ನೀರ್ ದೋಸೆ ಮಾಡಲು ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಅನ್ನೋದು ಹಲವರಲ್ಲಿ ಕಾಡುವ ಸಮಸ್ಯೆ ಎನ್ನಬಹುದು. ಕೆಲವೊಮ್ಮೆ ಹಿಟ್ಟು ದಪ್ಪವಾಗುವುದು, ತೆಳುವಾಗುವು, ಇಲ್ಲವೆ ಕಾವಲಿಗೆ ಹಿಡಿಯುವುದು ನೋಡಬಹುದು. ಇಂತಹ ಕೆಲವು ಸಮಸ್ಯೆಗಳ ಎದುರಿಸಿ ಸುಲಭವಾಗಿ ನೀರ್ ದೋಸೆ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಹಾಗಾದ್ರೆ ಸುಲಭವಾಗಿ ಮಸಾಲ ನೀರ್ ದೋಸೆ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.
ಬೇಕಾಗುವ ಪದಾರ್ಥಗಳು:
ಅಕ್ಕಿ, ತೆಂಗಿನ ತುರಿ, ಉಪ್ಪು, ಎಣ್ಣೆ.
ಮಸಾಲ ನೀರ್ ದೋಸೆ ಮಾಡುವ ಸುಲಭದ ವಿಧಾನವಿದು. ನೀರ್ ದೋಸೆ ಮಾಡಲು ಮೊದಲು ಹಿಟ್ಟು ರೆಡಿ ಮಾಡಿಕೊಳ್ಳಬೇಕು. ಇದಕ್ಕಾಗಿ 6ರಿಂದ 7 ಗಂಟೆ ಮೊದಲು ಅಕ್ಕಿಯನ್ನು ತೊಳೆದು ಒಂದು ಪಾತ್ರೆಗೆ ಹಾಕಿ ನೆನೆಸಿಡಬೇಕು. ಈಗ ಒಂದು ಮಿಕ್ಸಿ ಜಾರ್ಗೆ ತುರಿದ ತೆಂಗಿನಕಾಯಿ ಹಾಗೆ ಅಕ್ಕಿಯನ್ನು ಹಾಕಿ ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು.
ಇದೇ ರೀತಿ ಹಿಟ್ಟನ್ನು ರುಬ್ಬಿಕೊಳ್ಳಿ. ನೀರು ಹೆಚ್ಚಾಗಿ ಹಾಕಿಕೊಳ್ಳಿ. ತೆಳುವಾದಷ್ಟು ಉತ್ತಮ. ಹಾಗೆ ಇದಕ್ಕೆ ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಬೇಕು. ಹಾಗೆ ನಿಮಗೆ ಸ್ವಲ್ಪ ಖಾರ ಖಾರವಾಗಿ ಮಸಾಲೆ ನೀರ್ ದೋಸೆ ಬೇಕಾದರೆ ಇದಕ್ಕೆ ಸ್ವಲ್ಪ ಖಾರದ ಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಬಳಿಕ ಹಿಟ್ಟನು 15 ನಿಮಿಷ ಬಿಡಿ. ನೀವು ಹಿಂದಿನ ದಿನವೂ ಸಹ ಈ ಹಿಟ್ಟು ಮಾಡಿಟ್ಟುಕೊಳ್ಳಬಹುದು. ನೀರ್ ದೋಸೆ ಆಗಿರೋದ್ರಿಂದ ತಕ್ಷಣವೇ ಹಿಟ್ಟು ಮಾಡಿ ದೋಸೆ ಮಾಡಬಹುದು.
ಈಗ ಒಲೆ ಮೇಲೆ ಕಾವಲಿ ಇಟ್ಟು ಎಣ್ಣೆ ಹಾಕಿಕೊಂಡು ಬಿಸಿಯಾದ ಬಳಿಕ ಅದಕ್ಕೆ ಹಿಟ್ಟನ್ನು ಹಾಕಿಕೊಳ್ಳಬೇಕು. ದೋಸೆ ಸರಿ ಏಳದಿದ್ದರೆ ಈರುಳ್ಳಿ ಹಾಕಿ ಉಜ್ಜಿಕೊಳ್ಳಿ. ಹಾಗೆ ಕಾವಲಿ ಬಹಳ ಬಿಸಿಯಾಗಿ ಮಾಡಿಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ತೆಳುವಾದ ರುಚಿ ರುಚಿಯ ಮಸಾಲ ನೀರ್ ದೋಸೆ ಸಿದ್ದವಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ. ಇದನ್ನು ಮಾಡುವುದು ಬಹಳ ಸುಲಭ ಹಾಗೆ ಎಲ್ಲರಿಗೂ ಇದು ಇಷ್ಟವಾಗುತ್ತೆ.
