ಈ ಎಲ್ಲಾ ಆರೋಗ್ಯ ಸಮಸ್ಯೆ ಇರುವವರು ಈರುಳ್ಳಿ ತಿನ್ನಬಾರದು

ಈರುಳ್ಳಿ ಆರೋಗ್ಯಕ್ಕೆ ಉತ್ತಮವೇನೋ ಹೌದು. ಆದರೆ ಕೆಲವೊಂದು ತರಕಾರಿಗಳು ಕೆಲವೊಂದು ರೋಗಗಳಿಗೆ ನಿಷಿದ್ಧ. ಅದೇ ರೀತಿ ಈರುಳ್ಳಿ ಕೂಡಾ ಈ ಕೆಲವೊಂದು ಆರೋಗ್ಯ ಸಮಸ್ಯೆ ಇರುವವರು ಸೇವನೆ ಮಾಡಬಾರದು.

ಹೊಟ್ಟೆ ಸಮಸ್ಯೆ ಇರುವವರು:
ಅಜೀರ್ಣ ಸಮಸ್ಯೆ ಇರುವವರು ಈರುಳ್ಳಿ ತಿನ್ನಬಾರದು. ಈರುಳ್ಳಿ ಜೀರ್ಣಕ್ರಿಯೆಗೆ ಕಷ್ಟ. ಹೀಗಾಗಿ ಗ್ಯಾಸ್, ಕೆಳಹೊಟ್ಟೆ ನೋವು, ಹೊಟ್ಟೆ ನೋವು ಅಥವಾ ಸೆಳೆತ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು.

ಎದೆ ಉರಿ:
ಹಸಿ ಈರುಳ್ಳಿ ತಿನ್ನುವುದರಿಂದ ಎದೆ ಉರಿ ಸಮಸ್ಯೆಯಾಗಬಹುದು. ಪದೇ ಪದೇ ಎದೆ ಉರಿ ಸಮಸ್ಯೆ ಅನುಭವಿಸುತ್ತಿದ್ದರೆ ಹಸಿ ಈರುಳ್ಳಿ ಸೇವನೆ ಅವಾಯ್ಡ್ ಮಾಡುವುದು ಉತ್ತಮ.

ಆಹಾರದ ಸೆನ್ಸಿಟಿವಿಟಿ:
ಕೆಲವರಿಗೆ ಕೆಲವೊಂದು ಆಹಾರ ಸೇವನೆಯಿಂದ ಅಲರ್ಜಿ, ಅಸಿಡಿಟಿ, ಹೊಟ್ಟೆ ತೊಳೆಸಿದಂತಾಗುವುದು, ತಲೆಸುತ್ತಿದಂತಾಗುವುದು ಮುಂತಾದ ಸಮಸ್ಯೆ ಬರಬಹುದು. ಅಂತಹವರು ಈರುಳ್ಳಿ ಅವಾಯ್ಡ್ ಮಾಡುವುದು ಉತ್ತಮ.

ಈರುಳ್ಳಿ ಅಲರ್ಜಿ:
ಅಪರೂಪದ ಪ್ರಕರಣಗಳಲ್ಲಿ ಕೆಲವರಿಗೆ ಈರುಳ್ಳಿಯೇ ಅಲರ್ಜಿ ಉಂಟುಮಾಡುತ್ತದೆ. ಚರ್ಮದ ಅಲರ್ಜಿ, ತುರಿಕೆ, ಕಣ್ಣಿನಲ್ಲಿ ನೀರು, ಗಂಟಲು ಕೆರೆತ ಉಂಟಾಗುವ ಸಾಧ್ಯತೆಯಿದೆ.

ಈ ಔಷಧಿ ತೆಗೆದುಕೊಳ್ಳುವವರು ಸೇವಿಸಬಾರದು:
ಇದಲ್ಲದೆ, ಕೆಲವೊಂದು ಸಂದರ್ಭದಲ್ಲಿ ರಕ್ತ ತೆಳುವಾಗಲು ಔಷಧಿ ತೆಗೆದುಕೊಳ್ಳುತ್ತಿರುವವರು, ಆಂಟಿ ಪ್ಲೇಟ್ ಲೆಟ್ ಔಷಧಿಗಳು, ಮಧುಮೇಹ ಕಡಿಮೆ ಮಾಡಲು ಔಷಧಿ ಸೇವನೆ ಮಾಡುತ್ತಿರುವವರಿಗೆ ಇದು ಅಡ್ಡಪರಿಣಾಮ ಉಂಟುಮಾಡಬಹುದು.