ನೆಲದ ಮೇಲೆ ಅಡುಗೆ ಎಣ್ಣೆ ಬಿದ್ದರೆ ಹೀಗೆ ಕ್ಲೀನ್ ಮಾಡಿ!

ಕೈ ಜಾರಿ ಎಣ್ಣೆ ನೆಲದ ಮೇಲೆ ಬಿಳೋದು ಸಾಮಾನ್ಯ. ನೆಲದ ಮೇಲೆ ಅಥವಾ ಕೌಂಟರ್ಟಾಪ್ಗಳ ಮೇಲೆ ಎಣ್ಣೆ ಸೋರಿಕೆಯಾದರೆ, ಅದನ್ನು ಕೂಡಲೇ ಸ್ವಚ್ಛಗೊಳಿಸುವುದು ತುಂಬಾ ಮುಖ್ಯವಾಗುತ್ತದೆ. ಇಲ್ಲದಿದ್ದರೆ ಮಕ್ಕಳು, ವಯಸ್ಸಾದವರಷ್ಟೇ ಅಲ್ಲ, ಕೆಲವೊಮ್ಮೆ ನೀವು ಸಹ ಜಾರಿ ಬೀಳುವ ಸಾಧ್ಯತೆ ಹೆಚ್ಚು. ಇದರಿಂದ ಗಂಭೀರ ಹಾನಿಯಾದರೆ ಸಾಕಷ್ಟು ಅಪಾಯವನ್ನು ಎದುರಿಸಬೇಕಾಗಬಹುದು.

ಅನೇಕ ವೇಳೆ ಈ ಎಣ್ಣೆಯನ್ನು ಸ್ವಚ್ಛಗೊಳಿಸಲು ನಿಜಕ್ಕೂ ಸಾಕಷ್ಟು ಗೃಹಿಣಿಯರಿಗೆ ಕಷ್ಟವಾಗುತ್ತದೆ. ಇನ್ನೂ ಒದ್ದೆ ಬಟ್ಟೆಯಿಂದ ಒರೆಸುವುದರಿಂದ ಎಣ್ಣೆ ಹೆಚ್ಚು ಅಂಟಿಕೊಳ್ಳುತ್ತದೆ. ಆದರೆ ಕೆಲವು ಸೂಪರ್ ಕಿಚನ್ ಟಿಪ್ಸ್ ಫಾಲೋ ಮಾಡುವ ಮೂಲಕ ನೀವು ಸುಲಭವಾಗಿ ಎಣ್ಣೆಯನ್ನು ಸ್ವಚ್ಛಗೊಳಿಸಬಹುದು. 

ಅಡುಗೆ ಮನೆಯಲ್ಲಿ ಎಣ್ಣೆ ಚೆಲ್ಲಿದರೆ ಹೀಗೆ ಮಾಡಿ: 
ಎಣ್ಣೆಯನ್ನು ಸ್ವಚ್ಛಗೊಳಿಸಲು ನೀರನ್ನು ಬಳಸಬೇಡಿ. ತಕ್ಷಣ ಎಣ್ಣೆಯ ಮೇಲೆ ಗೋಧಿ ಹಿಟ್ಟು ಅಥವಾ ಕಡಲೆ ಹಿಟ್ಟನ್ನು ಸಿಂಪಡಿಸಿ. ಆಗ ಹಿಟ್ಟು ತಕ್ಷಣ ಎಣ್ಣೆಯನ್ನು ಹೀರಿಕೊಳ್ಳುತ್ತದೆ.

ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟು, ನಂತರ ಒಂದು ಹಳೆಯ ಪೇಪರ್ ಅಥವಾ ಟವಲ್ ಸಹಾಯದಿಂದ ಹಿಟ್ಟು ಮತ್ತು ಎಣ್ಣೆ ಮಿಶ್ರಣವನ್ನು ತೆಗೆದುಹಾಕಿ. ನಂತರ ಒಣ ಬಟ್ಟೆಯಿಂದ ಆ ಪ್ರದೇಶವನ್ನು ಒರೆಸಿ. ಆಗ ನೆಲ ಅಥವಾ ಕೌಂಟರ್ಟಾಪ್ ಸ್ವಚ್ಛವಾಗಿರುತ್ತದೆ ಮತ್ತು ಎಣ್ಣೆಯ ಕಲೆಗಳಿಂದ ಮುಕ್ತವಾಗಿರುವುದನ್ನು ನೀವೇ ಕಾಣುತ್ತೀರಿ.

