ಈ ಎರಡು ಕೆಲಸ ಮಾಡಿದರೆ ಸೆಕ್ಸ್ ಲೈಫ್ ಖುಷಿ ಆಗಿರುವುದು ಗ್ಯಾರಂಟಿ!

ಸೆಕ್ಸ್ ಮನುಷ್ಯನ ಜೀವನ ಅವಿಭಾಜ್ಯ ಭಾಗ. ಆದರೆ ಕಾಲ ಅದೆಷ್ಟು ಬದಲಾದರೂ ಜನರು ಆ ಬಗ್ಗೆ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಿದ್ದಾರೆ. ಪುರುಷರಂತೆ ಮಹಿಳೆಯರಲ್ಲೂ ಲೈಂಗಿಕತೆಯ ಬಗ್ಗೆ ನಾನಾ ಭಾವನೆಗಳಿರುತ್ತವೆ. ತಾನು ಆನಂದಿಸುವ ಸೆಕ್ಸ್ ಬಗ್ಗೆ ಎಲ್ಲ ಸ್ತ್ರೀಯರಿಗೂ ಅವರದೇ ಕಲ್ಪನೆ ಇರುತ್ತದೆ.  ಲೈಂಗಿಕತೆಯ ಬಗ್ಗೆ ತಿಳಿದಿರದೆ, ಮುಕ್ತವಾಗಿ ಮಾತನಾಡದೆ ಅದೆಷ್ಟೋ ಜನರ ದಾಂಪತ್ಯ ಜೀವನ ಹಾಳಾಗುತ್ತೆ. ಹಾಗಾದರೆ ಈ ಎರಡು ಕೆಲಸ ಮಾಡಿದರೆ ಸೆಕ್ಸ್ ಲೈಫ್‌ ಖುಷಿ ಆಗಿರುತ್ತದೆ.

ದೂರವರಿ:
ದೂರವಿದ್ದಾಗಲೇ ಒಬ್ಬರನ್ನೊಬ್ಬರು ಮಿಸ್ ಮಾಡಿಕೊಳ್ಳುವುದು ಜಾಸ್ತಿ. ಇದು ಲೈಂಗಿಕ ಜೀವನ ಮಾತ್ರವಲ್ಲ, ಪ್ರೀತಿ ಹುಟ್ಟಬೇಕಾದರೂ ಈ ಟ್ರಿಕ್ ಮಾಡಿ ನೋಡಬಹುದು. ದೂರವಿದ್ದಾಗ ಸಂಗಾತಿ ಬಗ್ಗೆ ಹೆಚ್ಚು ಆಕರ್ಷಣೆ ಮೂಡಬಹುದು. ಇದರಿಂದ ಬಯಕೆ ಹೆಚ್ಚಾಗಲು ಸಮಯ ನೀಡಿದಂತಾಗಬಹುದು!

ನಿರೀಕ್ಷಿಸದೇ ಇದ್ದಾಗ ಸರ್ಪೈಸ್ ಕೊಡಿ!
ನಿರೀಕ್ಷಿಸದೇ ಇದ್ದಾಗ ಇನ್ನೊಬ್ಬರಿಗೆ ಕೊಡುವ ಗಿಫ್ಟ್, ಮಾಡುವ ಕೆಲಸ ಹೆಚ್ಚು ಸಂತೋಷ ಕೊಡುತ್ತದೆ. ಅದು ಸೆಕ್ಸ್ ವಿಚಾರಕ್ಕೂ ಅನ್ವಯವಾಗುತ್ತದೆ. ನಿರೀಕ್ಷಸದೇ ಇದ್ದಾಗ ಸಂಗಾತಿಯೊಡನೆ ರೊಮ್ಯಾಂಟಿಕ್ ಕ್ಷಣ ಕಳೆಯುವುದು, ರೊಮ್ಯಾನ್ಸ್ ಮಾಡುವುದು ಮಾಡಿದರೆ ಹೆಚ್ಚು ಖುಷಿ ಕೊಡಬಹುದು!