ಅತಿಯಾಗಿ ಸೀನು ಬರುತ್ತಿದ್ದರೆ ಏನು ಮಾಡಬೇಕು

ಸೀನು ಎಂದರೆ ಮೂಗಿನಿಂದ ಶ್ವಾಸಕೋಶದಿಂದ ಹೊರಹೊಮ್ಮುವ ಅರೆ-ಸ್ವಯಂಪ್ರೇರಿತ ಕೆಮ್ಮುವ ಕ್ರಿಯೆಯಾಗಿದ್ದು, ಇದು ಮೂಗಿನ ಲೋಳೆಪೊರೆಯನ್ನು ಕಿರಿಕಿರಿಗೊಳಿಸುವ ವಿದೇಶಿ ಕಣಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. 

ಧೂಳು, ಹೂವಿನ ಕುಸುಮ ಇತ್ಯಾದಿಗಳು ಕೆಲವರಿಗೆ ಅಲರ್ಜಿ ಉಂಟು ಮಾಡಬಹುದು. ಇದರಿಂದ ಪದೇ ಪದೇ ಸೀನುವ ಪರಿಸ್ಥಿತಿಯಾಗಬಹುದು. ಕೆಲವೊಂದು ವೈರಸ್ ಗಳು ಅತಿಯಾದ ಸೀನುವಿಕೆಗೆ ಕಾರಣವಾಗಬಹುದು. ಮಾಲಿನ್ಯಯುತ ಗಾಳಿಯಿದ್ದರೆ, ಹೊಗೆಯ ವಾತಾವರಣವಿದ್ದರೆ ಸೀನು ಬರಬಹುದು. ವಾತಾವರಣದಲ್ಲಿ ಬದಲಾವಣೆ, ಅತಿಯಾದ ಖಾರದ ಪದಾರ್ಥ ಸೇವನೆಯಿಂದಲೂ ಸೀನು ಬರುವ ಸಾಧ್ಯತೆಯಿರುತ್ತದೆ.

ಪರಿಹಾರ:

* ಸ್ವಲ್ಪ ಶುಂಠಿ ಚೂರಿಗೆ ಉಪ್ಪು ಸೇರಿಸಿಕೊಂಡು ಜಗಿಯುತ್ತಿರಬೇಕು. ಇಲ್ಲವೇ ಶುಂಠಿ ಹಾಕಿ ಕುದಿಸಿದ ನೀರನ್ನು ಪದೇ ಪದೇ ಸೇವನೆ ಮಾಡುತ್ತಿರಬೇಕು.

* ಒಂದು ಲೋಟ ಬಿಸಿ ನೀರು ಅಥವಾ ಹಾಲಿಗೆ ಸ್ವಲ್ಪ ಅರಿಶಿನ ಹಾಕಿಕೊಂಡು ಸೇವನೆ ಮಾಡಬೇಕು.

* ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರತಿನಿತ್ಯ ಬಿಸಿ ನೀರಿಗೆ ಜೇನು ತುಪ್ಪ ಹಾಕಿಕೊಂಡು ಕುಡಿಯುವುದನ್ನು ಅಭ್ಯಾಸ ಮಾಡಿ.

* ತುಳಸಿ ಎಲೆಗಳನ್ನು ಜಜ್ಜಿ ಅದರ ಘಮ ಆಘ್ರಾಣಿಸುತ್ತಿದ್ದರೆ ಸೀನು ಕಡಿಮೆಯಾಗುತ್ತದೆ.