ಕಾಲಿಫ್ಲವರ್ ನಿಂದ ಹುಳವೆಲ್ಲಾ ತೆಗೆದು ಕ್ಲೀನ್ ಮಾಡಲು ಇಲ್ಲಿದೆ ಟಿಪ್ಸ್

ಕಾಲಿಫ್ಲವರ್ ಆರೋಗ್ಯಕರ ತರಕಾರಿಯಾಗಿದ್ದು, ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ. ಹಾರ್ಮೋನ್ ಸಮತೋಲನವನ್ನು ಕಾಪಾಡುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಇದು ಕೆಲವರಿಗೆ ತಿನ್ನಲು ತುಂಬಾನೇ ಇಷ್ಟವಾಗುತ್ತದೆ. ಆದರೆ ಇದರಲ್ಲಿ ಹುಳ ಇರುತ್ತದೆ ಎಂದು ಹಿಂದೇಟು ಹಾಕುತ್ತಾರೆ. ಹಾಗಿದ್ದರೆ ಹುಳವೆಲ್ಲಾ ತೆಗೆದು ಕಾಲಿಫ್ಲವರ್ ಕ್ಲೀನ್ ಮಾಡಲು ಇಲ್ಲಿದೆ ಟಿಪ್ಸ್.

* ಕಾಲಿಫ್ಲವರ್ ನ್ನು ಮೊದಲು ಹೊರಾವರಣವನ್ನೆಲ್ಲಾ ತೆಗೆದು ಎಸಳುಗಳಾಗಿ ಮಾಡಿ.

* ದೊಡ್ಡ ಬೌಲ್ ನಲ್ಲಿ ತಂಪು ನೀರು ಹಾಕಿ. ಇದಕ್ಕೆ 1 ರಿಂದ ಎರಡು ಸ್ಪೂನ್ ಉಪ್ಪು ಹಾಕಿ ಕರಗಿಸಿ.

* ಈಗ ಕಾಲಿಫ್ಲವರ್ ಎಸಳುಗಳನ್ನು ಹಾಕಿ ಮೇಲಿನಿಂದ ಅದು ಮುಳುಗುವಂತೆ ಸಣ್ಣ ಪ್ಲೇಟ್ ಇಡಿ.

* ಈಗ 5-10 ನಿಮಿಷ ನೆನೆಸಿಡಿ. ಬಳಿಕ ಶುದ್ಧ ನೀರಿನಿಂದ ತೊಳೆದು ನೀರು ಬಸಿದಿಡಿ.

* ಉಪ್ಪಿನ ಬದಲು ವಿನೇಗರ್ ಅರ್ಧಕಪ್ ಹಾಕಿ ದ್ರಾವಣ ರೆಡಿ ಮಾಡಿ.

* ಇದರಲ್ಲಿ ಕಾಲಿಫ್ಲವರ್ ಮುಳುಗುವಂತೆ 10 ನಿಮಿಷ ನೆನೆಸಿಡಿ.

* ಬಳಿಕ ಶುದ್ಧ ನೀರಿನಿಂದ ತೊಳೆದು ಬಳಸಿ.