸ್ಥಿತಿಗೆ ಬರಲಿದೆ. ಇನ್ನು ಇದು ಕೆಲವೊಂದು ಕೆಟ್ಟ ಅಭ್ಯಾಸಗಳನ್ನು ತೆರೆದಿಡಲಿದೆ. ಅದ್ರಲ್ಲೂ ನೀವು ಬದಲಾಯಿಸಿಕೊಳ್ಳಬೇಕಾದ ಕೆಲವು ಅಭ್ಯಾಸಗಳ ಕುರಿತಾಗಿ ಇದು ಎಚ್ಚರಿಕೆ ಸಹ ನೀಡಲಿದೆ. 

ತಡರಾತ್ರಿವರೆಗೂ ಎಚ್ಚರದಿಂದ ಇದ್ದರೆ ನಿಮ್ಮ ಮುಖ ಬೆಳಗ್ಗೆ ದುಂಡಾಗಿ ಕಾಣಿಸುವುದು ಅಥವಾ ಊದಿಕೊಂಡಂತೆ ಕಂಡರೆ ನೀವು ಹಿಂದಿನ ದಿನ ರಾತ್ರಿ ಸರಿಯಾಗಿ ನಿದ್ದೆ ಮಾಡಿಲ್ಲದ ಸಂಕೇತವಾಗಿರಲಿದೆ. ಹಾಗೆ ನಿದ್ದೆ ಸರಿಯಾಗಿ ಮಾಡದೆ ಇದ್ದರೆ ಕೂಡ ಮುಖವು ದಪ್ಪವಾಗಿರುವುದು ನೋಡಬಹುದು. ಇಲ್ಲವೆ ತಡವಾಗಿ ನಿದ್ರೆ ಮಾಡಿರುವ ಸಂಕೇತವು ಹೌದು.

ಬೆಳಗ್ಗೆ ಊದಿಕೊಂಡ ಮುಖ ಅಥವಾ ಮುಖದ ಊತವು ಆಧಾರವಾಗಿರುವ ವೈದ್ಯಕೀಯ ಪರಿಸ್ಥಿತಿಗಳ ಸಂಕೇತವೂ ಆಗಿರಬಹುದು. ಆಹಾರ ಅಥವಾ ನಿರ್ದಿಷ್ಟ ಔಷಧಿಗೆ ಅಲರ್ಜಿ ಅಥವಾ ಚರ್ಮದ ಆರೈಕೆ ಉತ್ಪನ್ನಕ್ಕೆ ಸೂಕ್ಷ್ಮತೆಯು ಊತಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ನೀವು ಹಿಂದಿನ ದಿನ ರಾತ್ರಿ ತೆಗೆದುಕೊಂಡಿದ್ದ ಔಷಧಿಯ ಕಾರಣಕ್ಕೆ ಮುಖ ಊದಿಕೊಂಡಿರಬಹುದು. ಹಾಗೆ ನೀವು ಮದ್ಯಪಾನ ಮಾಡುವ ವ್ಯಕ್ತಿ ಆಗಿದ್ದರೆ ಬೆಳಗ್ಗೆ ಎದ್ದ ಕೂಡಲೆ ನಿಮ್ಮ ಮುಖ ಊದಿಕೊಂಡಂತೆ ಕಾಣಿಸಬಹುದು. ಇದು ಹಲವರಲ್ಲಿ ಕಾಣಿಸಲಿದೆ. ಮತ್ತೆ ಕೆಲವರ ಮುಖ ಸಾಮಾನ್ಯಕ್ಕಿಂತ ಹೆಚ್ಚು ಊದಿಕೊಂಡಂತೆ ಕಾಣಿಸುತ್ತಿದ್ದರೆ ಅವರಲ್ಲಿ ಕಿಡ್ನಿ ಸಮಸ್ಯೆಯೂ ಇರಬಹುದು ಎಂದು ಅಂದಾಜಿಸಲಾಗುತ್ತದೆ. ಇಲ್ಲವೆ ನೀವು ಹಿಂದಿನ ದಿನ ರಾತ್ರಿ ಹೆಚ್ಚು ಉಪ್ಪು ಭರಿತ ಆಹಾರ ಸೇವಿಸಿದ್ದರೆ ಕೂಡ ಈ ರೀತಿಯ ಸಮಸ್ಯೆ ಆಗುತ್ತದೆ. ಹೀಗೆ ಮುಖ ಸ್ವಲ್ಪ ದುಂಡಾಗಿ ಕಾಣಿಸಿದರೆ ಬೆಳಗ್ಗೆ ತಣ್ಣೀರಿನಲ್ಲಿ ಮುಖ ತೊಳೆಯಬೇಕು. ಹಾಗೆ ಹೆಚ್ಚು ನೀರು ಕುಡಿಯುವುದು ರಾತ್ರಿ ಬೇಗ ಮಲಗುವುದು, ಕಡಿಮೆ ಉಪ್ಪಿನ ಪದಾರ್ಥ ಸೇವಿಸುವುದು, ಮದ್ಯಪಾನ ತ್ಯಜಿಸುವುದು ಹೀಗೆ ಹಲವು ರೀತಿಯ ಕ್ರಮದ ಮೂಲಕ ನೀವು ಪರಿಹಾರ ಪಡೆಯಬಹುದು.

ಇನ್ನು ಇದನ್ನು ನೀವು ಗಂಭೀರವಾಗಿ ಪರಿಗಣಿಸುವುದು ಉತ್ತಮ. ಸಾಮಾನ್ಯಕ್ಕಿಂತ ಹೆಚ್ಚು ನಿಮ್ಮ ಮುಖ ಊದಿಕೊಂಡರೆ ಅದು ಕಿಡ್ನಿಯಲ್ಲಿನ ಸಮಸ್ಯೆಯ ಲಕ್ಷಣವೂ ಆಗಿರಬಹುದು. ಇದರಿಂದ ನೀವು ವೈದ್ಯಕೀಯ ಸಲಹೆ ಪಡೆಯುವುದು ಮುಖ್ಯವಾಗುತ್ತದೆ.