ಅನೇಕ ಮಂದಿ ಜನರು ತೆಂಗಿನಕಾಯಿ ಜುಟ್ಟು ಮತ್ತು ಸಿಪ್ಪೆ ಸುಲಿಯಲು ಕಷ್ಟ ಪಡುತ್ತಾರೆ. ಸರಿಯಾದ ಸಾಧನಗಳನ್ನು ಬಳಸುವ ಮೂಲಕ ಸುಲಭವಾಗಿ ತೆಂಗಿನಕಾಯಿ ಜುಟ್ಟು ಬಿಡಿಸಬಹುದಾಗಿದೆ. ಸಾಮಾನ್ಯವಾಗಿ ತೆಂಗಿನಕಾಯಿಯನ್ನು ಸಾಂಬಾರ್, ಚಟ್ನಿ, ಗೊಜ್ಜು, ಪಲ್ಯ, ಮಿಠಾಯಿ ಹೀಗೆ ನಾನಾ ರೀತಿಯ ಅಡುಗೆಗಳಿಗೆ ಬಳಸಲಾಗುತ್ತದೆ. ಅದರಲ್ಲೂ ನಾನ್ವೆಜ್ ಭಕ್ಷ್ಯಕ್ಕೆ ತೆಂಗಿನಕಾಯಿ ಬಳಸದೇ ಸಾಕಷ್ಟು ಮಹಿಳೆಯರು ಅಡುಗೆಯನ್ನೇ ಮಾಡುವುದಿಲ್ಲ. ಏಕೆಂದರೆ ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ತಲೆನೋವಿನ ಕೆಲಸವೆಂದರೆ ತೆಂಗಿನ ಜುಟ್ಟು ಮತ್ತು ಸಿಪ್ಪೆ ಸುಲಿಯುವುದು. ಹೌದು, ಅಡುಗೆ ಮಾಡಿದಷ್ಟು ಸುಲಭವಲ್ಲ ತೆಂಗಿನ ಜುಟ್ಟು ಸುಲಿಯುವುದು. ಅನೇಕ ಮಂದಿ ತೆಂಗಿನ ಜುಟ್ಟು ಸುಲಿಯಲು ಹರಸಾಹಸ ಪಡುತ್ತಾರೆ. ಆದರೆ ಕೆಲವು ಸಿಂಪಲ್ ವಿಧಾನಗಳು ಮತ್ತು ಸರಿಯಾದ ಸಾಧನಗಳನ್ನು ಉಪಯೋಗಿಸುವ ಮೂಲಕ ಹೆಚ್ಚು ಶ್ರಮವಿಲ್ಲದೇ ಸುಲಭವಾಗಿ ತೆಂಗಿನ ಜುಟ್ಟನ್ನು ಸುಲಿಯಬಹುದಾಗಿದೆ. ತೆಂಗಿನ ಸಿಪ್ಪೆಯನ್ನು ಸುಲಭವಾಗಿ ತೆಗೆಯಲು ಬಳಸುವ ಸಾಂಪ್ರದಾಯಿಕ ವಿಧಾನ ಮತ್ತು ಸುಧಾರಿತ ಆಧುನಿಕ ವಿಧಾನದ ವಿವರಗಳು ಇಲ್ಲಿವೆ ನೋಡಿ. ತೆಂಗಿನ ಜುಟ್ಟು ತೆಗೆಯಲು ಸರಿಯಾದ ವಿಧಾನಗಳು: ತೆಂಗಿನ ಜುಟ್ಟು ಸುಲಿಯಲು ಮಚ್ಚು/ದೊಡ್ಡ ಚಾಕು ಇದ್ದರೆ ಸಾಕು. ಗ್ರಾಮೀಣ ಪ್ರದೇಶಗಳಲ್ಲಿ ತೆಂಗಿನಕಾಯಿ ಜುಟ್ಟು ತೆಗೆಯಲು ಜನರು ಹೆಚ್ಚಾಗಿ ಬಳಸುವ ಸಾಂಪ್ರದಾಯಿಕ ವಿಧಾನ ಇದಾಗಿದೆ. ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು