ಬೆಡ್ರೂಂನಲ್ಲಿ ಈ ರೀತಿಯ ವರ್ತನೆ ದಾಂಪತ್ಯ ಬದುಕಿಗೆ ಒಳ್ಳೆಯದು ಅಲ್ಲ!

ಗಂಡ-ಹೆಂಡತಿ ಸಂಬಂಧ ಬಿಡಿಸಲಾರದ ನಂಟು ಆದರೆ ಅಷ್ಟೇ ಸೂಕ್ಷ್ಮವು ಹೌದು. ಚಿಕ್ಕ ಪುಟ್ಟ ವಿಷಯಗಳು ಸಾಕು ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯ ಉಂಟಾಗುವುದು. ಸಂಸಾರ ಎಂದ ಮೇಲೆ ಚಿಕ್ಕ ಪುಟ್ಟ ಮುನಿಸು, ಕೋಪ ಇವೆಲ್ಲಾ ಇದ್ದೇ ಇರುತ್ತದೆ, ಹಾಗೇನೂ ಇಲ್ಲ ಎಂದು ಹೇಳುವ ಗಂಡ-ಹೆಂಡತಿ ಜೋಡಿಯೇ ಇರಲ್ಲ. ಏನಾದರು ಭಿನ್ನಾಭಿಪ್ರಾಯವಿದ್ದರೆ ಅದೆಲ್ಲಾ ಮರೆತು ಚೆನ್ನಾಗಿ ಜೀವನ ಮಾಡಲು ಪ್ರಯತ್ನ ಹಾಕಬೇಕು, ಆದರೆ ಆದರೆ ಗಂಡ-ಹೆಂಡತಿ ಸಂಬಂಧ ಈ ರೀತಿ ಇದ್ದರೆ ಆ ಸಂಸಾರದಲ್ಲಿ ತೊಂದರೆಗಳು ಬರಬಹುದು ಜಾಗ್ರತೆ.

ಬೇರೆ-ಬೇರೆ ಸಮಯಕ್ಕೆ ಮಲಗಲು ಹೋಗುವುದು:
ಇಬ್ಬರು ಮಲಗಲು ಹೋಗುವಾಗ ಜೊತೆಯಾಗಿ ಹೋಗಬೇಕು, ಇಬ್ಬರು ಬೇರೆ-ಬೇರೆ ಸಮಯದಲ್ಲಿ ಮಲಗಲು ಹೋಗುವುದು, ಸಂಗಾತಿ ಮಲಗಲು ಬರುವಷ್ಟರಲ್ಲಿ ತಾವು ನಿದ್ದೆ ಹೋಗುವುದು ಇದೆಲ್ಲಾ ಪ್ರತಿದಿನ ನಡೆಯುತ್ತಿದ್ದರೆ ಅದು ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಸಂಗಾತಿಯ ನಿರೀಕ್ಷೆಯಲ್ಲಿ ಇರುವಾಗ ಅದನ್ನು ಪರಿಗಣಿಸದೆ ತಾವು ಮೊಬೈಲ್ ಅಥವಾ ಫ್ರೆಂಡ್ಸ್ , ಪಾರ್ಟಿ ಅಂತ ಬ್ಯುಸಿಯಾಗಿದ್ದರೆ ಅದು ಸಂಸಾರದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುವುದು.

ಬೆಡ್ರೂಂನಲ್ಲಿ ಮೊಬೈಲ್ ನೋಡುತ್ತಾ ಕಾಲ ಕಳೆಯುವುದು:
ನಾವು ಮಲಗುವ ಕೊಣೆಗೆ ಬಂದ ಮೇಲೆ ಮೊಬೈಲ್ ಹಿಡಿಯುತ್ತಾ ಕೂರಬಾರದು. ಮೊಬೈಲ್ ಪಕ್ಕಕ್ಕೆ ಇಟ್ಟು ಸಂಗಾತಿಯ ಜೊತೆಗೆ ಮಾತನಾಡಬೇಕು, ಇಲ್ಲದಿದ್ದರೆ ಮೊಬೈಲ್ ಅಭ್ಯಾಸ ನಿಮ್ಮಿಬ್ಬರ ನಡುವಿನ ಸಂಬಂಧ ದೂರಾಗುವುದು. ನೀವು ಬೆಡ್ರೂಂನೊಳಗೆ ಹೋದ ತಕ್ಷಣ ಮೊಬೈಲ್ ಬಂದ್ ಮಾಡಿ, ರೀಲ್ಸ್ ನೋಡುವುದು, ಸೋಷಿಯಲ್ ಮೀಡಿಯಾ ನೋಡುವುದು ಮಾಡುವುದಕ್ಕಿಂತ ಸಂಗಾತಿ ಜೊತೆ ಮಾತನಾಡಿ, ಆ ದಿನ ಏನೇನು ಆಯ್ತು ಎಂದು ಅವರ ಜೊತೆ ಹೇಳಿ, ಇವೆಲ್ಲಾ ನಿಮ್ಮಿಬ್ಬರ ನಡುವಿನ ಬಾಂಧವ್ಯ ಗಟ್ಟಿಯಾಗಿಸುತ್ತಾ ಹೋಗುತ್ತೆ. 

ಇಬ್ಬರ ನಡುವೆ ಮಾತುಕತೆ ತುಂಬಾನೇ ಕಡಿಮೆ:
ನೀವು ಎಷ್ಟೇ ಸೈಲೆಂಟ್ ವ್ಯಕ್ತಿಯಾದರೂ ಸಂಗಾತಿ ಜೊತೆಗೆ ಮಾತನಾಡಲೇ ಬೇಕು. ಸಂಗಾತಿ ಜೊತೆ ಮೌನವಾಗಿರುವುದು ನಿಮ್ಮಿಬ್ಬರ ಸಂಬಂಧವನ್ನು ದುರ್ಬಲವಾಗಿರುತ್ತದೆ. ಇಬ್ಬರ ನಡುವೆ ಸಂವಹನ ಕಡಿಮೆಯಾದಷ್ಟೂ ಸಂಬಂಧ ದುರ್ಬಲವಾಗುವುದು.

ಇಬ್ಬರು ಭಾವನೆಗಳನ್ನು ಶೇರ್ ಮಾಡದೆ ಇರುವುದು:
ಗಂಡ-ಹೆಂಡತಿ ನಡುವೆ ಬಾಂಧವ್ಯ ತುಂಬಾ ಚೆನ್ನಾಗಿರಲು ಇಬ್ಬರು ತಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳಬೇಕು, ಭಾವನೆ ಹಂಚಿಕೊಳ್ಳುವುದು ಕಡಿಮೆಯಾಗುತ್ತಿದ್ದಂತೆ ಇಬ್ಬರ ನಡುವೆ ಅಂತರ ಹೆಚ್ಚಾಗಲಿದೆ. ಅವನ ಕಷ್ಟ-ಸುಖ ಇವಳು ಕೇಳಬೇಕು, ಇವಳ ಕಷ್ಟ-ಸುಖ ಅವನು ಕೇಳಬೇಕು ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಇದು ತುಂಬಾನೇ ಸಹಾಯ ಮಾಡುತ್ತೆ.

ದೈಹಿಕ ಆಸಕ್ತಿ ತೋರದೆ ಇರುವುದು:
ಒಬ್ಬ ಸಂಗಾತಿ ಆಸಕ್ತಿ ವ್ಯಕ್ತಪಡಿಸಿದಾಗ ಮತ್ತೊಬ್ಬರು ಅದಕ್ಕೆ ಸ್ಪಂದಿಸದೆ ನಿರಾಸಕ್ತಿ ತೋರುವುದು ಮಾಡಿದರೆ ಇದು ಸಂಸಾರದಲ್ಲಿ ಸಮಸ್ಯೆಯನ್ನುಂಟು ಮಾಡುತ್ತದೆ. ನನಗೆ ಆಸಕ್ತಿ ಇಲ್ಲ ಎಂದು ಹೇಳುವ ಬದಲಿಗೆ ಸಂಗಾತಿಯ ಮನಸ್ಸು ಅರಿಯುವುದು ಒಳ್ಳೆಯ ಸಂಬಂಧದ ಲಕ್ಷಣವಾಗಿದೆ. ವೈವಾಹಿಕ ಬದುಕಿನಲ್ಲಿ ಲೈಂಗಿಕ ತೃಪ್ತಿ ಕೂಡ ಮುಖ್ಯ ಎಂಬುವುದನ್ನು ಮರೆಯದಿರಿ. 

ಕೋಪದಿಂದ ಮಲಗುವುದು:
ಗಂಡ-ಹೆಂಡತಿ ಸಂಬಂಧ ಉಂಡು ಮಲಗುವ ತನಕ ಎಂಬ ಮಾತಿದೆ, ಆದರೆ ಎಷ್ಟೋ ದಂಪತಿಗಳು ತಿಂಗಳುಗಟ್ಟಲೆ ತಮ್ಮ ಕೋಪ ಮುಂದುವರೆಸಿಕೊಂಡು ಹೋಗುತ್ತಾರೆ. ಕೋಪ ಬರಲೇಬಾರದು ಅಂತಲ್ಲ, ಏನ ಕೋಪ, ಅಸಮಧಾನವಿದ್ದರೂ ಅದನ್ನು ಬಗೆಹರಿಸಲು ಪ್ರಯತ್ನಿಸಬೇಕು, ಮಲಗುವ ಮುನ್ನ ಪ್ರೀತಿಯಿಂದ ಅಪ್ಪುಗೆ ನೀಡಿ ಮಲಗಬೇಕು.