ಅಡುಗೆಯಲ್ಲಿ ಸಾಂಬರ ಪದಾರ್ಥಗಳಲ್ಲಿ ಒಂದಾದ ಕಾಳುಮೆಣಸು ಆಹಾರದ ರುಚಿ ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ಕೂಡ ಅಷ್ಟೇ ಸಹಾಯಕವಾಗಿರುತ್ತದೆ. ಪ್ರತಿನಿತ್ಯ ಅಡುಗೆಯಲ್ಲಿ ಖಾರಕ್ಕಾಗಿ ಬಳಸುವ ಪದಾರ್ಥಗಳಲ್ಲಿ ಕಾಳುಮೆಣಸು ಕೂಡ ಒಂದು. ಮೆಣಸಿನ ಪುಡಿಯ ಬದಲು ಕಾಳುಮೆಣಸು ಅಥವಾ ಕರಿ ಮೆಣಸನ್ನು ಬಳಸುವುದರಿಂದ ಸಾಕಷ್ಟು ಅನುಕೂಲತೆಗಳಿವೆ.
ಕಾಳುಮೆಣಸು ಆಹಾರಕ್ಕೆ ಕೇವಲ ಫ್ಲೇವರ್ ನೀಡುವುದು ಮಾತ್ರವಲ್ಲ. ಇನ್ನೂ ಸಾಕಷ್ಟು ಉಪಯೋಗಗಳು ಇದರಲ್ಲಿವೆ. ಅವುಗಳ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.
1. ಕ್ಯಾನ್ಸರ್ ತಡೆಯಲು ಸಹಕರಿಸುತ್ತದೆ:
ಇದರಲ್ಲಿರುವ ಪೈಪರಿನ್ ಅಂಶ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ನಂತರ ನೀಡಿದ ಹೇಳಿಕೆ ಪ್ರಕಾರ ಕಾಳುಮೆಣಸು ಜೊತೆಗೆ ಅರಿಶಿಣ ಸೇರಿಸಿ ಬಳಸಿದರೆ ಅದರಲ್ಲಿ ಆಂಟಿಕ್ಯಾನ್ಸರ್ ಗುಣ ಹೆಚ್ಚಿರುತ್ತದೆ. ಕಾಳುಮೆಣಸಿನಲ್ಲಿ ಪೈಪರಿನ್ ಜೊತೆಗೆ ವಿಟಮಿನ್ ಸಿ, ವಿಟಮಿನ್ ಎ, ಕ್ಯಾರೋಟಿನ್ಸ್, ಫ್ಲವೋನೈಡ್ ಮುಂತಾದವುಗಳು ಕ್ಯಾನ್ಸರ್ ಮತ್ತು ಇನ್ನಿತರ ಕಾಯಿಲೆಗಳು ಬರದಂತೆ ತಡೆಯಲು ಸಹಕರಿಸುತ್ತದೆ.
2. ಜೀರ್ಣಕ್ರಿಯೆಗೆ ಸಹಕರಿಸುತ್ತದೆ:
ಕಾಳುಮೆಣಸು ಅಥವಾ ಕರಿ ಮೆಣಸಿನಲ್ಲಿ ಇರುವ ಪೈಪರಿನ್ ಅಂಶ ಜೀರ್ಣಕ್ರಿಯೆ ಹೆಚ್ಚಲು ಸಹಾಯಕ.ಇದು ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲವನ್ನು ಉತ್ಪತ್ತಿ ಮಾಡುತ್ತದೆ. ಇದು ಪ್ರೋಟಿನ್ ಮತ್ತಿತರ ಅಂಶಗಳನ್ನು ಹೀರಿಕೊಳ್ಳಲು ಸಹಕರಿಸುತ್ತದೆ. ಸರಿಯಾಗಿ ಜೀರ್ಣ ಆಗದಿದ್ದಾಗ ವಾಯು, ಅಜೀರ್ಣ, ಭೇದಿ, ಮಲಬದ್ಧತೆ ಮತ್ತು ಆಮ್ಲೀಯತೆ ಆಗುವುದನ್ನು ಇದರಿಂದ ತಡೆಯಬಹುದು.ಹೈಡ್ರೋಕ್ಲೋರಿಕ್ ಆಮ್ಲ ಇವುಗಳನ್ನು ತಡೆಯುವಲ್ಲಿ ಸಹಕರಿಸುತ್ತದೆ. ಜೀರ್ಣ ಕ್ರಿಯೆಯನ್ನು ಸುಗಮವಾಗಿಸಲು ಖಾದ್ಯಗಳಿಗೆ ಒಂದು ಚಮಚ ಕಾಳುಮೆಣಸಿನ ಪುಡಿಯನ್ನು ಬಳಸಿ.ಇದು ಅಡುಗೆಗೆ ಫ್ಲೇವರ್ ನೀಡುವುದರ ಜೊತೆಗೆ ನಿಮ್ಮ ಹೊಟ್ಟೆಯನ್ನೂ ಸರಿಯಾಗಿ ಇಡುತ್ತದೆ.
3. ತೂಕ ಕಳೆದುಕೊಳ್ಳಲು ಸಹಕರಿಸುತ್ತದೆ:
ಕಾಳುಮೆಣಸು ಆಹಾರಕ್ಕೆ ಸರಿಯಾದ ಸಮೀಕರಣ (ಪೋಷಕಾಂಶಗಳನ್ನು ಹೊರತೆಗೆಯಲು) ಮಾಡಲು ಸಹಕರಿಸುತ್ತದೆ.ಇದರಲ್ಲಿ ಪ್ರಬಲವಾದ ಫೈಟೋನ್ಯೂಟ್ರಿಯೆಂಟ್ಸ್ ಅಂಶ ಇರುವುದರಿಂದ ಇದು ದೇಹದಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸುತ್ತದೆ. ಜೊತೆಗೆ ಇದು ದೇಹದ ಕಲ್ಮಶವನ್ನು ಮತ್ತು ಹೆಚ್ಚುವರಿ ನೀರನ್ನು ಹೊರಹಾಕಲು ಮೂತ್ರ ವಿಸರ್ಜನೆ, ಬೆವರು ಇವುಗಳು ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ದೇಹದ ತೂಕ ಕಡಿಮೆ ಆಗಲು ಸಹಾಯಕವಾಗುತ್ತದೆ.ಆಹಾರ ಪದಾರ್ಥಗಳ ಮೇಲೆ ಕಾಳುಮೆಣಸಿನ ಪುಡಿಯನ್ನು ಬಳಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಆದರೆ ಹೆಚ್ಚು ಖಾರ ತಿನ್ನಬೇಡಿ ಇದರಿಂದ ಇತರ ತೊಂದರೆಗಳು ಕಾಣಿಸಿಕೊಳ್ಳಬಹುದು.
4. ವಾಯು ಶಮನ ಮಾಡುತ್ತದೆ:
ಕಾರ್ಮಿನೇಟಿವ್ ಗುಣವನ್ನು ಹೊಂದಿರುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಗೆ ಸಂಬಂಧಿಸಿದ ನೋವುಗಳನ್ನು ತಡೆಗಟ್ಟಲು ಕಾಳುಮೆಣಸು ಸಹಾಯಕ. ಅಡುಗೆಯಲ್ಲಿ ಮೆಣಸಿನ ಪುಡಿಯ ಬದಲು ಕಾಳುಮೆಣಸನ್ನು ಬಳಸುವುದರಿಂದ ಹೊಟ್ಟೆ ಉಬ್ಬರ ಅಥವಾ ವಾಯು ತುಂಬುವುದನ್ನು ತಡೆಯಬಹುದು.
5. ತಲೆಹೊಟ್ಟನ್ನು ಹೋಗಲಾಡಿಸುತ್ತದೆ:
ತಲೆಹೊಟ್ಟು ವಿರೋಧಿ ಶಾಂಪೂಗಳ ಬದಲು ಕಾಳುಮೆನಸನ್ನು ಬಳಸಿ ನೋಡಿ.ಕಾಳುಮೆಣಸಿನಲ್ಲಿ ಇರುವ ಜೀವವಿರೋಧಿ ಅಂಶ ತಲೆಹೊಟ್ಟು ಹೋಗಲಾಡಿಸಲು ಸಹಕರಿಸುತ್ತದೆ. ಒಂದು ಚಮಚ ಪುಡಿಮಾಡಿದ ಕಾಳುಮೆಣಸನ್ನು ಒಂದು ಲೋಟ ಮೊಸರಿನೊಂದಿಗೆ ಸೇರಿಸಿ ನೆತ್ತಿಗೆ ಹಚ್ಚಿ. ನಂತರ ಅರ್ಧ ಗಂಟೆ ಬಿಟ್ಟು ಕೂದಲನ್ನು ಸರಿಯಾಗಿ ತೊಳೆಯಿರಿ.ಹೆಚ್ಚು ಕಾಳುಮೆಣಸು ಬಳಸಬೇಡಿ ಇದರಿಂದ ತಲೆ ಸುಡುವ ಅನುಭವವಾಗಬಹುದು.
