ಚಿಕನ್ ಪನೀರ್ 65 ಮಾಡಲು ಸುಲಭದ ವಿಧಾನ ಇಲ್ಲಿದೆ!

ನಾನ್ ವೆಜ್ ಪ್ರಿಯರಿಗೆ ಚಿಕನ್ ಕಬಾಬ್ ಅಂದರೆ ಬಾಯಲ್ಲಿ ನೀರು ಬರೋದು ಪಕ್ಕಾ. ಆದರೆ ವೆಜ್ ಪ್ರಿಯರಿಗೆ ಇದೇ ರೀತಿ ಚಿಕನ್ ರುಚಿಯ ಹಲವು ಖಾದ್ಯಗಳು ಇಷ್ಟವಾಗುತ್ತೆ. ಸೋಯಾದಿಂದ ಮಾಡುವಂತಹ ಗ್ರೇವಿಯಿಂದ ಹಿಡಿದು ಪನೀರ್ ಮಸಾಲೆಗಳು ಚಿಕನ್ ಖಾದ್ಯದ ರುಚಿ ನೀಡಲಿವೆ.

ಹಾಗೆ ನಾವಿಂದು ಪನೀರ್ನಿಂದ ಮಾಡುವಂತಹ ಪನೀರ್ 65 ರೆಸಿಪಿ ಕುರಿತಾಗಿ ತಿಳಿದುಕೊಳ್ಳೋಣ. ಚಿಕನ್ 65 ರೆಸಿಪಿಯಂತೆಯೇ ಕಾಣುವ ಈ ಪನೀರ್ 65 ಕೂಡ ಅದ್ಭುತ ರುಚಿ ನೀಡಲಿದೆ. ಮಾಡೋದು ಕೂಡ ಬಹಳ ಸುಲಭ. ಊಟದ ಜೊತೆಗೆ ಈ ಪನೀರ್ 65 ಬಹಳ ರುಚಿ ನೀಡಲಿದೆ. ಹಾಗಾದ್ರೆ ಪನೀರ್ ಬಳಸಿ ಮಾಡುವ ಈ ರುಚಿಯ ಖಾದ್ಯವನ್ನು ಮನೆಯಲ್ಲಿ ನಾವು ಮಾಡುವುದು ಹೇಗೆ?

ಪನೀರ್ನಲ್ಲಿ ಮಾಡುವ ಹಲವು ಖಾದ್ಯಗಳು ರುಚಿಯಲ್ಲಿ ಅದ್ಭುತವಾಗಿರಲಿದೆ. ಆದ್ರೆ ನಾವಿಂದು ಪನೀರ್ 65 ಮಾಡುವ ಕುರಿತು ತಿಳಿದುಕೊಳ್ಳೋಣ. ಪನೀರ್ 65 ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಮಾಹಿತಿ ತಿಳಿಯಿರಿ.

ಪನೀರ್ 65 ಮಾಡಲು ಬೇಕಾಗುವ ವಸ್ತುಗಳು:

ಪನೀರ್

ಧನಿಯಾ ಪುಡಿ- 1ಸ್ಪೂನ್

ಗರಂ ಮಸಾಲ- 1ಸ್ಪೂನ್

ಉಪ್ಪು-ರುಚಿಗೆ ತಕ್ಕಷ್ಟು

ಖಾರದ ಪುಡಿ

ಕಸೂರಿ ಮೇಥಿ

ಅರಶಿಣ

ಶುಂಠಿ

ಶುಂಠಿ ಬೆಳ್ಳುಳ್ಳಿ ಪೇಸ್ಟ್

ಕಾರ್ನ್ ಫ್ಲೋರ್- 2 ಸ್ಪೂನ್

ಅಕ್ಕಿ ಹಿಟ್ಟು- 2 ಸ್ಪೂನ್

ಮೊಸರು- ಸ್ವಲ್ಪ

ಕೊತ್ತಂಬರಿ ಸೊಪ್ಪು

ಎಣ್ಣೆ

ಪನೀರ್ 65 ಮಾಡುವ ಸುಲಭದ ವಿಧಾನವೇನು?
ಮೊದಲಿಗೆ ಪನೀರ್ ಅನ್ನು ಚೌಕಾಕಾರವಾಗಿ ಕತ್ತರಿಸಿಕೊಳ್ಳಬೇಕು. ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ನೀವು ಕತ್ತರಿಸಿಕೊಳ್ಳಿ. ನಂತರ ಒಂದು ಬೌಲ್ಗೆ ಖಾರದ ಪುಡಿ, ಧನಿಯಾ ಪುಡಿ, ಕಾಳು ಮೆಣಸಿನ ಪುಡಿ, ಉಪ್ಪು, ಕಸೂರಿ ಮೇಥಿ, ಗರಂ ಮಸಾಲ, ಅರಶಿಣ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾರ್ನ್ ಫ್ಲೋರ್, ಮೊಸರು, ಅಕ್ಕಿ ಹಿಟ್ಟು ಹಾಕಿ 2 ಸ್ಪೂನ್ ನೀರು ಹಾಕಿ ಕಲಸಿಕೊಳ್ಳಬೇಕು.ಬೋಂಡಾ ಮಾಡಿಕೊಳ್ಳಲು ಮಾಡುವ ಹಿಟ್ಟಿನ ಹದಕ್ಕೆ ಬರಬೇಕು. ನಂತರ ಈ ಹಿಟ್ಟಿಗೆ ಕತ್ತರಿಸಿಕೊಂಡ ಪನೀರ್ ಅನ್ನು ಗಹಾಕಿ ಮಿಶ್ರಣ ಮಾಡಿ.

ಎಲ್ಲಾ ಮಸಾಲೆಯು ಚೆನ್ನಾಗಿ ಹಿಡಿಯುವಂತೆ ಕಲಸಿಕೊಳ್ಳಬೇಕು. ಹಾಗೆ 10 ನಿಮಿಷ ಮುಚ್ಚಳ ಮುಚ್ಚಿ ಮಸಾಲೆ ಚೆನ್ನಾಗಿ ಹಿಡಿಯಲು ಬಿಡಿ. ಈ ಸಮಯದಲ್ಲಿ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ. ಎಣ್ಣೆ ಬಿಸಿಯಾದಾಗ ಈ ಪನೀರ್ ಅನ್ನು ಎಣ್ಣೆಯಳಗೆ ಬಿಡಬೇಕು. ಎಣ್ಣೆ ತುಂಬ ಬಿಸಿಯಾಗಿಸಬೇಡಿ, ಮಧ್ಯಮ ಉರಿಯಲ್ಲಿ ಫ್ರೈ ಮಾಡಿಕೊಳ್ಳಬೇಕು. ಎಣ್ಣೆಯಲ್ಲಿ ಕರಿದ ಬಳಿಕ ಇದನ್ನು ತೆಗೆದು ಒಂದು ಪ್ಲೇಟ್ಗೆ ಹಾಕಿಟ್ಟುಕೊಳ್ಳಿ. ಈಗ ಬಾಣಲೆ ಒಲೆ ಮೇಲೆ ಇಟ್ಟು 2 ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಕರಿಬೇವು, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು, ಒಣ ಮೆಣಸು ಹಾಕಿ 1 ನಿಮಿಷ ಫ್ರೈ ಮಾಡಿ. ಹಾಗೆ ಉಪ್ಪು ಹಾಕಿದ ಬಳಿಕ ಫ್ರೈ ಮಾಡಿದ ಎಲ್ಲಾ ಪನೀರ್ ಅನ್ನು ಇದಕ್ಕೆ ಹಾಕಿ ಉರಿ ದೊಡ್ಡದಾಗಿ ಇಟ್ಟುಕೊಂಡು ಫ್ರೈ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಈ ಪನೀರ್ 65 ರೆಡಿಯಾಗುತ್ತೆ.