ಆದರೆ ಮನೆಯಲ್ಲಿ ತರಕಾರಿಗಳು ಇಲ್ಲದಿದ್ದರೂ ಒಂದೇ ಒಂದು ಈರುಳ್ಳಿ ಬಳಸಿಕೊಂಡು ನೀವು ಸುಲಭವಾಗಿ ರೈಸ್ ಮಾಡಿ ಸವಿಯಬಹುದು. ಅದ್ರಲ್ಲೂ ಈ ರೀತಿಯ ರೈಸ್ ಮಾಡಲು ಹೆಚ್ಚು ವಸ್ತುಗಳು ಬೇಕಾಗಿಲ್ಲ, ಹಾಗೆ ಕಡಿಮೆ ಸಮಯದಲ್ಲಿ ಇದನ್ನು ಮಾಡಿ ಮುಗಿಸಬಹುದು. ಬ್ರೇಕ್ಫಾಸ್ಟ್ ಸಮಯದಲ್ಲಿ ನೀವು ಸಹ ಈ ಹೊಸ ಬಗೆಯ ಈರುಳ್ಳಿ ರೈಸ್ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳಿ.
ಈರುಳ್ಳಿ ರೈಸ್ ಮಾಡಲು 2 ನಿಮಿಷ ಸಾಕು ಹಾಗೆ ಈ ರೈಸ್ ಸವಿಯಲು ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಇದನ್ನು ಮಾಡೋದು ಕೂಡ ಬಹಳ ಸುಲಭ ಆಗಿರೋದ್ರಿಂದ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ಈ ಈರುಳ್ಳಿ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಈರುಳ್ಳಿ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
ಅನ್ನ
ಸಾಸಿವೆ
ಬೆಳ್ಳುಳ್ಳಿ
ಕರಿಬೇವು
ಎಣ್ಣೆ
ಜೀರಿಗೆ
ಈರುಳ್ಳಿ
ಗರಂ ಮಸಾಲ
ಖಾರದ ಪುಡಿ
ಅರಶಿಣ ಉಪ್ಪು
ಕೊತ್ತಂಬರಿ ಸೊಪ್ಪು
ಈರುಳ್ಳಿ ರೈಸ್ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಇದಕ್ಕೆ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಕರಿಬೇವು, ಹಸಿ ಮೆಣಸು, ಗೋಡಂಬಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಹಾಗೆ ಇದಕ್ಕೆ ಹೆಚ್ಚಿಕೊಂಡಿರುವ ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು. ಅನಂತರ ಇದಕ್ಕೆ ಖಾರದ ಪುಡಿ, ಗರಂ ಮಸಾಲ, ಅರಶಿಣ, ಉಪ್ಪು ಸಹ ಹಾಕಿಕೊಂಡು ಮಿಶ್ರಣ ಮಾಡಿ ಫ್ರೈ ಮಾಡಿ. ಇದು ಚೆನ್ನಾಗಿ ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಬೇಕು.
ಅನಂತರ ಇದಕ್ಕೆ ಹುಡಿ ಹುಡಿಯಾದ ಅನ್ನವನ್ನು ಹಾಕಿಕೊಳ್ಳಿ. ಅನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅದ್ರಲ್ಲೂ ಹಳೆಯ ಅನ್ನವನ್ನು ಸಹ ಬಳಸಿ ಇದನ್ನು ಮಾಡಬಹುದು. ನೀವಿದನ್ನು ಬೆಳಗ್ಗೆ ತಿಂಡಿಗೆ ಸವಿದು ಮಧ್ಯಾಹ್ನದ ಬಾಕ್ಸ್ಗೂ ಸಹ ಬಳಸಿಕೊಳ್ಳಬಹುದು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿಕೊಂಡರೆ ನಿಮ್ಮ ಮುಂದೆ ಈ ರುಚಿ ರುಚಿಯ ಈರುಳ್ಳಿ ರೈಸ್ ಸಿದ್ದವಾಗುತ್ತೆ.