6. ಮೂಗು ಕಟ್ಟುವುದು ಮತ್ತು ಕೆಮ್ಮಿನಿಂದ ಮುಕ್ತಿ:
ಬ್ಯಾಕ್ಟೀರಿಯ ವಿರುದ್ಧ ಹೋರಾಡುವ ಗುಣ ಇದರಲ್ಲಿರುವದರಿಂದ ಕೆಮ್ಮು ಮತ್ತು ನೆಗಡಿಗೆ ಕಾಳುಮೆಣಸು ಪರಿಹಾರ ನೀಡುತ್ತದೆ. ಇದರ ಬಿಸಿ ಮತ್ತು ಖಾರದ ಗುಣ ಕಟ್ಟಿದ ಮೂಗನ್ನು ಕೂಡ ಸರಿಯಾಗಿಸುತ್ತದೆ. ರಸಂ ಮತ್ತು ಸೂಪ್ ಗಳ ಮೇಲೆ ಕಾಳುಮೆಣಸಿನ ಪುಡಿ ಸಿಂಪಡಿಸಿ ಬಳಸುವುದರಿಂದ ಕೆಮ್ಮು ಮತ್ತು ನೆಗಡಿ ಕಡಿಮೆ ಆಗುತ್ತದೆ,ಮತ್ತು ಉಸಿರಾಟವನ್ನು ಸರಾಗವಾಗಿಸುತ್ತದೆ.
7. ಅನೋರೆಕ್ಸಿಯಾದಿಂದ ಮುಕ್ತಿ:
ಕಾಳುಮೆಣಸು ರುಚಿ ಹೆಚ್ಚಿಸಲು ಮತ್ತು ಜೀರ್ಣಕ್ರಿಯೆ ಸುಗಮವಾಗಿಸಲು ಸಹಕಾರಿ. ಹಾಗೆಯೇ ಅನೋರೆಕ್ಸಿಯಾ (ಹಸಿವಾಗದಿರುವಿಕೆ)ಗೆ ಕೂಡ ಇದರಿಂದ ಮುಕ್ತಿ ಸಿಗುತ್ತದೆ. ಕಾಳುಮೆಣಸನ್ನು ಅಡುಗೆಯಲ್ಲಿ ಬಳಸುವುದರಿಂದ ಹಸಿವು ಹೆಚ್ಚುತ್ತದೆ.
8. ದೇಹವು ಪೋಷಕಾಂಶಗಳನ್ನು ಹೀರಲು ಹೆಚ್ಚು ಸಹಕಾರಿ:
ಕಾಳುಮೆಣಸು ಜೈವಿಕ ಲಭ್ಯತೆ ಹೆಚ್ಚಿಸುವಲ್ಲಿ ಸಹಕರಿಸುತ್ತದೆ.ಅಂದರೆ ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಲು ಇದು ಸಹಾಯಕವಾಗಿದೆ.ಇದು ಔಷಧಿಯಾಗಿಯೂ ಕೂಡ ಹೆಚ್ಚು ಸಹಾಯಕವಾಗಿದೆ.
9. ಕಾಳುಮೆಣಸು ನೈಸರ್ಗಿಕ ಖಿನ್ನತಾವಿರೋಧಿ:
ಕಾಳುಮೆಣಸಿನಲ್ಲಿ ಇರುವ ಪೈಪರಿನ್ ಮೆದುಳನ್ನು ಚುರುಕುಗೊಳಿಸುತ್ತದೆ ಮತ್ತು ಖಿನ್ನತೆಯನ್ನು ಹೋಗಲಾಡಿಸುತ್ತದೆ. ನಿತ್ಯ ಸರಿ ಪ್ರಮಾಣದಲ್ಲಿ ಆಹಾರದಲ್ಲಿ ಕಾಳುಮೆಣಸು ಬಳಸುವುದರಿಂದ ಮೆದುಳು ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ದಿನನಿತ್ಯ ಆಹಾರದಲ್ಲಿ ಇದನ್ನು ಬಳಸಿ ಮತ್ತು ಸಲಾಡ್ ಗೆ ಇದನ್ನು ಸಿಂಪಡಿಸಿ ಬಳಸಿ. ಯಾವುದೇ ರೀತಿಯಲ್ಲಿ ಕಾಳುಮೆಣಸು ಬಳಸಿದರೂ ನಿಮ್ಮ ಆರೋಗ್ಯಕ್ಕೆ, ನಿಮ್ಮನ್ನು ಹೆಚ್ಚು ಚುರುಕುಗೊಳಿಸಿ, ಖಿನ್ನತೆಯಿಂದ ಹೊರಬರುವಂತೆ ಮಾಡಲು ಸಹಾಯಕವಾಗಿದೆ.