ಅಡುಗೆ ಸೋಡಾ:
ಎಣ್ಣೆಯುಕ್ತ ಅಂದರೆ ಜಿಡ್ಡಿನ ಕಲೆಯನ್ನು ತೆಗೆದುಹಾಕುವಲ್ಲಿ ಅಡುಗೆ ಸೋಡಾ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಎಣ್ಣೆ ಚೆಲ್ಲಿದ ಮೇಲೆ ಅಡುಗೆ ಸೋಡಾವನ್ನು ಸಿಂಪಡಿಸಿ. ನಂತರ 5 ರಿಂದ 10 ನಿಮಿಷಗಳ ಕಾಲ ಅಡುಗೆ ಸೋಡಾವನ್ನು ಹಾಗೆಯೇ ಬಿಡಿ. ಇದು ಎಣ್ಣೆಯನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ. ನಂತರ ಒಣ ಸ್ಪಾಂಜ್ ಅಥವಾ ಪೇಪರ್ ಟವಲ್ ನಿಂದ ಒರೆಸಿ. ನಂತರ, ಪಾತ್ರೆ ತೊಳೆಯುವ ಲಿಕ್ವೆಡ್ ಬೆರೆಸಿ, ಬೆಚ್ಚಗಿನ ನೀರಿನಿಂದ ಒರೆಸಿ, ಇದು ಯಾವುದೇ ಶೇಷವಿಲ್ಲದಂತೆ ಹೊರಬರುವಂತೆ ಮಾಡುತ್ತದೆ.

ವೃತ್ತಪತ್ರಿಕೆ ಬಳಕೆ:
ಸ್ವಲ್ಪ ಪ್ರಮಾಣದ ಎಣ್ಣೆ ಚೆಲ್ಲಿದರೆ ನೀವು ಹಳೆಯ ವೃತ್ತಪತ್ರಿಕೆಗಳನ್ನು ಬಳಸಬಹುದು. ಚೆಲ್ಲಿದ ಎಣ್ಣೆಯ ಮೇಲೆ ಹಳೆಯ ವೃತ್ತಪತ್ರಿಕೆ ಇರಿಸಿ. ಆಗ ವೃತ್ತಪತ್ರಿಕೆ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಅದನ್ನು ತಕ್ಷಣ ತೆಗೆದು ಕಸದ ಬುಟ್ಟಿಗೆ ಎಸೆಯಿರಿ. ನಂತರ ಅದನ್ನು ಸಾಬೂನು ನೀರಿನಿಂದ ಸಿಂಪಡಿಸಿ ಮತ್ತು ಜಿಗುಟುತನವನ್ನು ಒರೆಸಿ ತೆಗೆದು ಹಾಕಿ.

ಪಾತ್ರೆ ತೊಳೆಯುವ ಲಿಕ್ವೆಡ್ ಅನ್ನು ಬಿಸಿ ನೀರಿನೊಂದಿಗೆ ಬೆರೆಸಿ. ಈ ಮಿಶ್ರಣವನ್ನು ಎಣ್ಣೆಯುಕ್ತ ಪ್ರದೇಶಕ್ಕೆ ಹಚ್ಚಿ ಸ್ಕ್ರಬ್ಬರ್ ಬಳಸಿ ಚೆನ್ನಾಗಿ ಉಜ್ಜಿಕೊಳ್ಳಿ. ಪಾತ್ರೆ ತೊಳೆಯುವ ಲಿಕ್ವೆಡ್ ನಲ್ಲಿರುವ ರಾಸಾಯನಿಕಗಳು ಎಣ್ಣೆಯುಕ್ತ ಕಲೆಗಳನ್ನು ಕರಗಿಸುವ ಶಕ್ತಿಯನ್ನು ಹೊಂದಿವೆ.